ತಿರುಮಲದಲ್ಲಿ ಭಕ್ತರಿಗೆ ಗುಡ್ ನ್ಯೂಸ್‌ : ಇನ್ಮುಂದೆ ಸರತಿ ಸಾಲಿನಲ್ಲೇ ಪ್ರಸಾದ ವಿತರಣೆ – ಟಿಟಿಡಿ ನಿರ್ಧಾರ !

ಹೈದರಾಬಾದ್, ಆ. 08 : ತಿರುಮಲ ತಿರುಪತಿ ದೇಗುಲದಲ್ಲಿ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುವ ಭಕ್ತರಿಗೆ ಪ್ರಸಾದ ವಿತರಣೆ ಮತ್ತಷ್ಟು ಸುಲಭವಾಗಲಿದೆ. ಭಕ್ತರ ಅನುಕೂಲಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನ ಸಮಿತಿ ಹೊಸ ‘ಮೂವಿಂಗ್‌ ಟೇಬಲ್‌’ ವ್ಯವಸ್ಥೆಯನ್ನು ಪರಿಚಯಿಸಿದೆ. ಪ್ರಸಾದ ಕೌಂಟರ್‌ಗಳಲ್ಲಿ ಉಂಟಾಗುವ ಜನಸಂದಣಿಯನ್ನು ಕಡಿಮೆ ಮಾಡುವುದರ ಜೊತೆಗೆ, ಭಕ್ತರಿಗೆ ತ್ವರಿತವಾಗಿ ಪ್ರಸಾದ ತಲುಪಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

Advertisement

ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಮೂವಿಂಗ್‌ ಟೇಬಲ್‌ ಅನ್ನು ವಿನ್ಯಾಸಗೊಳಿಸಿ ಅಳವಡಿಸಲಾಗಿದೆ. ಸುಮಾರು 7 ಮೀಟರ್ ಉದ್ದದ ಈ ಮೇಜು ಕನ್ವೇಯರ್‌ ಬೆಲ್ಟ್‌ನಂತೆ ನಿರಂತರವಾಗಿ ಚಲಿಸುತ್ತದೆ. ಸಿಬ್ಬಂದಿ ಪ್ರಸಾದದ ತಟ್ಟೆಗಳನ್ನು ಮೇಜಿನ ಮೇಲೆ ಇರಿಸಿದ ಬಳಿಕ, ಸರತಿ ಸಾಲಿನಲ್ಲಿ ನಿಂತಿರುವ ಭಕ್ತರು ತಾವು ನಿಂತ ಸ್ಥಳದಲ್ಲೇ ಪ್ರಸಾದವನ್ನು ಪಡೆದುಕೊಳ್ಳಬಹುದು.

Advertisement

ಈ ಹಿಂದೆ ಪ್ರಾಯೋಗಿಕವಾಗಿ ಮೂವಿಂಗ್‌ ಟೇಬಲ್‌ ವ್ಯವಸ್ಥೆಯನ್ನು ಅಳವಡಿಸಿ ಪರೀಕ್ಷಿಸಲಾಗಿತ್ತು. ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೀಗ ಈ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲು TTD ನಿರ್ಧರಿಸಿದೆ. ಮುಂದಿನ ಹಂತದಲ್ಲಿ ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌-1/2, ನಾರಾಯಣಗಿರಿ ಶೆಡ್‌ ಹಾಗೂ ಮುಖ್ಯ ಸರತಿ ಸಾಲುಗಳಲ್ಲಿ ಮೂವಿಂಗ್‌ ಟೇಬಲ್‌ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.

ಈ ಮೊದಲು ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದ ಭಕ್ತರು ಪ್ರಸಾದ ಪಡೆಯಲು ಪ್ರತ್ಯೇಕವಾಗಿ ಕೌಂಟರ್‌ಗೆ ತೆರಳಬೇಕಾಗಿತ್ತು. ಇದರಿಂದ ಕೌಂಟರ್‌ಗಳ ಬಳಿ ಜನಸಂದಣಿ ಹೆಚ್ಚಾಗುತ್ತಿತ್ತು. ಆದರೆ ಹೊಸ ವ್ಯವಸ್ಥೆಯಿಂದ ಭಕ್ತರು ಸರತಿ ಸಾಲಿನಿಂದ ಹೊರಬರದೆಯೇ ತಮ್ಮ ಸ್ಥಳದಲ್ಲೇ ಪ್ರಸಾದ ಪಡೆಯಲು ಸಾಧ್ಯವಾಗಲಿದೆ. ಭಕ್ತರ ಸಮಯ ಉಳಿತಾಯ, ಜನಸಂದಣಿ ನಿಯಂತ್ರಣ ಹಾಗೂ ಪ್ರಸಾದ ವಿತರಣೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ TTD ಕೈಗೊಂಡಿರುವ ಈ ಹೊಸ ವ್ಯವಸ್ಥೆ ಗಮನ ಸೆಳೆದಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ದಾವಣಗೆರೆ : ನೂತನ ಸಚಿವರ ಸ್ವಾಗತ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ – ರೈತರೋರ್ವ 1 ಲಕ್ಷ ಹಣ ಕಳವು !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ವಿಧಾನ ಪರಿಷತ್ ಸದಸ್ಯತ್ವದ ಅವಧಿ ಯಶಸ್ವಿಯಾಗಿ ಪೂರೈಸಿದ ಪ್ರತಾಪ್ ಸಿಂಹ ನಾಯಕ್ ರಿಗೆ ಬಿಜೆಪಿ ಯುವಮೋರ್ಚಾ ವತಿಯಿಂದ ಸನ್ಮಾನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : “ಬೆಸ್ಟ್ ಎಂಎಲ್ಎ” ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜಾರಿಗೆ ಯುವ ಮೋರ್ಚಾ ವತಿಯಿಂದ ಸನ್ಮಾನ

⚠️ Contents are protected on this website.