ಪುತ್ತೂರು : ವಿದೇಶದಿಂದ ರಜೆಯಲ್ಲಿ ಊರಿಗೆ ಬಂದಿದ್ದ ಯುವಕ ವಿದ್ಯುತ್ ಶಾಕ್‌ನಿಂದ ಮೃತ್ಯು

Advertisement

ಪುತ್ತೂರು, ಮೇ. 26 : ನಿಡಳ್ಳಿ ಗ್ರಾಮದ ಬೋಳುಂಬುಡೆಯಲ್ಲಿ ವಿದ್ಯುತ್ ಶಾಕ್ ಹೊಡೆದು ನೆಲಕ್ಕೆ ಬಿದ್ದ ಬೇಲೂರು ಮೂಲದ ಯುವಕನೋರ್ವಮೃತಪಟ್ಟ ಘಟನೆ ಮೇ 24ರ ರಾತ್ರಿ ಸಂಭವಿಸಿದೆ.

Advertisement

ಬೇಲೂರಿನ ಅಂಕಿಹಳ್ಳಿ ನಿವಾಸಿ ಜೋಕಿಂ ಪಿಂಟೋ ಅವರ ಪುತ್ರ ರೋಶನ್ ಪಿಂಟೋ (29) ಮೃತಪಟ್ಟ ಯುವಕ.

Advertisement

ಜೋಕಿಂ ಅವರು ಪತ್ನಿ ಇಬ್ಬರು ಮಕ್ಕಳೊಂದಿಗೆ ಅವರ ಮಾವನ ಮನೆ ನಿಡಳ್ಳಿಯ ಬೋಳುಂಬುಡೆಗೆ ಬಂದಿದ್ದರು. ರೋಶನ್ ರಾತ್ರಿ ಸ್ಥಾನ ಮುಗಿಸಿ ಬಟ್ಟೆ ಒಗೆಯುವ ಸ್ಥಳಕ್ಕೆ ಹೋದಾಗ ಅಲ್ಲಿದ್ದ ವಿದ್ಯುತ್ ವಯರ್ ನಿಂದ ಶಾಕ್ ಹೊಡೆದು ನೆಲಕ್ಕೆ ಬಿದ್ದಿರುವುದಾಗಿ ತಿಳಿದುಬಂದಿದೆ.

ಗಂಭೀರ ಗಾಯಗೊಂಡ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಮೃತರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ರಜೆಯಲ್ಲಿ ಊರಿಗೆಬಂದಿದ್ದರು. ಅವರು ತಂದೆ ತಾಯಿ, ತಂಗಿಯನ್ನು ಅಗಲಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ