ಬಂಟ್ವಾಳ, ಆ. 31 : ರಾಜ ಕೇಸರಿ ಸೇವಾ ಟ್ರಸ್ಟ್ ರಿ ಬಸವನಬೈಲು ನೆಲ್ಲಿಗುಡ್ಡೆ ಘಟಕ ಮತ್ತು ಮಹಿಳಾ ಘಟಕದೊಂದಿಗೆ ರಕ್ಷಾ ಬಂಧನ ಕಾರ್ಯಕ್ರಮವು ಬಸವನಬಯಲು ನೆಲ್ಲಿಗುಡ್ಡೆ ಗಣೇಶ್ ಪ್ರಸಾದ್ ಉಡುಪ ಅವರ ಮನೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ರವಿರಾಜ್ ನೆಲ್ಲಿಗುಡ್ಡೆ ಅಧ್ಯಕ್ಷರು ಬಸವನಬೈಲ್ ನೆಲ್ಲಿಗುಡ್ಡ ಘಟಕ ಇವರು ವಹಿಸಿದ್ದು, ಕಾರ್ಯಕ್ರಮದಲ್ಲಿ ಭಾರತ ಮಾತಾಗೆ ಪುಷ್ಪಾಂಜಲಿ ಅರ್ಪಿಸುವ ಮೂಲಕ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ, ಪ್ರಸಾದ್ ಕುಲಾಲ್ ಜಿಲ್ಲಾ ಸಂಚಾಲಕರು, ಗೌತಮ್ ಪೂಜಾರಿ ಅಧ್ಯಕ್ಷರು ಬಂಟ್ವಾಳ ತಾಲೂಕು, ನೆಲ್ಲುಗುಡ್ಡೆ ಬಸವನ ಬೈಲು ಘಟಕದ ಪದಾಧಿಕಾರಿಗಳಾದ ಮಂಜುನಾಥ್ ಕುಲಾಲ್, ಶೇಖರ್ ಕುಲಾಲ್ ನೆಲ್ಲಿಗುಡ್ಡೆ, ಆನಂದ್ ಮೂಲ್ಯ, ಪದ್ಮನಾಭ ಕುಲಾಲ್, ಶ್ರೀ ದಂಡೆ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಗಣೇಶ್ ಪ್ರಸಾದ್ ಉಡುಪ,
ಹರೀಶ್ ಪೂಜಾರಿ, ಜನಾರ್ದನ ಪೂಜಾರಿ, ದಯಾನಂದ್ ನಾಯ್ಕ ಉಪಸ್ಥಿತರಿದ್ದರು.
ಅದೇ ರೀತಿ ನೆಲ್ಲಿಗುಡ್ಡೆ ಬಸವನಬೈಲು ಪರಿಸರದ ಹತ್ತನೇ ತರಗತಿಯ ಅತ್ಯುತ್ತಮ ಅಂಕವನ್ನು ಪಡೆದಂತಹ ಮಕ್ಕಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಸಂಚಾಲಕರಾದ ಪ್ರಸಾದ್ ಕುಲಾಲ್ ಸ್ವಾಗತಿಸಿ ವಂದಿಸಿದರು.




