ವೇಣೂರು, ಆ. 21 : ತನ್ನ ಆಟೋದಲ್ಲಿ ಪ್ರತಿನಿತ್ಯ ಶಾಲೆಗೆ ಬರುತ್ತಿದ್ದ ಬಾಲಕಿಯನ್ನು ಆಟೋ ಚಾಲಕ ಅತ್ಯಾಚಾರವೆಸಗಿರುವ ಆತಂಕಕಾರಿ ಘಟನೆ ವರದಿಯಾಗಿದೆ. ಆರೋಪಿ ಜಮಾಲುದ್ದೀನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕಾರಣದ ವಿವರ : ಪ್ರಕರಣದಲ್ಲಿ ಅಪ್ರಾಪ್ತ ಪ್ರಾಯದ ಸಂತ್ರಸ್ಥ ಬಾಲಕಿಯು (14) ಕೆಲವು ತಿಂಗಳುಗಳಿಂದ ಆರೋಪಿಯನಾದ ಬೆಳ್ತಂಗಡಿ ವೇಣೂರು ನಿವಾಸಿ ಜಮಾಲುದ್ದೀನ್ ಎಂಬಾತನ ರಿಕ್ಷಾದಲ್ಲಿ ಶಾಲೆಗೆ ಹೋಗಿ ಬರುತ್ತಿದ್ದು, ಈ ವೇಳೆ ಆರೋಪಿಯು ಅನುಚಿತವಾಗಿ ವರ್ತಿಸುತ್ತಿದ್ದು, ಈ ಬಗ್ಗೆ ಬಾಲಕಿಯು ಪ್ರತಿರೋಧಿಸಿದಾಗ ಆರೋಪಿಯು ಜೀವಬೆದರಿಕೆ ಒಡ್ಡಿರುತ್ತಾನೆ. ಇದರಿಂದಾಗಿ ಹೆದರಿದ್ದ ಬಾಲಕಿ ಆತನ ವರ್ತನೆಯ ಬಗ್ಗೆ ಯಾರಿಗೂ ತಿಳಿಸಿರುವುದಿಲ್ಲ.
ದಿನಾಂಕ: 13.08.2026 ರಂದು ಸಂಜೆ ಬಾಲಕಿಯು ಆಕೆಯ ಮನೆಯಲ್ಲಿ ಒಬ್ಬಳೇ ಇದ್ದಾಗ, ಮನೆಗೆ ಬಂದ ಆರೋಪಿಯು ಆಕೆಯನ್ನು ಬೆದರಿಸಿ ಅತ್ಯಾಚಾರವೆಸಗಿರುತ್ತಾನೆ ಎಂಬುದಾಗಿ ಸಂತ್ರಸ್ಥ ಬಾಲಕಿ ದಿನಾಂಕ 15.08.2026 ರಂದು ನೀಡಿದ ದೂರಿನ ಮೇರೆಗೆ, ವೇಣೂರು ಪೊಲೀಸ್ ಠಾಣಾ ಅ.ಕ್ರ: 56/2026 ಕಲಂ: 75(2), 64(1), 65(1), 351(3) BNS 2023 ಮತ್ತು ಕಲಂ: 4(2), 8, 12 ಪೋಕ್ಸೋ ಕಾಯಿದೆ- 2012 ರಂತೆ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ದಿನಾಂಕ ದಿನಾಂಕ 15.08.2026 ರಂದು ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.




