ವೇಣೂರು : ಪಿಕಪ್ ವಾಹನದಲ್ಲಿ ಅಕ್ರಮ ದನ ಸಾಗಾಟ – ಪ್ರಕರಣವನ್ನು ರದ್ದು ಪಡಿಸಿ ತೀರ್ಪು ನೀಡಿದ ಹೈಕೋರ್ಟ್

ವೇಣೂರು : ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದು ಪಡಿಸಿದೆ.

Advertisement

2023ರ ಡಿಸೆಂಬರ್ 8ರಂದು ಕರಿಮಣಿಲು ಗ್ರಾಮದ ವೇಣೂರು ಚರ್ಚ್ ಬಳಿಯ ಮೂಡುಬಿದ್ರಿ-ವೇಣೂರು ಸಾರ್ವಜನಿಕ ರಸ್ತೆಯಲ್ಲಿ ಎಸ್.ಬಿ. ಶ್ರೀ ಶೈಲ ಮತ್ತು ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮೂಡುಬಿದ್ರಿ ಕಡೆಯಿಂದ ರಂಗೇಗೌಡ ಎ.ಆರ್ ಎಂಬವರು ಪಿಕಪ್ ವಾಹನದಲ್ಲಿ ಎರಡು ದನಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ವೇಣೂರು ಠಾಣಾ ಎಸ್‌ಐ ಶ್ರೀಶೈಲ ಅವರು ಆರೋಪಿ ವಿರುದ್ಧ ಬೆಳ್ತಂಗಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಬಳಿಕ ಈ ಪ್ರಕರಣವನ್ನು ರದ್ದುಗೊಳಿಸುವಂತೆ ಆರೋಪಿ ರಂಗೇಗೌಡ ಎ.ಆರ್. ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಮೊಹಮ್ಮದ್ ನವಾಝ್ ಅವರು ಪ್ರಕರಣ ರದ್ದು ಪಡಿಸಿ ಆದೇಶ ಹೊರಡಿಸಿದ್ದಾರೆ. ಅರ್ಜಿದಾರರ ವರ ವಕೀಲರಾದ ಮಾರುತಿ ತನ್ನಯ್ಯ ನಾಯಕ್, ದೇವಾನಂದ ಕೆ. ಪ್ರಸಾದ್ ಕುಮಾರ್ ಮತ್ತು ವೆಂಕಟೇಶ್ ಪದ್ಮುಂಜ ವಾದಿಸಿದ್ದರು.

Advertisement
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದಿಲ್ಲಿ : ರಾಮಮಂದಿರ ನಿರ್ಮಾಣಕ್ಕಾಗಿ ಬಂದ ದೇಣಿಗೆ ಹಣದಲ್ಲಿ ಅವ್ಯವಹಾರ ನಡೆದಿಲ್ಲ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಭಾರತದ ಅಧಿಕೃತ ನಕ್ಷೆಗಳಲ್ಲಿ ಅರುಣಾಚಲ ಪ್ರದೇಶದ 27 ಸ್ಥಳಗಳ ಸೇರ್ಪಡೆ – ಚೀನಾಗೆ ಶಾಕ್ !

ಕರಾವಳಿ, ಟಾಪ್ ಸುದ್ದಿಗಳು

ಉಡುಪಿ : ಕಾಂಗ್ರೆಸ್ ಮುಖಂಡ ಡೇವಿಡ್ ಶೂಟೌಟ್ ಪ್ರಕರಣ – ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು

⚠️ Contents are protected on this website.