ಬೆಳ್ತಂಗಡಿಯ ಪಕ್ಕಿದಕಲದಲ್ಲಿ ನ. 9ರಂದು ಮೋಟೋ ಕ್ರಾಸ್ – 2025

Advertisement

ಬೆಳ್ತಂಗಡಿ : ನವೋದಯ ಯುವಕ ಮತ್ತು ಯುವತಿ ಮಂಡಲ (ರಿ.) ಪಕ್ಕಿದಕಲ ಮೇಲಂತಬೆಟ್ಟು ವತಿಯಿಂದ ಖ್ಯಾತ ಯೂಟ್ಯೂಬರ್ ಗಳಾದ ರೈಡಿಂಗ್ ಜೋಡಿ ಸಹಭಾಗಿತ್ವದಲ್ಲಿ 27ನೇ ವರ್ಷದ ಮೋಟೋ ಕ್ರಾಸ್ – 2025 ಮೇಲಂತಬೆಟ್ಟುವಿನ ಪಕ್ಕಿದಕಲದಲ್ಲಿ 2025 ನವೆಂಬರ್ 9ನೇ ಆದಿತ್ಯವಾರದಂದು ನಡೆಯಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

Advertisement

ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಆಟೋಟ ಸ್ಪರ್ಧೆಗಳು ಕೂಡಾ ಇದೇ ಸಂದರ್ಭದಲ್ಲಿ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಸರಿಯಾಗಿ ಆಟೋಟ ಸ್ಪರ್ಧೆಗಳ ಹಾಗೂ ಮೋಟೋ ಕ್ರಾಸ್ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಲಕ್ಷ್ಮಿ ಗ್ರೂಪ್ ಉಜಿರೆಯ ಮಾಲಕರಾದ ಶ್ರೀ ಮೋಹನ್ ಕುಮಾರ್ ಕೆ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ನವೋದಯ ಯುವಕ ಮಂಡಲದ ಗೌರವಾಧಕ್ಷರಾದ ಶ್ರೀ ಹೆಚ್. ಮನೋಹರ್ ಪಡಿವಾಳ್ ಮಾಪಲಾಡಿ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

Advertisement

ಇನ್ನು, ಸಮರೋಪ ಸಮಾರಂಭ ಅಧ್ಯಕ್ಷತೆಯನ್ನು ಸಂಸದರಾದ ಶ್ರೀ ಕ್ಯಾ. ಬೃಜೇಶ್ ಚೌಟರವರು ವಹಿಸಲಿದ್ದಾರೆ. ಗುರುವಾಯನಕೆರೆ ಎಕ್ಸೆಲ್ ಕಾಲೇಜ್ ಅಧ್ಯಕ್ಷರಾದ ಶ್ರೀ ಸುಮಂತ್ ಕುಮಾರ್ ಜೈನ್ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಗಂಟೆ 07:30ರಿಂದ ಜೈಮಾತ ಕಲಾತಂಡ ಮಂಗಳೂರು, ತೆಲಿಕೆದ ಕಲಾವಿದೆರ್ ಅಭಿನಯದ ಪೊಣ್ಣು ಹಾಸ್ಯಮಯ ತುಳು ನಾಟಕ ನಡೆಯಲಿದೆ.

ಈ ಕಾರ್ಯಕ್ರಮವು ನಿಮ್ಮ ನೆಚ್ಚಿನ “ಧ್ವನಿ ನ್ಯೂಸ್ ಯೂಟ್ಯೂಬ್”ನಲ್ಲಿ ನೇರಪ್ರಸಾರ ಇರಲಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ