ಬೆಳ್ತಂಗಡಿ, ಜು. 31 : ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಂಗಾಡಿ ಶಾಲೆಯಲ್ಲಿ ಕಾರ್ಗಿಲ್ ದಿನಾಚರಣೆ ಹಾಗೂ ಇಕೋ ಕ್ಲಬ್ ಮೂಲಕ ಪರಿಸರ ಜಾಗೃತಿ ಬಗ್ಗೆ ಕಾರ್ಯಕ್ರಮ ಜರುಗಿತು.

ಬೆಳ್ತಂಗಡಿ ಲಯನ್ಸ್ ಸಂಸ್ಥೆಯ ಸದಸ್ಯರೂ ನಿವೃತ್ತ ಯೋಧರು ಆಗಿರುವ ಲಯನ್ ಗೋಪಾಲಕೃಷ್ಣ ಕಾಂಚೋಡು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಕ್ಕಳಿಗೆ ಕಾರ್ಗಿಲ್ ದಿನಾಚರಣೆ ಹಾಗೂ ಪರಿಸರ ಜಾಗೃತಿ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಕೋಶಾಧಿಕಾರಿ ಲಯನ್ ನಾಣ್ಯಪ್ಪ ನಾಯ್ಕ, ಲಯನ್ ಪ್ರಭಾಕರ ಗೌಡ ಬೊಲ್ಮಾ, ಲಯನ್ ಸುಂದರಿ ನಾಣ್ಯಪ್ಪ ನಾಯ್ಕ, ಲಿಯೋ ಕ್ಲಬ್ ನ ನಿರ್ದೇಶಕರಾದ ಲಯನ್ ರಮೇಶ್ ಪೈಲಾರ್, ಲಿಯೋ ಅಧ್ಯಕ್ಷರಾದ ಅಭಿಜ್ಞಾ ಬೊಲ್ಮಾ, ಕಾರ್ಯದರ್ಶಿ ಶಿವಾನಿ ಪಿ ಶೆಟ್ಟಿ ಕೋಶಾಧಿಕಾರಿ ರೋಹನ್ ಪವಾರ್ ಉಪಸ್ಥಿತರಿದ್ದರು.
ನಂತರ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಲಯನ್ ಗೋಪಾಲಕೃಷ್ಣ ಕಾಂಚೋಡು ಇವರು ಡ್ರ್ಯಾಗನ್ ಫ್ರೂಟ್ಸ್ ವಿತರಿಸಿದರು. ಕಾರ್ಯದರ್ಶಿ ಅಮಿತಾನಂದ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

