ಬೆಳ್ತಂಗಡಿ : ಕೌಟುಂಬಿಕ ಕಲಹಕ್ಕೆ 6 ಮಂದಿಯ ಹೆಸರು ಪ್ರಸ್ತಾಪಿಸಿ ಮಿತ್ತಬಾಗಿಲಿನ ಅನ್ವರ್ ಆತ್ಮಹತ್ಯೆ

ಬೆಳ್ತಂಗಡಿ, ಆ. 01 : ಕೌಟುಂಬಿಕ ಕಲಹದ ಮುಂದುವರಿದ ಭಾಗವಾಗಿ ಪತ್ನಿ ಮತ್ತು ಮಗುವನ್ನು ಅವರು ತವರು ಮನೆಗೆ ಕರೆದುಕೊಂಡ ಹೋದ ವಿಚಾರವಾಗಿ ಮನನೊಂದ ವ್ಯಕ್ತಿಯೊಬ್ಬ ಮೂಡಬಿದ್ರೆ ಸನಿಹದ ಗಂಟಲ್‌ಕಟ್ಟೆ ಎಂಬಲ್ಲಿ ನೇಣಿಗೆ ಶರಣಾದ ಘಟನೆ ಜು.31 ರಂದು ನಡೆದಿದೆ.

Advertisement

ಮೃತರನ್ನು ಮಿತ್ತಬಾಗಿಲು ಗ್ರಾಮದ ಕಾಜೂರು ನಿವಾಸಿ ಅಬೂಸ್ವಾಲಿಹ್ ಮುಸ್ಲಿಯಾರ್ ಅವರ ಪುತ್ರ ಅನ್ವರ್ ಎಂದು ಗುರುತಿಸಲಾಗಿದೆ. ಇವರು ಗಂಟಲ್‌ಕಟ್ಟೆಯಲ್ಲಿ ನೆಲೆಸಿದ್ದ ಮನೆಯಲ್ಲಿ ಫ್ಯಾನಿಗೆ ನೇಣುಹಾಕಿಕೊಂಡು ಕೃತ್ಯವೆಸಗಿಕೊಂಡಿದ್ದಾರೆ.

ಪತ್ನಿ ಮಕ್ಕಳನ್ನು ದೂರ ಮಾಡಿದ 6 ಮಂದಿಯ ಹೆಸರು ಪ್ರಸ್ತಾಪಿಸಿ ವಾಯ್ಸ್ ಮೆಸೇಜ್

ಆತ್ಮಹತ್ಯಾ ಕೃತ್ಯಕ್ಕೂ ಮುನ್ನ ಅವರು ತನ್ನ ಈ ಸ್ಥಿತಿಗೆ ಆರು ಮಂದಿ ಕಾರಣ ಎಂದು ವಾಯ್ಸ್ ಮೆಸೇಜ್ ಮೂಲಕ ತಿಳಿಸಿದ್ದಾರೆ. ಅವರೇ ಹೇಳುವ ವಾಕ್ಯ ಪ್ರಕಾರ, “ಹೆಂಡತಿ ಅಪ್ಪನನ್ನು, ಅಮ್ಮನನ್ನು, ತಮ್ಮನನ್ನು ಮತ್ತು ಅವಳ ಅಕ್ಕನನ್ನು, ಅವಳ ಅಕ್ಕನ‌ ಗಂಡನನ್ನು, ಅರೆಸ್ಟ್ ಮಾಡಬೇಕು. ನನ್ನ ಸಾವಿಗೆ ಕಾರಣನೇ ಅವರು. ನನ್ನ ಮಗು ನನ್ನಿಂದ ದೂರ ಮಾಡಿದ ಅವರು.‌ನನ್ನ ಸಾವಿಗೆ ಕಾರಣ ಇವರು ನಾಲಕ್ಕು ಜನ. ನನ್ನ ಮಗುವನ್ನು ನನ್ನ ಕೈಯಿಂದ ದೂರ ಮಾಡಿದ್ದ ಈ ನಾಲ್ಕು ಜನ.. ಸೋರಿ.. ಈ ಆರು ಜನ. ನನ್ನ ಹೆಂಡತಿ, ನನ್ನ ಮಗುವನ್ನು ದೂರ ಮಾಡಿದ್ದೇ ಈ ಇವರು. ಈ ಆರು‌ಜನ ಮೇಲೆ ಕೇಸು ಆಗಬೇಕು. ಉಸ್ಮಾನ್ , ಬೀಫಾತಿಮಾ, ಸಫ್ವಾನ್, ಸಿರಾಜ್, ಶಬಾನಾ, ಅಶ್ರಫ್, ಸಿರಾಜ್, ಸಫ್ವಾನ್, ಇವರು. ಈ ಪೈಕಿ ಉಸ್ಮಾನ್, ಬೀಫಾತಿಮಾ ರೆಂಜಾಳದವರು. ಶಬಾನಾ‌ ಮತ್ತು ಅಶ್ರಫ್ ಮಂಚಕಲ್ಲ್ ಶಿರ್ವದಲ್ಲಿ ಮನೆ ಅವರದ್ದು” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಇನ್ನೊಂದು ವಾಯ್ಸ್ ನಲ್ಲಿ ತನ್ನ‌ಒಡಹುಟ್ಟಿದ ಅಕ್ಕನಿಗೆ ಸಂದೇಶ ಕಳುಹಿಸಿ, “ನಾನು ಇಷ್ಟು ದಿನ ನನ್ನ ಮಗುವಿನ ಕರೆಗಾಗಿ ಕಾದೆ. ಅವರು ಮಗುವನ್ನು ಕಳಿಸುವುದಿಲ್ಲ. ನನ್ನ ಮಗುವಿನ‌ ಆಣೆ‌ಮಾಡಿ, ತಾಯಿಯ ಆಣೆ ಮಾಡಿ ಹೇಳುತ್ತಿದ್ದೇನೆ.‌ ನಾನು ಹಗ್ಗ ತೆಗೆಯಲು ಹೊರಡುತ್ತಿದ್ದೇನೆ. ಅಕ್ಕಾ… ನೀನು ಅಮ್ಮನನ್ನು ನೋಡಿಕೋ.‌ತಾಯಿಯನ್ನು ಜಾಗ್ರತೆ ಮಾಡಿಕೊ.” ಎಂದು ಹೇಳಿದ್ದಾರೆ. ಮತ್ತೆರಡು ವಾಯ್ಸ್ ನಲ್ಲಿ ತನ್ನ ಮಗುವಿಗಾಗಿ ಹಾತೊರೆದು ಬಿಕ್ಕಿ‌ಬಿಕ್ಕಿ‌ಅತ್ತಿರುವ ವಾಯ್ಸ್ ಇದೆ. ಆ ಅಬಳಿಕ ಅವರು ನೇಣಿಗೆ ಕೊರಳೊಡ್ಡಿದ್ದಾರೆ. ಈ‌ಬಗ್ಗೆ ಪೊಲೀಸರು ಪದರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಮಿತ್ತಬಾಗಿಲಿಗೆ ತರಲಾಗಿದ್ದು ,‌ಕಾಜೂರಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.‌

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಧಾರಕಾರ ಮಳೆಗೆ ಇಡೀ ತಾಲೂಕು ತತ್ತರ ! ಹೆಚ್ಚುತ್ತಿದೆ ಜೀವನದಿಗಳ ಹರಿವು !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಲಾವಣ್ಯ ಹತ್ಯೆ ಪ್ರಕರಣ – ಆರೋಪಿ ಚೇತನ್ ಗೆ ನ್ಯಾಯಾಂಗ ಬಂಧನ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ, ಮಂಗಳೂರು

ಮಂಗಳೂರು : ಆ. 1ರಂದು ಅಂಗನವಾಡಿಯಿಂದ ಪಿಯುಸಿ ಕಾಲೇಜುಗಳಿಗೆ ರಜೆ

⚠️ Contents are protected on this website.