ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಅಳದಂಗಡಿ ಇದರ ವತಿಯಿಂದ ಮಾರ್ಚ್ 15ರಂದು ಕಾಳು ಮೆಣಸು ಮತ್ತು ಕಾಫಿ ಬೆಳೆಯ ಕೃಷಿ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ

ಅಳದಂಗಡಿ, ಮಾ. 12 : ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಅಳದಂಗಡಿ ಇದರ ವತಿಯಿಂದ ಸಂಘದ ಸುವರ್ಣ ಸಂಭ್ರಮ 2026ರ ಚಾಲನೆಯೊಂದಿಗೆ ಕಾಳು ಮೆಣಸು ಮತ್ತು ಕಾಫಿ ಬೆಳೆಯ ಕೃಷಿ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮವು ಮಾರ್ಚ್ 15ರ ಆದಿತ್ಯವಾರದಂದು ಬೆ. 9.30ಕ್ಕೆ ಅಳದಂಗಡಿ ಕಟ್ಟೂರು ಶ್ರೀ ಶಂಕರ ಭಟ್ ರವರ ತೋಟದಲ್ಲಿ ನಡೆಯಲಿದೆ.

Advertisement

ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರು ಉದ್ಘಾಟಿಸಲಿದ್ದು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ನಿರ್ದೇಶಕರಾದ ಶ್ರೀ ಕುಶಾಲಪ್ಪ ಗೌಡ ಲೋಗೋ ಅನಾವರಣಗೊಳಿಸಲಿದ್ದಾರೆ. ಸಂಘದ ಸದಸ್ಯರಿಗೆ ಉಚಿತವಾಗಿ ಕಾಫಿ ಗಿಡಗಳನ್ನು ಮಂಗಳೂರು ಮೆಸ್ಕಾಂ ಅಧ್ಯಕ್ಷರಾದ ಶ್ರೀ ಕೆ. ಹರೀಶ್ ಕುಮಾರ್ ವಿತರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ). ಅಧ್ಯಕ್ಷರಾದ ಶ್ರೀ ರಾಕೇಶ್ ಹೆಗ್ಡೆ ವಹಿಸಲಿದ್ದಾರೆ ಹಾಗೂ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದಲ್ಲಿ ಐ.ಸಿ.ಎ.ಆರ್. ನಿವೃತ್ತ ಹಿರಿಯ ವಿಜ್ಞಾನಿಗಳಾದ ಡಾ. ಶ್ರೀ ವೇಣುಗೋಪಾಲ್ ಇವರು “ಕಾಳುಮೆಣಸು ನಾಟಿ, ಪೋಷಣೆ, ರೋಗ ನಿರ್ವಹಣೆ” ಮತ್ತು ದ.ಕ ಜಿಲ್ಲೆಯ ಯಶಸ್ವೀ ಕಾಳುಮೆಣಸು ಹಾಗೂ ಕಾಫಿ ಬೆಳೆಗಾರರಾದ ಶ್ರೀ ಅಜಿತ್ ಪ್ರಸಾದ್ ರೈ ಕಾಯರ್ತಡಿ, ಪುತ್ತೂರು ಇವರು “ದ.ಕ ಜಿಲ್ಲೆಯಲ್ಲಿ ಅಡಿಕೆಗೆ ಪರ್ಯಾಯ ಹಾಗೂ ಮಿಶ್ರ ಬೆಳೆಯಾಗಿ ಲಾಭದಾಯಕ ಕಾಫಿ ಕೃಷಿ.” ಹಾಗೂ ಪ್ರಗತಿಪರ ಕೃಷಿಕರಾದ ಶ್ರೀ ಅನಂತಕೃಷ್ಣ ಪಳ್ಳತ್ತಡ್ಕ ಇವರು “ನೀರಾವರಿ, ಆಟೋಮೇಟಿಕ್ ಇರಿಗೇಷನ್ ಮತ್ತು ಫಟಿಗೇಶನ್ ಸಿಸ್ಟಂ” ಬಗ್ಗೆ ವಿಷಯ ಮಂಡಿಸಲಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.