ಸಾವ್ಯ, ಡಿ. 31 : ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಟ್ರಸ್ಟ್ ಗುಳ್ಳೂಟ್ಟು – ಸಾವ್ಯ (ರಿ.) ಆಶ್ರಯದಲ್ಲಿ 35ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜ್ಯೋತ್ಸವವು ಜನವರಿ 01ನೇ ಗುರುವಾರದಂದು ಜರುಗಲಿದೆ. ಗಣಹೋಮ ಮತ್ತು ಅಶ್ವತ್ಥ ಪೂಜೆಯೊಂದಿಗೆ ಆರಂಭಗೊಂಡು ಭಜನಾ ಕಾರ್ಯಕ್ರಮವು ನಡೆಯಲಿದೆ. ಆ ಬಳಿಕ ಮಧ್ಯಾಹ್ನ ಗಂಟೆ 12:30ಕ್ಕೆಮಹಾಪೂಜೆ ಹಾಗೂ ಮಧ್ಯಾಹ್ನ ಗಂಟೆ 1 ಗಂಟೆಯಿಂದ ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಗಂಟೆ 6:00ರಿಂದ ಮಣಿಕಂಠ ಭಜನಾ ಮಂಡಳಿ, ಸಾವ್ಯ ತಂಡದ ಮಕ್ಕಳಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 8:30ಕ್ಕೆ ಮಹಾಪೂಜೆ, ರಾತ್ರಿ ಗಂಟೆ 9:00ಕ್ಕೆ ಉಪಹಾರ, ರಾತ್ರಿ ಗಂಟೆ 9:30ರಿಂದ ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಸಸಿಹಿತ್ಲು ಇವರಿಂದ ಪುಣ್ಣಮೆದ ಪೊಣ್ಣು, ರಂಗಸ್ಥಳ, ಮುಗುರುಮಲ್ಲಿಗೆ, ಭಾಗ್ಯವಂತೆರ್ ಖ್ಯಾತಿಯ ದೇವದಾಸ್ ಈಶ್ವರಮಂಗಲರವರ 98ನೇ ಕಲಾಕೃತಿ ಬಂಟಮಲೆ ಭಾರ್ಗವಿ ಎಂಬ ಕೌತುಕಮಯ ನವರಸ ಭರಿತ ಹಾಸ್ಯಮಯ ತುಳು ಕಥಾನಕ ಪ್ರದರ್ಶನಗೊಳ್ಳಲಿದೆ.
ಅದೇ ರೀತಿಯಲ್ಲಿ ಜನವರಿ 11ನೇ ಆದಿತ್ಯವಾರದಂದು ಬೆಳಿಗ್ಗೆ 8-00 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಶ್ರೀ ನಾರಾಯಣ ಗುರುಸ್ವಾಮಿ ಇವರ ನೇತೃತ್ವದಲ್ಲಿ ಇರುಮುಡಿ ಕಟ್ಟಿ ಶಬರಿಮಲೆ ಯಾತ್ರೆ ಹೊರಡಲಿದ್ದಾರೆ.


