ಬೆಂಗಳೂರು  : ಭಾರತದಲ್ಲಿ  ಅತೀ ಹೆಚ್ಚು ಟ್ರಾಫಿಕ್  ಹೊಂದಿರುವ ಸಿಟಿ ನಮ್ಮ ರಾಜಧಾನಿ “ಸಿಲಿಕಾನ್ ಸಿಟಿ” !

Advertisement

ಬೆಂಗಳೂರು, ಆ. 10 : ಟ್ರಾಫಿಕ್ ಜಾಮ್‌ಗೆ ಹೆಸರು ವಾಸಿಯಾಗಿರುವ ಸಿಲಿಕಾನ್ ಸಿಟಿ ಬೆಂಗಳೂರು, ಮತ್ತೆ ಟ್ರಾಫಿಕ್ ವಿಚಾರವಾಗಿ ಸುದ್ದಿಯಾಗಿದೆ. ಭಾರತದಲ್ಲಿ (India) ಬೆಂಗಳೂರು (Bengaluru) ಅತೀ ಹೆಚ್ಚು ಟ್ರಾಫಿಕ್ (Traffic) ಹೊಂದಿರುವ ಸಿಟಿ ಎಂಬ ವರದಿ ಈಗ ಬಹಿರಂಗವಾಗಿದೆ.

ಟಾಮ್ ಟಾಮ್ ಸಂಸ್ಥೆ ನಡೆಸಿದ ಟ್ರಾಫಿಕ್ ಇಂಡೆಕ್ಸ್‌ನಲ್ಲಿ ಭಾರತದಲ್ಲೇ ಬೆಂಗಳೂರು ಮೊದಲ ಟ್ರಾಫಿಕ್ ಸಿಟಿ ಎಂಬ ವರದಿ ಹೊರಬಿದ್ದಿದೆ. ವಿಶ್ವದ ಅತೀ ಹೆಚ್ಚು ದಟ್ಟನೆ ನಗರ ಎಂಬ ಕುಖ್ಯಾತಿಗೆ ಒಳಾಗಾಗಿದ್ದ, ಬೆಂಗಳೂರು ಈಗ, ದೇಶದಲ್ಲೇ ಮೊದಲ ಸ್ಥಾನ ಪಡೆದು ಮತ್ತೆ ಟ್ರಾಫಿಕ್ ವಿಚಾರವಾಗಿ ಸುದ್ದಿಯಾಗಿದೆ.

ಬೆಂಗಳೂರಿನಲ್ಲಿ 10 ಕಿ.ಮೀ ಸಂಚಾರ ಮಾಡಲು 36 ನಿಮಿಷಗಳು ಬೇಕಾಗಿದೆ. ಸರಾಸರಿ ಸಮಯದ ಪ್ರಕಾರ, ನಗರದಲ್ಲಿ ಕೇವಲ 10 ಕಿಲೋಮೀಟರ್ ದೂರ ಕ್ರಮಿಸಲು ಸವಾರರು ಸರಾಸರಿ 36 ನಿಮಿಷ 9 ಸೆಕೆಂಡ್ ಸಮಯ ತೆಗೆದುಕೊಳ್ಳುತ್ತಾರೆ. ಬೆಂಗಳೂರಿನ ವಾಹನ ಸವಾರರು ಕೇವಲ ಪೀಕ್ ಅವರ್ಸ್ (ರಶ್ ಅವರ್) ಟ್ರಾಫಿಕ್‌ನಲ್ಲಿ ಸಿಲುಕಿ ವರ್ಷಕ್ಕೆ ಬರೋಬ್ಬರಿ 168 ಗಂಟೆಗಳನ್ನು ಅಂದರೆ ಸುಮಾರು 7 ದಿನಗಳು ರಸ್ತೆಯಲ್ಲೇ ಕಳೆಯುತ್ತಾರೆ ಅನ್ನೋ ಶಾಕಿಂಗ್ ಅಂಶ ಕೂಡ ಬಯಲಾಗಿದೆ.

ರಶ್ ಅವರ್‌ನಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ ಕೇವಲ 13.9 ಕಿ.ಮೀಗೆ ಇಳಿಯುತ್ತದೆ. ಇದು 2024ಕ್ಕೆ ಹೋಲಿಕೆ ಮಾಡಿದ್ರೆ, 2025ಕ್ಕೆ ಭಾರಿ ಏರಿಕೆಯಾಗಿದೆ. ಮುಂದನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇನ್ನೂ ಬೆಂಗಳೂರು ಹೊರತು ಪಡಿಸಿ ಎರಡನೇ ಸ್ಥಾನವನ್ನು ಕೋಲ್ಕತ್ತಾ ಪಡೆದುಕೊಂಡಿದೆ. ಪುಣೆಯಲ್ಲಿ 10 ಕಿಮೀ ಸಾಗಲು 33.20 ನಿಮಿಷ ಬೇಕಾಗ್ತಿದ್ದು, ಇದರಿಂದ ಮೂರನೇ ಸ್ಥಾನ ಪಡೆದುಕೊಂಡಿದೆ. ನ್ಯಾವಿಗೇಷನ್ ಟೆಕ್ನಾಲಜಿ ಕಂಪನಿಯಾದ ಟಾಮ್ ಟಾಮ್ ವಿಶ್ವದ ಬೇರೆಬೇರೆ ನಗರಗಳ ಸಂಚಾರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಪ್ರತಿ ವರ್ಷ ಟ್ರಾಫಿಕ್ ಇಂಡೆಕ್ಸ್ ಪ್ರಕಟಿಸುತ್ತದೆ. 2025ರ ವರದಿಯಲ್ಲಿ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರವಾಗಿದೆ ಎಂದು ವರದಿ ಬಿಡುಗಡೆ ಮಾಡಿದೆ.

Advertisement
Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ