ಕಾಸರಗೋಡು : ಚಲಿಸುತ್ತಿದ್ದ ಆಟೋದಲ್ಲೇ ಹಾವು – ಕ್ಷಣಕಾಲ ಆತಂಕ !

ಕಾಸರಗೋಡು, ಆ. 05 : ಜಿಲ್ಲೆಯ ಚೇವಾರ್‌ ಪ್ರದೇಶದಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾದೊಳಗೆ ಹಾವು ಕಾಣಿಸಿಕೊಂಡ ಪರಿಣಾಮ ಚಾಲಕ ಹಾಗೂ ಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾದ ಘಟನೆ ನಡೆದಿದೆ.

Advertisement

ಪಿಯೂಸ್ ಎಂಬ ಆಟೋ ಚಾಲಕರು ಎಂದಿನಂತೆ ಪ್ರಯಾಣಿಕರೊಂದಿಗೆ ಆಟೋ ಚಲಾಯಿಸುತ್ತಿದ್ದ ವೇಳೆ, ಏಕಾಏಕಿ ಹಾವು ಅವರ ಕೈ ಮೇಲೆ ಬಿದ್ದಿದೆ. ಇದರಿಂದ ಬೆಚ್ಚಿಬಿದ್ದ ಚಾಲಕರು ಕೂಡಲೇ ಆಟೋವನ್ನು ನಿಲ್ಲಿಸಿದ್ದು, ಹಾವು ಆಟೋರಿಕ್ಷದ ಒಳಗೆ ಸೇರಿಕೊಂಡಿದೆ. ಆಟೋದಲ್ಲಿದ್ದ ಪ್ರಯಾಣಿಕರು ಹಾವನ್ನು ಕಂಡು ಭಯಭೀತರಾದರೂ, ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಹಾವನ್ನು ಪರಿಶೀಲಿಸಿದಾಗ ಅದು ವಿಷರಹಿತ ಕಾಡುಹಾವು ಎಂದು ತಿಳಿದುಬಂದಿದೆ.

ಮಳೆಗಾಲದಲ್ಲಿ ಹಾವುಗಳು ಸುರಕ್ಷಿತ ಆಶ್ರಯಕ್ಕಾಗಿ ವಾಹನಗಳೊಳಗೆ ನುಗ್ಗುವ ಸಾಧ್ಯತೆ ಇರುವುದರಿಂದ, ವಾಹನ ಚಾಲಕರು ಬೆಳಿಗ್ಗೆ ವಾಹನ ಚಾಲನೆಗೆ ಮುನ್ನ ಆಟೋ ಅಥವಾ ಕಾರಿನ ಒಳಭಾಗವನ್ನು ಪರಿಶೀಲಿಸುವುದು ಅಗತ್ಯ ಎಂದು ಸ್ಥಳೀಯರು ಸಲಹೆ ನೀಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದ್ದು, ಮಳೆಗಾಲದಲ್ಲಿ ವಾಹನ ಬಳಸುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂಬ ಸಂದೇಶವನ್ನು ಮತ್ತೊಮ್ಮೆ ನೆನಪಿಸಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಶೀಘ್ರದಲ್ಲಿ 2,000 ರೂ.ಗಿಂತ ಹೆಚ್ಚಿನ UPI ಪಾವತಿ ಮೇಲೆ ಶುಲ್ಕ? ಯಾರಿಗೆ ವಿನಾಯಿತಿ ?

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ: ಧರ್ಮಸ್ಥಳ ದರೋಡೆ ಪ್ರಕರಣ; 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬೆಂಗಳೂರಿನಲ್ಲಿ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಶಿರ್ಲಾಲು : ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ( ರಿ.) ಹಾಗೂ ಜಂಟಿ ಸಂಘಟನಾ ಸಮಿತಿ ವತಿಯಿಂದ “ಆಟಿದ ಅಟಿಲ್” ಕಾರ್ಯಕ್ರಮ

⚠️ Contents are protected on this website.