ಮಂಗಳೂರು : ಅಸ್ತ್ರ ಗ್ರೂಪ್’ನ ಅಕ್ಷಯ ಪಾತ್ರೆ ಸ್ಕೀಂ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಹಕರು ?

Advertisement

ಮಂಗಳೂರು, ಜು. 24 : ಪ್ರತಿ ತಿಂಗಳು ಕಂತು ಹಣದ ಮೂಲಕ ಜನರಿಂದ ಹಣ ಪಡೆದು, ಬಹುಮಾನವಾಗಿ ಕಾರು, ಥಾರ್, ಪ್ಲ್ಯಾಟ್ ಹೀಗೆ ಹಲವಾರು ಆಸೆಗಳನ್ನು ತೋರಿಸಿ ಜನರನ್ನು ಆಕರ್ಷಿಸಿದ್ದ ಅಸ್ತ್ರ ಗ್ರೂಪ್’ನ ಅಕ್ಷಯ ಪಾತ್ರೆ ಸ್ಕೀಂ ಕಚೇರಿಗೆ ಗ್ರಾಹಕರು ಮುತ್ತಿಗೆ ಹಾಕಿರುವ ಘಟನೆ ವರದಿಯಾಗಿದೆ.

Advertisement

ಮಂಗಳೂರಿನಲ್ಲಿರುವ ಕಚೇರಿಗೆ ಮುತ್ತಿಗೆ ಹಾಕಿರುವ ಗ್ರಾಹಕರು ಅಲ್ಲಿನ ಸಿಬ್ಬಂದಿಗಳನ್ನು ತರಾಟೆಗೆತ್ತಿಕೊಂಡರು. ಕಳೆದ ಬಾರಿಯೂ ಇಂತಹುದೇ ಆರೋಪ ಬಂದಾಗ ಅಸ್ತ್ರ ಗ್ರೂಪ್ ಮಾಲಕರಾದ ಲಂಚುಲಾಲ್ ಕೆ.ಎಸ್. ಅವರು, ಸುಳ್ಳು ಸುದ್ದಿಗಳನ್ನು ಕೇಳಬೇಡಿ, ಗ್ರಾಹಕರ ಹಣವನ್ನು ಹಿಂತಿರುಗಿಸುವುದಾಗಿ ಭರವಸೆಯನ್ನು ನೀಡಿದ್ದರು.

Advertisement

ಇದೀಗ ಮತ್ತೆ ಇಂತಹುದೇ ಒಂದು ಸುದ್ದಿ ವೈರಲ್ ಆಗುತ್ತಿದ್ದು, ಸಾಕ್ಷ್ಯವೆಂಬಂತೆ ವೀಡಿಯೋ ತುಣುಕೊಂದು ವೈರಲ್ ಆಗುತ್ತಿದೆ. ಇದರ ಸತ್ಯಾಸತ್ಯತೆ ಇನ್ನಷ್ಟೇ ತಿಳಿದುಬರಬೇಕಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ