ಶಿರ್ಲಾಲು : ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ( ರಿ.) ಹಾಗೂ ಜಂಟಿ ಸಂಘಟನಾ ಸಮಿತಿ ವತಿಯಿಂದ “ಆಟಿದ ಅಟಿಲ್” ಕಾರ್ಯಕ್ರಮ

ಶಿರ್ಲಾಲು, ಆ. 05 : ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ( ರಿ ) ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ, ಯುವ ವಾಹಿನಿ ಸಂಚಲನ ಸಮಿತಿ ಶಿರ್ಲಾಲು ಕರಂಬಾರು ಜಂಟಿ ಸಂಘಟನೆ ವತಿಯಿಂದ ಆಟಿದ ಅಟಿಲ್ ಕಾರ್ಯಕ್ರಮ ಶಿರ್ಲಾಲು ನವೋದಯ ಸಭಾಭವನದಲ್ಲಿ ನಡೆಯಿತು.

Advertisement

ಜಂಟಿ ಸಂಘಟನೆಯ ಅಧ್ಯಕ್ಷರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಂ. ಕೆ ಪ್ರಸಾದ್ ಮಾತನಾಡಿ, ಆಟಿ ತಿಂಗಳ ಮಹತ್ವವನ್ನು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶಿರ್ಲಾಲು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಇದರ ಅಧ್ಯಕ್ಷ ಸದಾಶಿವ ಪೂಜಾರಿ ಊರ ಇವರು ಮಾತನಾಡಿ ಸಂಘದ ಮುಂದಿನ ಸೇವಾ ಚಟುವಟಿಕೆಗಳ ಬಗ್ಗೆ ತಿಳಿಸಿ ಮುಂದೆ ನಡೆಯುವ ಎಲ್ಲಾ ಕಾರ್ಯಕ್ರಮಕ್ಕೆ ಸಹಕಾರವನ್ನು ಕೋರಿದರು.

ಮಹಿಳಾ ಬಿಲ್ಲವ ವೇದಿಕೆಯ ಸದಸ್ಯರು ಆಟಿ ತಿಂಗಳಲ್ಲಿ ಮಾಡುವ ಸುಮಾರು 26 ಬಗೆಯ ವಿವಿಧ ತಿಂಡಿ ತಿನಸುಗಳನ್ನು ತಯಾರಿಸಿದ್ದರು. ಕಾರ್ಯಕ್ರಮದಲ್ಲಿ ಮನರಂಜನೆಗೋಸ್ಕರ ಪ್ರವೀಣ್ ಕೋಟ್ಯಾನ್ ಪಾಲನೆ ವಿವಿಧ ಚುಟುಕು ಆಟೋಟ ಸ್ಪರ್ಧೆಗಳನ್ನು ನೆರವೇರಿಸಿದರು. ಸಭೆಯಲ್ಲಿ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಜ್ಞಾನೇಶ್ ಪೂಜಾರಿ ಕಟ್ಟ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷ ಶ್ರೀಮತಿ ಶೋಭಾ ಗೊಣಗುರಿ, ಯುವ ವಾಹಿನಿ ಸಂಚಲನ ಸಮಿತಿ ಅಧ್ಯಕ್ಷ ಯತೀಶ್ ಪೂಜಾರಿ ಉಪಸ್ಥಿತರಿದ್ದರು. ಕುಮಾರಿ ಸಿಂಚನ ಪೂಜಾರಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ರಂಜಿತ್ ಆಜೀರೋಲಿ ಸ್ವಾಗತಿಸಿ, ಹರೀಶ್ ಕಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಶೋಭಾ ಗೊಣಗುರಿ ಧನ್ಯವಾದವಿತ್ತರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಶೀಘ್ರದಲ್ಲಿ 2,000 ರೂ.ಗಿಂತ ಹೆಚ್ಚಿನ UPI ಪಾವತಿ ಮೇಲೆ ಶುಲ್ಕ? ಯಾರಿಗೆ ವಿನಾಯಿತಿ ?

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ: ಧರ್ಮಸ್ಥಳ ದರೋಡೆ ಪ್ರಕರಣ; 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬೆಂಗಳೂರಿನಲ್ಲಿ ಬಂಧನ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಚಲಿಸುತ್ತಿದ್ದ ಆಟೋದಲ್ಲೇ ಹಾವು – ಕ್ಷಣಕಾಲ ಆತಂಕ !

⚠️ Contents are protected on this website.