ಬೆಂಗಳೂರು ಟನಲ್ ರಸ್ತೆಗೆ ನಾಲ್ಕನೇ ಬಾರಿ ಬಿಡ್ಡಿಂಗ್ : 2026ರ ಫೆಬ್ರವರಿಯಲ್ಲಿ ಭೂಮಿ ಪೂಜೆ ?

Advertisement

ಬೆಂಗಳೂರು : ಬೆಂಗಳೂರು ಟನಲ್ ರಸ್ತೆಗೆ ನಾಲ್ಕನೇ ಬಾರಿ ನಡೆದ ಬಿಡ್ಡಿಂಗ್ ಪ್ರಕ್ರಿಯೆ ಸಕಾರಾತ್ಮಕವಾಗಿ ನಡೆಯುತ್ತಿದೆ. ದೊಡ್ಡ ದೊಡ್ಡ ಕಂಪನಿಗಳು ಬಿಡ್ ಸಲ್ಲಿಸಿರುವುದರಿಂದ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಈ ಬಾರಿ ಫಲಿತಾಂಶ ‘ಪಾಸಿಟಿವ್’ ಆಗಿದೆ ಎಂದು ತಿಳಿಸಿದೆ. ಈ ಯೋಜನೆಗೆ ಫೆಬ್ರವರಿಯಲ್ಲಿ ಭೂಮಿಪೂಜೆ ನಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.

Advertisement

18,000 ಕೋಟಿ ರೂಪಾಯಿ ವೆಚ್ಚದ ಸುರಂಗ ರಸ್ತೆ ಯೋಜನೆಯು ಬೆಂಗಳೂರು ಉತ್ತರದಲ್ಲಿರುವ ಎಸ್ಟೀಮ್ ಮಾಲ್‌ನಿಂದ ದಕ್ಷಿಣದಲ್ಲಿರುವ ಸಿಲ್ಕ್ ಬೋರ್ಡ್ ವರೆಗೆ ನಿರ್ಮಾಣವಾಗಲಿದೆ. ಮಂಗಳವಾರ, ಬಿಡ್ಡಿಂಗ್‌ನ ಕೊನೆಯ ದಿನದಂದು, ಅದಾನಿ, ಟಾಟಾ ಗ್ರೂಪ್‌ನಂತಹ ದೊಡ್ಡ ಕಂಪನಿಗಳು ಆನ್‌ಲೈನ್‌ನಲ್ಲಿ ತಮ್ಮ ಬಿಡ್‌ಗಳನ್ನು ಸಲ್ಲಿಸಿವೆ. ಮುಂದಿನ ದಿನಗಳಲ್ಲಿ ಬಿಡ್‌ಗಳನ್ನು ಒಂದು ಸಮಿತಿಯ ಮುಂದೆ ತೆರೆಯಲಾಗುತ್ತದೆ. ಅರ್ಹ ಬಿಡ್ಡರ್‌ಗಳ ಪಟ್ಟಿಯನ್ನು ಪ್ರಕಟಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಾಂತ್ರಿಕ ಬಿಡ್‌ಗಳ ಅರ್ಹತೆ ನಂತರ, ಹಣಕಾಸಿನ ಬಿಡ್ ನಡೆಯುತ್ತದೆ. ಡಿಸೆಂಬರ್ 10ರ ವೇಳೆಗೆ, ಅತಿ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಿದ ಕಂಪನಿಗಳ ಹೆಸರನ್ನು ಪ್ರಕಟಿಸಲಾಗುವುದು. ಜನವರಿ ಮೊದಲ ವಾರದಲ್ಲಿ, ರಾಜ್ಯ ಸರ್ಕಾರ ಆಯ್ಕೆಯಾದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಟೆಂಡರ್‌ಗಳನ್ನು ಅಂತಿಮಗೊಳಿಸುತ್ತದೆ. ಉತ್ತರ-ದಕ್ಷಿಣ ಸುರಂಗ ರಸ್ತೆಯ ಭೂಮಿಪೂಜೆ 2026ರ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆ ಇದೆ,” ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ