ಬೆಳ್ತಂಗಡಿ : ಯುವ ವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ, ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ಅ. 25ರಂದು “ಬೃಹತ್ ರಕ್ತದಾನ ಶಿಬಿರ ಮತ್ತು ವೈದ್ಯಕೀಯ ಶಿಬಿರ”

ಬೆಳ್ತಂಗಡಿ, ಅ. 24 : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ, ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ಬ್ಲಡ್ ಬ್ಯಾಂಕ್, ಮಂಗಳೂರು ಕಣಚೂರು ವೈದ್ಯಕೀಯ ಮಹಾವಿದ್ಯಾಲಯ ಇವರ ಸಹಯೋಗದೊಂದಿಗೆ NET ಗ್ರೂಪ್ ಆಪ್ ಇನ್ಸಿಟ್ಯೂಷನ್, ಜೈನ್ ಪೇಟೆ, ಬೆಳ್ತಂಗಡಿ ಸಹಕಾರದೊಂದಿಗೆ “ಬೃಹತ್ ರಕ್ತದಾನ ಶಿಬಿರ ಮತ್ತು ವೈದ್ಯಕೀಯ ಶಿಬಿರ”, ನೇತ್ರ ಚಿಕಿತ್ಸಾ ಶಿಬಿರ । ಉಚಿತ ಕನ್ನಡಕ ವಿತರಣೆ ಗಾಲಿ ಕುರ್ಚಿ ವಿತರಣೆ | ಸಾಂತ್ವಾನ ನಿಧಿ ವಿತರಣೆ ವಾಟರ್ ಬೆಡ್ ವಿತರಣೆ ಕಾರ್ಯಕ್ರಮವು  ಅ.25ರ ಆದಿತ್ಯವಾರದಂದು NET ಕಾಲೇಜು ಜೈನ್ ಪೇಟೆ, ಬೆಳ್ತಂಗಡಿಯಲ್ಲಿ ನಡೆಯಲಿದೆ.

ಬೃಹತ್ ರಕ್ತದಾನ ಶಿಬಿರ ಮತ್ತು ವೈದ್ಯಕೀಯ ಶಿಬಿರದ ಉದ್ಘಾಟನೆಯು ಪೂರ್ವಾಹ್ನ 9.00ಕ್ಕೆ ನಡೆಯಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಸಚಿವರಾದ ಶ್ರೀ ಯು.ಟಿ ಖಾದ‌ರ್ ಉದ್ಘಾಟಿಸಲಿದ್ದಾರೆ. ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಪಡ್ಪು ಅಧ್ಯಕ್ಷತೆ ವಹಿಸಲಿದ್ದಾರೆ.

ಗಾಲಿ ಕುರ್ಚಿ ವಿತರಣೆ ಮತ್ತು ವಾಟ‌ರ್ ಬೆಡ್ ವಿತರಣೆಯನ್ನು ಬೆಳ್ತಂಗಡಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ  ಶ್ರೀ ರಕ್ಷಿತ್ ಶಿವರಾಂ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿಲರಿದ್ದಾರೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಬೆಳ್ತಂಗಡಿ

ಉಜಿರೆ ಎಸ್‌ಡಿಎಂಐಟಿಯಲ್ಲಿ ಅ. 29ರಿಂದ ‘ಸ್ಪರ್ಧಂ-2026’ ಅಂತರಕಾಲೇಜು ಸ್ಪರ್ಧೋತ್ಸವ – ಅ. 30ರಂದು ಸ್ಟಾರ್ ನೈಟ್

ಟಾಪ್ ಸುದ್ದಿಗಳು, ರಾಜ್ಯ / ದೇಶ

ಮುಂಬೈ : ನೆಪಕ್ಕೆ ರ‍್ಯಾಪಿಡೋ ರೈಡರ್ : ಪ್ರಧಾನಿ ಮೋದಿ ಹತ್ಯೆಗೆ ಜೈಶ್ ಉಗ್ರರೊಂದಿಗೆ ಸಂಚು ರೂಪಿಸುತ್ತಿದ್ದ ಅಖ್ತರ್ ಎಂಬಾತ ಎಟಿಎಸ್ ಬಲೆಗೆ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಕನ್ಯಾಡಿ : ಅಯೋಧ್ಯೆಯ ಕನ್ಯಾಡಿ ಶ್ರೀರಾಮ ಮಠದ ಯೋಜನೆಗೆ ಮಸ್ಕತ್‌ನ ಶ್ರೀರಾಮ ಭಕ್ತರಿಂದ ₹10 ಲಕ್ಷಕ್ಕೂ ಅಧಿಕ ದೇಣಿಗೆ