ಬಂಟ್ವಾಳ :  ಸಜೀಪದ ಕೊಲ್ಯದಲ್ಲಿ ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ ಛಾಯಗ್ರಾಹಕನ ಸಮಯಪ್ರಜ್ಞೆಯಿಂದ ಅಡಿಕೆ ತೋಟ ಸೇಫ್

ಬಂಟ್ವಾಳ, ಮೇ. 04 :  ತಾಲೂಕಿನ ಸಜೀಪ ಮೂಡದ ಗ್ರಾಮದ ಕೊಲ್ಯ ಎಂಬಲ್ಲಿ ಅಡಿಕೆ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ  ನಡೆದಿದೆ.

ಮೇ.3 ರಂದು ರವಿವಾರ ಮದ್ಯ ರಾತ್ರಿ 1 ಗಂಟೆ ಸುಮಾರಿಗೆ ಕೊಲ್ಯ ರಸ್ತೆ ಬದಿಯ ಗಿಡಗಂಟಿಗಳಿಗೆ ಆಕಸ್ಮಿಕವಾಗಿ ಹಚ್ಚಿಕೊಂಡ ಬೆಂಕಿ ಜೋರಾಗಿ ಉರಿಯುತ್ತಾ, ಹತ್ತಿರದ ಅಡಿಕೆ ತೋಟಕ್ಕೆ ಕೂಡ ಆವರಿಸಿದೆ. ಬೆಂಕಿಯ ಜ್ವಾಲೆಯನ್ನು ಕಂಡ ಸ್ಥಳೀಯರು ನಂದಿಸಲು ಪ್ರಯತ್ನಿಸಿದ್ದಾರೆ. ಇದೇ ವೇಳೆ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ಕೊಲ್ಯ ನಿವಾಸಿ ಛಾಯಗ್ರಾಹಕ ಮನೀಶ್ ಪೂಜಾರಿ ಯವರು ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಟ್ರಾಫಿಕ್ ಎಸ್.ಐ.ಆದರ್ಶ್ ರವರಿಗೆ ತಿಳಿಸಿದ್ದು, ಬಳಿಕ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ದಳದವರನ್ನು ಕರೆಸಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬಂದಿದ್ದರಿಂದ ಅಡಿಕೆ ಮರಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.

Advertisement
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.