ಬೆಳಾಲು : ಗ್ರಾ. ಪಂ. ಹಾಗೂ ಸಂಜೀವಿನಿ ಒಕ್ಕೂಟದ ವತಿಯಿಂದ ಕೂಡಲ್ ಕೆರೆ ಮುಖ್ಯ ರಸ್ತೆಯ ಸ್ವಚ್ಛತಾ ಕಾರ್ಯಕ್ರಮ

ಬೆಳಾಲು, ಜ 29 : ಗ್ರಾ. ಪಂಚಾಯತ್ ಬೆಳಾಲು ಹಾಗೂ ಸಂಜೀವಿನಿ ಒಕ್ಕೂಟ ಬೆಳಾಲು ಇದರ ಸಹಯೋಗದಲ್ಲಿ ಬೆಳಾಲು ಗ್ರಾಮದ ಕೂಡಲ್ ಕೆರೆ ಎಂಬಲ್ಲಿನ ಮುಖ್ಯರಸ್ತೆಯ ಇಕ್ಕೆಲದಲ್ಲಿದ್ದ ಕಸ ಕಡ್ಡಿಗಳನ್ನು ಹೆಕ್ಕುವ ಮೂಲಕ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

Advertisement

ಈ ಕಾರ್ಯಕ್ರಮದಲ್ಲಿ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ, ಪಂಚಾಯತ್ ಸಿಬ್ಬಂದಿಗಳಾದ ಪೂರ್ಣಿಮಾ, ಡೀಕಯ್ಯ, ಭುವನೇಶ್, ಶ್ರೇಷ್ಠ, ನಾಗಾಂಬಿಕಾ ಸಂಜೀವಿನಿ ಮಹಿಳಾ ಒಕ್ಕೂಟ ರಿ. ಬೆಳಾಲು ಇದರ ಅಧ್ಯಕ್ಷರು ಶಾರದಾ, ಕಾರ್ಯದರ್ಶಿ ಉಮಾದೇವಿ ಹಾಗೂ ಪದಾಧಿಕಾರಿಗಳಾದ ಪ್ರೇಮ, ಎಂ.ಬಿ.ಕೆ ಶ್ರೀಮತಿ ಹರಿಣಾಕ್ಷಿ, ಎಲ್. ಸಿ. ಆರ್. ಪಿ ಸರಸ್ವತಿ, ಕೃಷಿ ಸಖಿ ಸ್ವಾತಿ ಹಾಗೂ ಸ್ವಚ್ಛ ಘಟಕ ದ ಸಿಬ್ಬಂದಿಗಳಾದ ಸುಂದರಿ ಮಾಯಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ಕೆ ನಾಗರಿಕರಿಂದ ಪ್ರಶಂಸೆ ವ್ಯಕ್ತವಾಯಿತು.

ಇದೇ ಸಂದರ್ಭದಲ್ಲಿ ನಾಗರಿಕರು ರಸ್ತೆ ಬದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಕಡ್ಡಿ ಬಿಸಾಡದೆ ಸ್ವಚ್ಛತೆಯ ಬಗ್ಗೆ ಜಾಗೃತರಾಗಿರಬೇಕೆನ್ನುವ ಅರಿವು ಮೂಡಿಸಲಾಯಿತು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.