ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ವೈಭವದ ಸಿರಿಹಬ್ಬ-2026 ಉದ್ಘಾಟನೆ

ಬೆಳ್ತಂಗಡಿ, ಜ. 03 : ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ವೈಭವದ ಸಿರಿಹಬ್ಬ-2026 ಉದ್ಘಾಟನೆ ಕಾರ್ಯಕ್ರಮವು ಸಿರಿ ನ್ಯೂ ಇಂಡಸ್ಟ್ರಿಯಲ್ ಪಾರ್ಕ್ ನಲ್ಲಿ ಜ 3ರಂದು ನಡೆಯಿತು. ಅರಕಲಗೂಡು ತಾಲೂಕು ಮಾಜಿ ಶಾಸಕ,ಪರಿಸರಕ್ಕಾಗಿ ನಾವು ರಾಜ್ಯಾಧ್ಯಕ್ಷ ಎ.ಟಿ ರಾಮಸ್ವಾಮಿ ಸಿರಿಹಬ್ಬ ಉದ್ಘಾಟಿಸಿ ಶುಭ ಕೋರಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ಧನ್ ವಹಿಸಿದ್ದರು. ವೇದಿಕೆಯಲ್ಲಿ ಬೆಳ್ತಂಗಡಿ ಡಿವೈಎಸ್ಪಿ ಸಿ.ಕೆ ರೋಹಿಣಿ,ಖ್ಯಾತ ಸೌಂದರ್ಯ ತಜ್ಞೆ ಉಮಾ ಜಯಕುಮಾರ್,ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ ಜನಾರ್ಧನ್,ಉದ್ಯಮಿ,ಸಿರಿ ಸಂಸ್ಥೆಯ ನಿರ್ದೆಶಕ ರಾಜೇಶ್ ಪೈ,ಪುತ್ತೂರು ಬ್ಯಾಂಕ್ ಆಫ್ ಬರೋಡ ಪ್ರಾದೇಶಿಕ ಮುಖ್ಯಸ್ಥರಾದ ಸಾಯಿ ಗಣೇಶ್ ಉಜ್ಜಿನ,ಉದ್ಯಮಿ ನರಸಿಂಹ ಪೈ ಉಜಿರೆ ಉಪಸ್ಥಿತರಿದ್ದರು.

ಸಿರಿ ಸಂಸ್ಥೆಯ ಆಹಾರ ಗೋದಾಮು ಜೀವನ್ ಕುಮಾರ್,ಸೇಲ್ಸ್ ಆಫೀಸರ್ ಮೌನೇಶ್ ಬಡಿಗೇರ್ ಕಾರ್ಯಕ್ರಮ ನಿರೂಪಿಸಿದರು. ಸಿರಿ ಕ್ಲಬ್ ಪ್ರಧಾನ ಸಂಚಾಲಕ ಪ್ರಸನ್ನ ಯು, ಅಧ್ಯಕ್ಷೆ ಹರ್ಷಿತಾ,ಪ್ರ.ಕಾರ್ಯದರ್ಶಿ ವಿನ್ಸೆಂಟ್ ಲೋಬೋ ಸಹಕರಿಸಿದರು. ಸಿರಿ ಕ್ಲಬ್ ನಿಕಟ ಪೂರ್ವಾಧ್ಯಕ್ಷೆ ವಸಂತಿ ವಂದಿಸಿದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ವಿದೇಶ

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

ರಾಜ್ಯ / ದೇಶ

ಫೆ.26ಕ್ಕೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಭಾರತಕ್ಕೆ ಭೇಟಿ

ಕ್ರೀಡೆ, ತಾಲೂಕು, ಬೆಳ್ತಂಗಡಿ

ಬಂಗಾಡಿ : ಯುವ ಸಂಗಮ ಸೇವಾ ಸಮಿತಿ ಬೆಳ್ತಂಗಡಿ ವತಿಯಿಂದ “ಯುವ ಸಂಗಮ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾಟ

⚠️ Contents are protected on this website.