ಸ್ಮೃತಿ ಬೊಂಬಾಟ್ ಆಟ – ದೀಪ್ತಿ ಶರ್ಮಾ ಬೌಲಿಂಗ್ ಕರಾಮತ್ತಿಗೆ ದಿಕ್ಕಾಪಾಲಾದ ಪಾಕಿಸ್ತಾನ !

ಬರ್ಮಿಂಗ್ ಹ್ಯಾಂ, ಜೂ. 15 : ಸ್ಮೃತಿ ಮಂದಾನ ಅವರ ಆಕರ್ಷಕ ಅರ್ಧಶತಕ ಮತ್ತು ದೀಪ್ತಿ ಶರ್ಮಾ ಅವರ ಮಾಂತ್ರಿಕ ಬೌಲಿಂಗ್ ನ ನೆರವಿನಿಂದ ಪಾಕಿಸ್ತಾನವನ್ನು 64 ರನ್ ಗಳಿಂದ ಸೋಲಿಸಿದ ಭಾರತ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ಕಳೆದ ವರ್ಷವಷ್ಟೇ ಏಕದಿನ ವಿಶ್ವಕಪ್ ನಲ್ಲಿ ಚಾಂಪಿಯನ್ ಆಗಿದ್ದ ಹರ್ಮನ್ ಪ್ರೀತ್ ಕೌರ್ ಪಡೆಗೆ ಈ ಮಹತ್ವದ ಟೂರ್ನಿಯಲ್ಲಿ ಮುಂದುವರಿಯಲು ಬಹಳ ದೊಡ್ಡ ಆತ್ಮವಿಶ್ವಾಸವನ್ನು ತಂದಿತ್ತಿದೆ.

Advertisement

ಬರ್ಮಿಂಗ್ ಹ್ಯಾಂನಲ್ಲಿ ಜೂನ್ 14ರ ಭಾನುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 170 ರನ್ ಪೇರಿಸಿತು. ಇದಕ್ಕುತ್ತರವಾಗಿ ಪಾಕಿಸ್ತಾನ ತಂಡ 17 ಓವರ್ ಗಳಲ್ಲಿ 106 ರನ್ ಗಳಿಗೆ ಸರ್ವಪತನ ಕಂಡಿತು. 5 ವಿಕೆಟ್ ಕಬಳಿಸಿದ ದೀಪ್ತಿ ಶರ್ಮಾ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಪಂದ್ಯದಲ್ಲಿ ಭಾರತದ ಆಟಗಾರ್ತಿಯರು ಪಾಕಿಸ್ತಾನದ ಆಟಗಾರ್ತಿಯರೊಂದಿಗೆ ಹಸ್ತಲಾಘವ ನಿರಾಕರಣೆ ಅಭಿಯಾನವನ್ನು ಈ ಪಂದ್ಯದಲ್ಲೂ ಮುಂದುವರಿಸಿದರು.

ಸವಾಲಿನ ಮೊತ್ತ ಬೆಂಬತ್ತಿ ಹೊರಟ ಪಾಕಿಸ್ತಾನ ತಂಡಕ್ಕೆ ಸ್ಪಿನ್ನರ್ ಗಳಾದ ದೀಪ್ತಿ ಶರ್ಮಾ ಮತ್ತು ಶ್ರೀಚರಣಿ ಕಬ್ಬಿಣದ ಕಡಲೆಯಾದರು. ದೀಪ್ತಿ ಶರ್ಮಾ ಅವರು 5 ವಿಕೆಟ್ ಕಬಳಿಸಿದರೆ, ಶ್ರೀ ಚರಣಿ 3 ವಿಕೆಟ್ ತಮ್ಮದಾಗಿಸಿಕೊಂಡರು. ಆರಂಭಿಕ ಆಟಗಾರ್ತಿ ಮುನೀಬಾ ಅಲಿ(35 ಎಸೆತದಲ್ಲಿ 41) ಅವರನ್ನು ಹೊರತುಪಡಿಸಿದರೆ ಬೇರಾವ ಬ್ಯಾಟರ್ ಸಹ ಭಾರತದ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು.

ಸ್ಮೃತಿ- ಕೌರ್ ಜೊತೆಯಾಟ

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡಿದ್ದ ಭಾರತದ ಮೊತ್ತ 18 ಆಗುವಷ್ಟರಲ್ಲಿ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಮತ್ತು 3ನೇ ಕ್ರಮಾಂಕದ ಬ್ಯಾಟರ್ ಜೆಮಿಮಾ ರೊಡ್ರಿಗಸ್ ಅವರ ವಿಕೆಟ್ ಪಡೆಯುವಲ್ಲಿ ಪಾಕ್ ಬೌಲರ್ ಗಳು ಸಫಲರಾದರು. ಈ ಹಂತದಲ್ಲಿ ಒಂದಾದ ಉಪನಾಯಕಿ ಮತ್ತು ಸ್ಮೃತಿ ಮಂದಾನ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಕುಸಿತವನ್ನು ತಡೆದುದ್ದಲ್ಲದೆ ತಂಡದ ರನ್ ಗಳಿಕೆಗೂ ವೇಗವನ್ನು ತಂದಿತ್ತರು. ಹೀಗಾಗಿ 12.4 ಓವರ್ ಗಳಲ್ಲಿ ತಂಡ 100ರ ಗಡಿಯನ್ನು ದಾಟಿತು.

ಈ ವೇಳೆ ಅರ್ಧಶತಕ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸ್ಮೃತಿ ಮಂದಾನ ಅವರು ರಮೀನ್ ಶಮೀಮ್ ಎಸೆತದಲ್ಲಿ ಫಾತಿಮಾ ಸನಾಗೆ ಕ್ಯಾಚಿತ್ತು ಔಟಾದರು. 44 ಎಸೆತಗಳನ್ನು ಎದುರಿಸಿದ್ದ ಅವರು 9 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 68 ರನ್ ಗಳಿಸಿದರು. ಅವರೊಂದಿಗೆ 91 ರನ್ ಗಳ ಜೊತೆಯಾಟವಾಡಿದ ಹರ್ಮನ್ ಪ್ರೀತ್ ಕೌರ್ ಅವರು 35 ಎಸೆತದಲ್ಲಿ 4 ಬೌಂಡರಿಗಳಿದ್ದ 36 ರನ್ ಗಳಿಸಿ ಫಾತಿಮಾ ಸನಾಗೆ ವಿಕೆಟ್ ಒಪ್ಪಿಸಿದರು. ಪಂದ್ಯದಲ್ಲಿ 1 ರನ್ ಗಳಿಸುತ್ತಲೇ ಅವರು ಮಹಿಳಾ ಟಿ20 ವಿಶ್ವಕಪ್ ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಮಿಥಾಲ್ ರಾಜ್ ಅವರ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು.

ಡೆತ್ ಓವರ್ ಗಳಲ್ಲಿ ರಿಚಾ ಘೋಷ್ ಅವರು ಕೇವಲ 17 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಇದ್ದ 34 ರನ್ ಗಳಿದ್ದರಿಂದ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸುವಂತಾಯಿತು. ಪಾಕ್ ಪರ ಸಾದಿಯಾ ಇಕ್ಬಾಲ್ ಮತ್ತು ಫಾತಿಮಾ ಸನಾ ತಲಾ 2 ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್
ಭಾರತ 20 ಓವರ್ ಗಳಲ್ಲಿ 170/6, ಸ್ಮೃತಿ ಮಂದಾನ 68(44), ಹರ್ಮನ್ ಪ್ರೀತ್ ಕೌರ್ 36(35), ರಿಚಾ ಘೋಷ್ 34(17), ಸಾದಿಯಾ ಇಕ್ಬಾಲ್ 41ಕ್ಕೆ 2, ಫಾತಿಮಾ ಸನಾ 33ಕ್ಕೆ 2.
ಪಾಕಿಸ್ತಾನ 17 ಓವರ್ ಗಳಲ್ಲಿ 106/10, ಮುನೀಬಾ ಅಲಿ 41(35), ಅಲಿಯಾ ರಿಯಾಝ್ 18(17), ಆಯೆಷಾ ಝಫರ್ 12(8), ದೀಪ್ತಿ ಶರ್ಮಾ 10ಕ್ಕೆ 5, ಶ್ರೀ ಚರಣಿ 21ಕ್ಕೆ 3.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಪ್ರಧಾನಿಯವರ ಪೋಸ್ಟ್‌ಗೆ ನಿರ್ಬಂಧ ವಿವಾದ – ಫೇಸ್‌ಬುಕ್ ವಿರುದ್ಧ ಬಿಜೆಪಿ ಆಕ್ರೋಶ !

⚠️ Contents are protected on this website.