ಶಿವಮೊಗ್ಗ : ಪತ್ನಿ ಜೊತೆ ಅನೈತಿಕ ಸಂಬಂಧದ ಶಂಕೆ – ತಮ್ಮನನ್ನು ಕೊಂದು, ಹೂತು ಹಾಕಿದ್ದ ಅಣ್ಣ !

ಶಿವಮೊಗ್ಗ, ಡಿ. 18 : ಪತ್ನಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಅಣ್ಣನೊಬ್ಬ ತನ್ನ ತಮ್ಮನನ್ನೇ ಹತ್ಯೆಗೈದು ತೋಟದಲ್ಲಿ ಹೂತುಹಾಕಿದ ಘಟನೆ ಶಿವಮೊಗ್ಗದ ಸೊರಬ ತಾಲೂಕಿನ ಜೇಡಗೇರಿ ಗ್ರಾಮದಲ್ಲಿ ನಡೆದಿದೆ. ರಾಮಚಂದ್ರ (28) ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ಅಣ್ಣ ಮಾಲತೇಶನೇ ಆರೋಪಿಯಾಗಿದ್ದಾನೆ.

Advertisement

ಮಿಸ್ಸಿಂಗ್​​ ಕೇಸ್​​ ಬೆನ್ನತ್ತಿ ತನಿಖೆ ನಡೆಸಿದ ಪೊಲೀಸರು ತಮ್ಮನನ್ನು ಕೊಂದು ಅಮಾಯಕನಂತೆ ನಟಿಸುತ್ತಿದ್ದ ಅಣ್ಣನ ಕಳ್ಳಾಟವನ್ನು ಕುಟುಂಬದ ಎದುರು ಬಹಿರಂಗಪಡಿಸಿದ್ದಾರೆ. ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ರಾಮಚಂದ್ರ ಬಗ್ಗೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ತನಿಖೆಗೆ ಮುಂದಾದಾಗ ಅಣ್ಣನ ಕೊಲೆ ಪ್ರಕರಣ ಬಯಲಾಗಿದೆ. ಪತ್ನಿ ಜೊತೆಗಿನ ಅನೈತಿಕ ಸಂಬಂಧ ಕಾರಣ ರಾಮಚಂದ್ರನನ್ನು ಕೊಂದ ಮಾಲತೇಶ್​​, ಆತನನ್ನು ತೋಟದಲ್ಲಿ ಹೂತು ಹಾಕಿರೋದು ಗೊತ್ತಾಗಿದೆ. ಮಾಹಿತಿಯ ಆಧಾರದಲ್ಲಿ ತೋಟದಲ್ಲಿ ಗುಂಡಿ ತೆಗೆದು ಪರಿಶೀಲನೆ ನಡೆಸಿದಾಗ ರಾಮಚಂದ್ರನ ಶವ ಪತ್ತೆಯಾಗಿದೆ.

ಹೆಂಡತಿ ಜೊತೆಗೆ ತಮ್ಮ ರಾಮಚಂದ್ರನ ಅಕ್ರಮ ಸಂಬಂಧ ವಿಷಯಕ್ಕೆ ಅಣ್ಣ ಮಾಲತೇಶ್​​ ಸಿಟ್ಟಾಗಿದ್ದ. ಹೀಗಾಗಿ ಆತನ ಕೊಲೆಗೆ ಪ್ಲ್ಯಾನ್​​ ಮಾಡಿದ್ದ ಈತ, ಬೇಗ ಮದುವೆಯಾಗಲೆಂದು ಪೂಜೆ ನೆಪದಲ್ಲಿ ಜೇಡಿಗೆರೆ ಬಳಿ ತಾನು ಕೆಲಸ ಮಾಡುತ್ತಿದ್ದ ತೋಟಕ್ಕೆ ರಾಮಚಂದ್ರನನ್ನು ಕೆರೆದುಕೊಂಡು ಹೋಗಿದ್ದ. ಪೂಜೆ ನೆಪದಲ್ಲಿ ತಮ್ಮನಿಗೆ ಸರಿಯಾಗಿ ಮದ್ಯ ಕುಡಿಸಿ, ನಂತರ ಕಂಬಕ್ಕೆ ಕಟ್ಟಿ ಆತನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಕೊಲೆಗೂ ಮೊದಲೇ ಶವ ಹೂತು ಹಾಕಲು ಗುಂಡಿ ತೋಡಿ ಇಟ್ಟಿದ್ದ. ಬಳಿಕ ಯಾರಿಗೂ ಗೊತ್ತಾಗದಂತೆ ಶವವನ್ನು ಗುಂಡಿಯಲ್ಲಿ ಹೂತು ಹಾಕಿದ್ದ. ರಾಮಚಂದ್ರ ನಾಪತ್ತೆ ಬಗ್ಗೆ ಕುಟುಂಬ ಆತಂಕದಲ್ಲಿದ್ದರೂ ತಾನು ಅಮಾಯಕ ಎಂಬ ರೀತಿ ಓಡಾಡಿಕೊಂಡಿದ್ದ. ಆದರೆ ಮೊಬೈಲ್​​ ಟವರ್​​ ಲೊಕೇಶನ್​​ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿದಾಗ ಕೊಲೆ ವಿಚಾರ ಬಯಲಾಗಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಅಮೆರಿಕದಲ್ಲಿ ಭಾರಿ ಹಿಮಪಾತ: 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ರಜೆ

ರಾಜ್ಯ / ದೇಶ

ಫೆ.26ಕ್ಕೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಭಾರತಕ್ಕೆ ಭೇಟಿ

ಕ್ರೀಡೆ, ತಾಲೂಕು, ಬೆಳ್ತಂಗಡಿ

ಬಂಗಾಡಿ : ಯುವ ಸಂಗಮ ಸೇವಾ ಸಮಿತಿ ಬೆಳ್ತಂಗಡಿ ವತಿಯಿಂದ “ಯುವ ಸಂಗಮ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾಟ

⚠️ Contents are protected on this website.