ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

ಉಪ್ಪಿನಂಗಡಿ, ಜು. 29 : ನಿಂತಿದ್ದ ಟಿಪ್ಪರೊಂದರ ಹಿಂಬದಿಗೆ ಕಾರೊಂದು ಢಿಕ್ಕಿಯಾಗಿ ಕಾರಿನಲ್ಲಿದ್ದ 4 ವರ್ಷದ ಮಗು ಸೇರಿದಂತೆ ಐವರು ಗಾಯಗೊಂಡ ಘಟನೆ ಪೆರ್ನೆಯ ಮೈರಕಟ್ಟೆ ಎಂಬಲ್ಲಿ ಜು.28ರಂದು ನಡೆದಿದೆ.

Advertisement

ಕಾರಿನಲ್ಲಿದ್ದ ಚಾಲಕ ಮೊಹಮ್ಮದ್ ಫಾರೂಕ್ (31), ಪ್ರಯಾಣಿಕರಾದ ಫಾತಿಮತ್ ತಸ್ಪಿಯಾ (25), ಜುಲೈಕಾ (52), ಮಹಮ್ಮದ್ ಅಫ್ವಾನ್ (15) ಹಾಗೂ ಮಹಮ್ಮದ್ ಇಲ್ಹಾನ್ (4) ಗಾಯಗೊಂಡವರು. ಮೂಲತಃ ಫರಂಗಿಪೇಟೆಯವರಾದ ಇವರು ಫರಂಗಿಪೇಟೆ ಕಡೆಯಿಂದ ಉಪ್ಪಿನಂಗಡಿ ಕಡೆ ಸಂಚರಿಸುವಾಗ ಈ ದುರ್ಘಟನೆ ನಡೆದಿದೆ.

ಮೈರಕಟ್ಟೆ ಎಂಬಲ್ಲಿ ಹೆದ್ದಾರಿ ಬದಿ ಟಿಪ್ಪರೊಂದು ನಿಂತಿದ್ದು, ಕಾರು ಹಿಂಬದಿಯಿಂದ ಬಂದು ಟಿಪ್ಪರ್‍ಗೆ ಢಿಕ್ಕಿಯಾಗಿದೆ. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ದಾವಣಗೆರೆ : 11 ತಿಂಗಳ ಮಗು ದಿಢೀರ್ ಸಾವು – ಆಸ್ಪತ್ರೆ ವಿರುದ್ಧ ಅವಧಿ ಮುಗಿದ ಔಷಧಿ ನೀಡಿದ ಆರೋಪ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ದಿಡುಪೆ ಫಾಲ್ಸ್ ಬಳಿ ವಾಚರ್ ಗೆ ಹಲ್ಲೆ, ಹಣ ದೋಚಿ ಪರಾರಿ – ಪ್ರಕರಣ ದಾಖಲು !

⚠️ Contents are protected on this website.