ಪಾಕಿಸ್ತಾನಿ ಪೌರತ್ವ ಹೊಂದಿರುವವರ ಕೋಟ್ಯಾಂತರ ಆಸ್ತಿ ರಾಜಧಾನಿ ಬೆಂಗಳೂರಿನಲ್ಲಿ ಪತ್ತೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಪಾಕಿಸ್ತಾನ ಹಾಗೂ ಇತರೆ ರಾಷ್ಟ್ರಗಳ ಪೌರತ್ವ ಪಡೆದಿರುವವರು ಸಂಪಾದಿಸಿರುವ ನಿವೇಶನ, ವಾಣಿಜ್ಯ ಕಟ್ಟಡಗಳು ಸೇರಿದಂತೆ ಸ್ಥಿರಾಸ್ತಿಗಳನ್ನು ಜಿಲ್ಲಾಡಳಿತವು ಪತ್ತೆ ಮಾಡಿ, ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ನೀಡಿದೆ.

Advertisement

ಕೇಂದ್ರ ಗೃಹ ಸಚಿವಾಲಯವು 2024ರ ನವೆಂಬರ್‌ನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಇರುವ ಪಾಕಿಸ್ತಾನದ ಪ್ರಜೆಗಳ ಸ್ಥಿರಾಸ್ತಿಗಳನ್ನು ಪತ್ತೆ ಹಚ್ಚುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯು ಬೆಂಗಳೂರು ನಗರ, ಬಾಗಲಕೋಟೆ, ಬೀದರ್‌, ಕಲಬುರಗಿ, ಉಡುಪಿ ಹಾಗೂ ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ರಾಜ್ಯದಲ್ಲಿರುವ ಶತ್ರು ರಾಷ್ಟ್ರಗಳ ಪ್ರಜೆಗಳ ಸ್ಥಿರಾಸ್ತಿಗಳನ್ನು ಪತ್ತೆ ಹಚ್ಚಿ ವರದಿ ನೀಡುವಂತೆ ಸೂಚಿಸಿದ್ದರು.

ಬೆಂಗಳೂರು ನಗರ ಜಿಲ್ಲಾಡಳಿತವು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯ ಸೂಚನೆಯಂತೆ ಬೆಂಗಳೂರು ನಗರದ 4 ಕಡೆಗಳಲ್ಲಿ ಪಾಕಿಸ್ತಾನ ಹಾಗೂ ಚೀನಾದ ಪ್ರಜೆಗಳ ಕೋಟ್ಯಂತರ ರೂ. ಬೆಲೆ ಬಾಳುವ ಸ್ಥಿರಾಸ್ತಿಗಳನ್ನು ಪತ್ತೆಹಚ್ಚಿ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ. ”ಕೇಂದ್ರ ಗೃಹ ಸಚಿವಾಲಯ ಹಾಗೂ ಕಸ್ಟೋಡಿಯನ್‌ ಆಫ್‌ ಎನಿಮಿ ಪ್ರಾಪರ್ಟಿ ಫಾರ್‌ ಇಂಡಿಯಾ ಸೂಚನೆಯಂತೆ ಬೆಂಗಳೂರಿನ 4 ಕಡೆಗಳಲ್ಲಿ ಶತ್ರು ರಾಷ್ಟ್ರಗಳ ಪ್ರಜೆಗಳ ಸ್ಥಿರಾಸ್ತಿಗಳನ್ನು ಗುರುತಿಸಲಾಗಿದೆ. ಈ ಆಸ್ತಿಗಳ ಮಾರುಕಟ್ಟೆ ಮೌಲ್ಯವನ್ನು ಲೆಕ್ಕಾಚಾರ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾಹಿತಿ ನೀಡಿದ್ದಾರೆ. ಶತ್ರು ಆಸ್ತಿ ಕಾಯಿದೆ – 196 8ರ ಅನ್ವಯ ಬೆಂಗಳೂರಿನಲ್ಲಿ ಪತ್ತೆ ಮಾಡಲಾಗಿರುವ ಶತ್ರು ರಾಷ್ಟ್ರಗಳ ಪ್ರಜೆಗಳ ಸ್ಥಿರಾಸ್ತಿಗಳನ್ನು ಜಿಲ್ಲಾಡಳಿತವು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಜಿಲ್ಲಾಡಳಿತವು ಈ ಆಸ್ತಿಗಳ ಅಂದಾಜು ಮೌಲ್ಯವನ್ನು ಲೆಕ್ಕಾಚಾರ ಮಾಡಿದ್ದು, ಹರಾಜು ಹಾಕಲು ಕೇಂದ್ರದ ಆದೇಶಕ್ಕಾಗಿ ಕಾಯುತ್ತಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ಪ್ರಜೆಗಳ ಆಸ್ತಿ ವಿವರ :

ಪಾಕಿಸ್ತಾನದಲ್ಲಿ ನೆಲೆಸಿರುವ ಮರಿಯಮ್‌ ಮಿರ್ಜಾ ಖಲೀಲ್‌ ಎಂಬುವರಿಗೆ ಸೇರಿದ ಆಸ್ತಿ ರಾಜಭವನ ರಸ್ತೆಯಲ್ಲಿ 1.23 ಲಕ್ಷ ಚದರ ಅಡಿ ವಿಸ್ತೀರ್ಣದ ಜಾಗ. ಈಗಿನ ಕ್ಯಾಪಿಟಲ್‌ ಹೋಟೆಲ್, ಪರಾಗ್‌ ಹೋಟೆಲ್ ಹಾಗೂ ಪೆಟ್ರೋಲ್‌ ಬಂಕ್‌ – ಅಂದಾಜು ಮೌಲ್ಯ 300ರಿಂದ 400 ಕೋಟಿ ರೂ.
ಪಾಕಿಸ್ತಾನದಲ್ಲಿರುವ ಜೊಸೈನ್‌ ರಾಜಮ್ಮ ಕ್ಸೇವಿಯರ್‌ ಎಂಬುವರಿಗೆ ಸೇರಿದ ಆಸ್ತಿ – ವಿಕ್ಟೋರಿಯಾ ರಸ್ತೆಯ ಸಿವಿಲ್‌ ಸ್ಟೇಷನ್‌ನಲ್ಲಿರುವ 8,845 ಚ.ಅ. ವಿಸ್ತೀರ್ಣದ ಜಾಗ, ಮಾರುಕಟ್ಟೆ ಮೌಲ್ಯ ಸುಮಾರು 20 ಕೋಟಿ ರೂ.
ಮೈಕಲ್‌ ಥಾಮ್‌ ವಿಠ್ಠಲ್‌ ಎಂಬುವರ ಆಸ್ತಿ ವಿಠ್ಠಲ್‌ ಮಲ್ಯ ರಸ್ತೆಯಲ್ಲಿನ ಈ ಆಸ್ತಿಯ ಮೌಲ್ಯ ಸುಮಾರು 200 ಕೋಟಿ ರೂ.
ಪಾಕಿಸ್ತಾನದ ಪೌರತ್ವ ಪಡೆದಿರುವ ಸೈಯದ್‌ ಅಬ್ದುಲ್‌ ಸುಕುರ್‌ ಎಂಬುವರ ಆಸ್ತಿ ಕಲಾಸಿಪಾಳ್ಯದಲ್ಲಿರುವ 2,100 ಚದರ ಅಡಿ ವಿಸ್ತೀರ್ಣದ ನಿವೇಶನ ಸುಮಾರು 10 ಕೋಟಿ ರೂ. ಬೆಲೆ ಬಾಳುವ ಜಾಗ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

⚠️ Contents are protected on this website.