ಬೆಳ್ತಂಗಡಿ : ಶಾಸಕರ ಮುತುವರ್ಜಿಯಲ್ಲಿ ಮೈಪಾಲ ಎಂಬಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ರಚನೆ – ವಿಹಂಗಮ ನೋಟ ಇಲ್ಲಿದೆ

ಬೆಳ್ತಂಗಡಿ, ಡಿ. 18 : ತಾಲೂಕಿನ ಬಂದಾರು – ಕೊಕ್ಕಡ ಸಂಪರ್ಕಿಸುವ ಮೈಪಾಲ ಎಂಬಲ್ಲಿ ರೂ.72 ಕೋಟಿ ಅನುದಾನದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿ ಭಾಗಶ: ಸಂಪೂರ್ಣಗೊಂಡಿದ್ದು, ಪರೀಕ್ಷಾರ್ಥವಾಗಿ ಕಿಂಡಿ ಅಣೆಕಟ್ಟಿನಲ್ಲಿ ನೀರು ನಿಲ್ಲಿಸಲಾಯಿತು. ಇದರ ವಿಹಂಗಮ ನೋಟ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.

Advertisement

ಶಾಸಕ ಹರೀಶ್ ಪೂಂಜಾರವರ ವಿಶೇಷ ಮುತುವರ್ಜಿಯಲ್ಲಿ ಮೈಪಾಲ ಎಂಬಲ್ಲಿ ಸೇತುವೆ ನಿರ್ಮಾಣಗೊಂಡಿದ್ದು ಎರಡು ಊರುಗಳ ಸಂಪರ್ಕಕ್ಕೆ ಇದೊಂದು ಪ್ರಮುಖ ಸೇತುವೆಯಾಗಿದೆ. ಬಂದಾರು – ಕೊಕ್ಕಡ ಸಂಪರ್ಕಿಸುವ ಮೈಪಾಲ ಎಂಬಲ್ಲಿ ಸೇತುವೆ ರಚನೆಯಾಗಬೇಕೆಂಬುದು ಚುನಾವಣೆಯ ಪೂರ್ವಕಾಲದಲ್ಲೇ ಪ್ರಚಾರದ ಸಂದರ್ಭದಲ್ಲಿ ಆ ಭಾಗದ ಗ್ರಾಮಸ್ಥರ ವಿಶೇಷ ಮನವಿ‌. ಅವೈಜ್ಞಾನಿಕ ಹೋಬಳಿ ಕೇಂದ್ರದ ರಚನೆಯಿಂದಾಗಿ ಹೋಬಳಿ ಕೇಂದ್ರಕ್ಕೆ ತಲುಪುವಲ್ಲಿ ಸುಮಾರು 35 ಕಿ.ಮೀ ಪ್ರಯಾಣಿಸಬೇಕಾಗಿತ್ತು. ಇದರಿಂದಾಗಿ ಆ ಭಾಗದ ಗ್ರಾಮಸ್ಥರು ಗಂಭೀರ ಸಂಕಷ್ಟವನ್ನು ಎದುರಿಸುತ್ತಿದ್ದರು. ಶಾಸಕರು ಅಂದಿನ ಸಣ್ಣನೀರಾವರಿ ಇಲಾಖಾ ಸಚಿವರಾದ ಮಾಧುಸ್ವಾಮಿ ಅವರನ್ನು ತಾಲೂಕಿಗೆ ಆಹ್ವಾನಿಸಿ ಅವರಿಗೆ ಆ ಭಾಗದ ಗ್ರಾಮಸ್ಥರ ಸಮ್ಮುಖದಲ್ಲಿ ಮನವಿಯನ್ನು ನೀಡಿ ಪರಿಹಾರ ಮಾರ್ಗೋಪಾಯವನ್ನು ನೀಡುವಂತೆ ಕೋರಿದ ಫಲವಾಗಿ ರೂ.72 ಕೋಟಿ ಅನುದಾನವನ್ನು ಬಂದಾರು ಗ್ರಾಮದ ಮೈಪಾಲ ಎಂಬಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಮಂಜೂರುಗೊಳಿಸಿದರು. ಇಂದು ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.