ಬಂಟ್ವಾಳ : ಲಾವಣ್ಯ ಹತ್ಯೆ ಪ್ರಕರಣ – ಆರೋಪಿ ಚೇತನ್ ಗೆ ನ್ಯಾಯಾಂಗ ಬಂಧನ !

ಬಂಟ್ವಾಳ, ಆ. 01 : ಕಕ್ಯಪದವು ಲಾವಣ್ಯ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿ ಬೆಳ್ತಂಗಡಿ ತಾಲೂಕು ಓಡಿಲ್ನಾಳ ಗ್ರಾಮದ ಚೇತನ್ ಗೆ (22) ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯವು ಆದೇಶಿಸಿದೆ.

Advertisement

ಜು.16ರಂದು ಕಕ್ಯಪದವಿನ ನಿವಾಸಿ ಲಾವಣ್ಯ (21) ಸಂಜೆ ತನ್ನೂರಿಗೆ ತೆರಳಲೆಂದು ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ ಕುಳಿತಿದ್ದ ವೇಳೆ ಆರೋಪಿ ಚೇತನ್ ಆಗಮಿಸಿ ಆಕೆಯನ್ನು ತಲವಾರಿನಿಂದ ಹತ್ಯೆಮಾಡಿ ಪರಾರಿಯಾಗಿದ್ದ. ಇದರ ವಿಡಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮರುದಿನ ಮಂಗಳೂರಿನ ಪಚ್ಚನಾಡಿಯಲ್ಲಿ ಈತ ಪತ್ತೆಯಾಗಿದ್ದು, ಕೂಡಲೇ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದರು. ಆ ವೇಳೆ ಆರೋಪಿ ತಾನು ಇಲಿಪಾಷಾಣ ಸೇವಿಸಿದ್ದಾಗಿ ಹೇಳಿದ್ದು, ಆತನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ವನ್ನಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸುಮಾರು 11 ದಿನಗಳ ಬಳಿಕ ಗುಣಮುಖನಾಗಿರುವ ಕುರಿತು ವೈದ್ಯರು ತಿಳಿಸಿದ ನಂತದ ಪೊಲೀಸರು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆ ವೇಳೆ ನ್ಯಾಯಾಲಯ ಆತನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಈ ವೇಳೆ ತನಿಖಾಧಿಕಾರಿಗಳು ಕೃತ್ಯ ನಡೆದ ಜಾಗ, ಆಯುಧ ಖರೀದಿಸಿದ ಜಾಗ ಸಹಿತ ಹಲವೆಡೆ ಆರೋಪಿಯನ್ನು ಕರೆದೊಯ್ದು ಮಹಜರು ನಡೆಸಿದ್ದರು.

ಒಂದು ದಿವಸ ಮೊದಲೇ ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಲಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಧಾರಕಾರ ಮಳೆಗೆ ಇಡೀ ತಾಲೂಕು ತತ್ತರ ! ಹೆಚ್ಚುತ್ತಿದೆ ಜೀವನದಿಗಳ ಹರಿವು !!

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕೌಟುಂಬಿಕ ಕಲಹಕ್ಕೆ 6 ಮಂದಿಯ ಹೆಸರು ಪ್ರಸ್ತಾಪಿಸಿ ಮಿತ್ತಬಾಗಿಲಿನ ಅನ್ವರ್ ಆತ್ಮಹತ್ಯೆ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ, ಮಂಗಳೂರು

ಮಂಗಳೂರು : ಆ. 1ರಂದು ಅಂಗನವಾಡಿಯಿಂದ ಪಿಯುಸಿ ಕಾಲೇಜುಗಳಿಗೆ ರಜೆ

⚠️ Contents are protected on this website.