ತುಪ್ಪದ ವಿಚಾರಕ್ಕೆ ಅತ್ತೆ ಸೊಸೆಯ ಮಧ್ಯೆ ಜಗಳ – ಸೊಸೆಯ ಸಾವಿನೊಂದಿಗೆ ಅಂತ್ಯ !

ಮಧ್ಯಪ್ರದೇಶ, ಜ. 16 : ಕೇವಲ ತುಪ್ಪದ ವಿಚಾರಕ್ಕೆ ಆರಂಭವಾದಂತಹ ಜಗಳವೊಂದು ಸಾವಿನಲ್ಲಿ ಅಂತ್ಯವಾದ ಘಟನೆ ವರದಿಯಾಗಿದೆ. ತುಪ್ಪದ ವಿಚಾರವಾಗಿ ಅತ್ತೆಯೊಂದಿಗೆ ಉಂಟಾದ ಭಿನ್ನಾಭಿಪ್ರಾಯದಿಂದ ಮನನೊಂದ 26 ವರ್ಷದ ಗೃಹಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಪುರಿ ಜಿಲ್ಲೆಯ ಇಮೌಡಿ ಗ್ರಾಮದಲ್ಲಿ ನಡೆದಿದೆ.

Advertisement

ಮೃತ ಮಹಿಳೆಯನ್ನು ಸೋನಂ ಜಾತವ್ ಎಂದು ಗುರುತಿಸಲಾಗಿದೆ. 2018ರಲ್ಲಿ ಧನಪಾಲ್ ಎಂಬುವವರನ್ನು ವಿವಾಹವಾಗಿದ್ದ ಸೋನಂ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಜಂಟಿ ಕುಟುಂಬದಲ್ಲಿದ್ದ ಇವರು, ಸಣ್ಣಪುಟ್ಟ ಕೌಟುಂಬಿಕ ಕಲಹಗಳಿಂದಾಗಿ ಇತ್ತೀಚೆಗೆ ಪ್ರತ್ಯೇಕವಾಗಿ ಅಡುಗೆ ಮಾಡುತ್ತಿದ್ದರು. ಧನಪಾಲ್ ಅವರ ತಾಯಿ (ಅತ್ತೆ) ಸೊಸೆ ಸೋನಂ ಬಳಿ ಸ್ವಲ್ಪ ತುಪ್ಪ ಕೇಳಿದ್ದಾರೆ. ಮೊದಲು ನೀಡಲು ನಿರಾಕರಿಸಿದ್ದಳು ಸೋನಂ. ಬಳಿಕ ಪತಿಯ ಒತ್ತಾಯಕ್ಕೆ ಮಣಿದು ತುಪ್ಪ ನೀಡಿದ್ದಾರೆ. ಆದರೆ, ಇದಾದ ಬಳಿಕ ಧನಪಾಲ್ ತನ್ನ ತಾಯಿಗಾಗಿ ಮತ್ತಷ್ಟು ತುಪ್ಪ ತಂದುಕೊಟ್ಟಿದ್ದಾರೆ. ಇದು ಸೋನಂ ಅವರ ಕೆಂಗಣ್ಣಿಗೆ ಗುರಿಯಾಗಿದ್ದು, ಅತ್ತೆ-ಸೊಸೆಯ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು. ಆ ಬಳಿಕ ಜಗಳದಿಂದ ತೀವ್ರವಾಗಿ ನೊಂದ ಸೋನಂ, ಆವೇಶದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಟುಂಬದ ಆಂತರಿಕ ಕಲಹವೇ ಈ ಘಟನೆಗೆ ಮೂಲ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಬೆಳ್ತಂಗಡಿ : ನಾಳೆ ತಾಲೂಕಿನ ಅಂಗನವಾಡಿ, ಶಾಲಾ, ಪಿಯುಸಿ ಕಾಲೇಜುಗಳಿಗೆ ರಜೆ ಘೋಷಣೆ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜ ಸಾಂತ್ವನ – ರೂ.20 ಲಕ್ಷ ಪರಿಹಾರಕ್ಕೆ ಕ್ರಮ

ತಾಲೂಕು, ಬೆಳ್ತಂಗಡಿ

ಮುಂಡಾಜೆ : ನಿವೃತ್ತ ಶಿಕ್ಷಕ ಶಂಕರ್ ತಾಮನ್ಕರ್ ರಿಂದ ಮಾದರಿ ಸೇವೆ – ತಂದೆ ದಿ. ನಾರಾಯಣ ತಾಮನ್ಕರ್ ಸವಿನೆನಪಿಗಾಗಿ ಅರ್ಹರಿಗೆ ಧನ ಸಹಾಯ

⚠️ Contents are protected on this website.