ಕಾರ್ಕಳ, ಜು. 13 : ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿರುವ 17 ವರ್ಷದ ಯುವಕ ಅವಿನಾಶ್ ಪೂಜಾರಿ ಅವರಿಗೆ ನೆರವಿನ ಹಸ್ತ ಬೇಕಾಗಿದೆ. ಈಗಾಗಲೇ, ಅವಿನಾಶ್ ಪೂಜಾರಿ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, ಸುಮಾರು 01 ಲಕ್ಷಕ್ಕೂ ಅಧಿಕ ಮೊತ್ತ ವ್ಯಯಿಸಿದ್ದಾರೆ.
ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಜಯಕರ ಪೂಜಾರಿ ಹಾಗೂ ಅಮಿತ ಪೂಜಾರಿಯವರ ಮಗ ಅವಿನಾಶ್ ಪೂಜಾರಿ ಕಳೆದ ಹಲವು ಸಮಯಗಳಿಂದ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದೀಗ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಶೀಘ್ರ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದ್ದು, ಅದರ ವೆಚ್ಚ ಸುಮಾರು ₹5,00,000 ಆಗುತ್ತದೆ ಎಂದು ತಿಳಿಸಿದ್ದಾರೆ. ಈಗಾಗಲೇ ತಮ್ಮ ಪುತ್ರನ ಚಿಕಿತ್ಸೆಗಾಗಿ ತಂದೆ ತಾಯಿ ಸಾಲ ಮಾಡಿಕೊಂಡು, ಸೋತಿದ್ದಾರೆ. ಮತ್ತೆ 05 ಲಕ್ಷ ರೂಪಾಯಿ ಬೇಕಾಗಿದ್ದು, ಕುಟುಂಬ ದಿಕ್ಕು ತೋಚದೆ ಸಹೃದಯಿ ಬಂಧುಗಳತ್ತ ಕೈ ಚಾಚಿದೆ.
ತಂದೆಯನ್ನು ಕಳೆದುಕೊಂಡು ದಿಕ್ಕು ತೋಚಂದಂತಿರುವ ಕುಟುಂಬ :
ಕಡುಬಡತನದಲ್ಲಿರುವ ಇವರ ಕುಟುಂಬಕ್ಕೆ ಇದೀಗ ಮಗನ ಅನಾರೋಗ್ಯ ಬರಸಿಡಿಲು ಬಂದಂತಾಗಿದೆ. ಅಲ್ಲದೆ ಕಳೆದ ಎರಡು ದಿನಗಳ ಹಿಂದೆಯಷ್ಟೇ, ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ಅವಿನಾಶ್ ಪೂಜಾರಿಯವರ ತಂದೆ ಜಯಕರ ಪೂಜಾರಿ ನಿಧನರಾಗಿದ್ದಾರೆ. ಇತ್ತ ಗಂಡನನ್ನು ಕಳೆದುಕೊಂಡು, ಮಗನೂ ಆಸ್ಪತ್ರೆಯಲ್ಲಿರುವ ಸಂಕಷ್ಟವನ್ನು ಎದುರಿಸುತ್ತಿರುವ ತಾಯಿ ಅಮಿತ ಪೂಜಾರಿ’ಯವರು ಸಹೃದಯಿ ದಾನಿಗಳ ಮುಂದೆ ಕೈ ಚಾಚಿದ್ದಾರೆ.
ಸಮಾಜದ ಸಹೃದಯಿ ಬಂಧುಗಳು ತಮ್ಮಿಂದಾಗುವಷ್ಟು ನೆರವನ್ನು ನೀಡಿ, ಕಡುಬಡತನದ ಕುಟುಂಬಕ್ಕೆ ಆಸರೆಯಾಗಬೇಕಾಗಿ ಧ್ವನಿ ನ್ಯೂಸ್ ವಿನಂತಿಸಿಕೊಳ್ಳುತ್ತಿದೆ.
ಅವಿನಾಶ್ ಪೂಜಾರಿಯವರ ಚಿಕ್ಕಮ್ಮ ಸಂಗೀತ’ರವರ ಖಾತೆಯ ವಿವರ :
NAME : SANGEETHA
IFSC : CNRB0010215
BANK NAME : CANARA BANK
ACCOUNT NO : 02152200035486




