ಬಂಟ್ವಾಳ : ದೇಶದೆಲ್ಲೆಡೆ ಸ್ವಾತಂತ್ರ್ಯದ ಸಂಭ್ರಮ – ಬೇಂಕ್ಯ‌ ರಿಕ್ಷಾ ಚಾಲಕರು ಮತ್ತು ಮಾಲಕರಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Advertisement

ಬಂಟ್ವಾಳ, ಆ. 15 : ಇಂದು ಎಲ್ಲೆಡೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಇನ್ನು ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ರಿಕ್ಷಾ ಚಾಲಕರು ಮತ್ತು ಮಾಲಕರು ಅದೆಷ್ಟೋ ಬಡ ಕುಟುಂಬಗಳಿಗೆ ಸಹಾಯವನ್ನು ಮಾಡುತ್ತಾ ಬಡ ಕುಟುಂಬದ ಕಣ್ಣೀರನ್ನು ಒರೆಸುತ್ತಾ ಅವರ ಬದುಕಿಗೆ ಆಸರೆಯಾದ ಕೀರ್ತಿ ಇವರಿಗೆ ಸಲ್ಲುತ್ತದೆ.ಹಾಗೂ ತನಗೆ ಮಾತ್ರ ದುಡಿಯದೆ ಸಮಾಜಕ್ಕೆ ಏನಾದರೂ ನೀಡಬೇಕು ಎಂಬ ಉದ್ದೇಶದಿಂದ ಪ್ರತೀ ದಿನವು ತಮಗೆ ಬಂದ ಬಾಡಿಗೆ ಹಣ ಜೊತೆಗೆ ದಾನಿಗಳ ಸಹಕಾರ ಹಾಗೂ ಊರವರ ಸಹಕಾರದಲ್ಲಿ ಎಷ್ಟೋ ಬಡವರ ಕಣ್ಣೀರನ್ನು ಒರೆಸುತ್ತಾ ಮಾದರಿಯಾಗಿದ್ದಾರೆ.

Advertisement

ಇಂದು ಸಜೀಪಮೂಡ ಬೇಂಕ್ಯ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದು ಈ ಸಂದರ್ಭ ಶಾಲೆಯ ವಿದ್ಯಾರ್ಥಿಗಳಿಗೆ ಬೇಂಕ್ಯ ರಿಕ್ಷಾ ಚಾಲಕರು ಮತ್ತು ಮಾಲಕರು ನೋಟ್ ಪುಸ್ತಕವನ್ನು ಹಾಗೂ ಸಿಹಿ ತಿಂಡಿಯನ್ನು ವಿತರಿಸಿದ್ದಾರೆ.

80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ ಬೇಂಕ್ಯ ರಿಕ್ಶಾ ಚಾಲಕರಿಗೆ ಎಲ್ಲೆಡೆ‌ ಮೆಚ್ಚುಗೆ ವ್ಯಕ್ತವಾಗಿದೆ.

ಮುಖ್ಯ ಅತಿಥಿ ಶರೀಪ್ ಆಲಾಡಿ ಅಧ್ಯಕ್ಷರು ಆಟೊ ಪಾರ್ಕ್ ಸುಭಾಷ್ ನಗರ, ಉಪಾಧ್ಯಕ್ಷರು ದೀವ್ಯಾನಂದ ಅನ್ಬಪ್ಪಾಡಿ, ಜೊತೆ ಕಾರ್ಯದರ್ಶಿ ಇರ್ಪಾನ್ Zirba, ಮಾಜಿ ಉಪಾಧ್ಯಕ್ಷರಾದ ಮನ್ಸೂರ್ ತನ್ನಚ್ಚಿಲ್,ಯೋಜನೆ ಉಸ್ತುವಾರಿ ಪ್ರವೀಣ್ ಕರಂದಾಡಿ, ಪೈಸಲ್ Zirba,ನೌಝೀರ್ ,ಅನ್ವರ್,ಮೌಸೀನ್,ಯಾಸೀರ್ ಅಪ್ಪಿ ಮುಂತಾದವರು ಉಪಸ್ಥಿತರಿದ್ದರು.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ