ವಾಷಿಂಗ್ಟನ್ : ಭಾರತದ ಮೇಲೆ ವಿಧಿಸಿದ್ದ ಸುಂಕ ಕಡಿಮೆ ಮಾಡಲು ಸಜ್ಜಾದ ಟ್ರಂಪ್

Advertisement

ವಾಷಿಂಗ್ಟನ್ : ಭಾರತದ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದಿಂದ ಅಮೆರಿಕಗೆ ರಫ್ತಾಗುವ ವಸ್ತುಗಳ ಮೇಲೆ ಶೇ. 50% ಸುಂಕ ವಿಧಿಸಿದ್ದ ಆದೇಶದಲ್ಲಿ ಸಡಿಲಿಕೆ ಮಾಡುವ ಸೂಚನೆ ದೊರೆತಿದೆ. ಭಾರತದಿಂದ ಅಮೆರಿಕಗೆ ರಫ್ತಾಗುವ ವಸ್ತುಗಳ ಮೇಲೆ ಶೇ.50% ಸುಂಕ ವಿಧಿಸಿದ್ದ ಸುಂಕಗಳಿಗೆ ಮುಕ್ತಿ ಸಿಗುವ ಕಾಲ ಸನ್ನಿಹಿತವಾದಂತಿದೆ. ಈ ಕುರಿತು ಸ್ವತಃ ಟ್ರಂಪ್‌ ಹೇಳಿಕೆ ನೀಡಿ ಭಾರತದ ಮೇಲಿನ ಸುಂಕವನ್ನು ಕಡಿಮೆ ಮಾಡುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ಮತ್ತೆ ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿದೆ ಎಂದೂ ಅವರು ಪುನರುಚ್ಚರಿಸಿದ್ದಾರೆ.

Advertisement

ಓವಲ್‌ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, “ಭಾರತದ ಮೇಲಿನ ಸುಂಕಗಳು ರಷ್ಯಾದ ತೈಲ ವ್ಯಾಪಾರದ ಕಾರಣದಿಂದಾಗಿ ತುಂಬಾ ಹೆಚ್ಚಿಸಿದ್ದೆವು, ಆದರೆ ಭಾರತ ರಷ್ಯಾದ ತೈಲ ಖರೀದಿಯನ್ನು ಗಣನೀಯವಾಗಿ ನಿಲ್ಲಿಸಿದ್ದಾರೆ ಹಾಗಾಗಿ ನಾವು ಸುಂಕವನ್ನು ಕಡಿಮೆ ಮಾಡಲಿದ್ದೇವೆ. ಒಂದು ಹಂತದಲ್ಲಿ, ನಾವು ಅದನ್ನು ಕಡಿಮೆ ಮಾಡುತ್ತೇವೆ” ಎಂದು ತಿಳಿಸಿದ್ದಾರೆ. ಅಲ್ಲದೆ, ನಾವು ಭಾರತದೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಇದು ಹಿಂದಿನ ಒಪ್ಪಂದಗಳಿಗಿಂತ ಭಿನ್ನವಾಗಿರಲಿದೆ. ಈಗ ಅವರು ನನ್ನನ್ನು ಇಷ್ಟಪಡದೇ ಇರಬಹುದು, ಆದರೆ ಮುಂದೆ ಇಷ್ಟ ಪಡುತ್ತಾರೆ ಎಂದಿರುವ ಟ್ರಂಪ್‌ ನಮ್ಮ ಹಿಂದಿನ ಒಪ್ಪಂದಗಳು ನ್ಯಾಯಯುತವಾಗಿರಲಿಲ್ಲ.ಆದರೆ ಈಗ ನಾವು ನ್ಯಾಯಯುತವಾದ ಒಪ್ಪಂದಗಳನ್ನು ಮಾಡಿಕೊಳ್ಳಲಿದ್ದೇವೆ ಅದು ಬಹಳ ಶೀಘ್ರವೇ ಆಗಲಿದೆ ಎಂದು ಹೇಳಿದ್ದಾರೆ.

Advertisement

ಇನ್ನು ಈ ನಡುವೆ ಹಲವು ಬಾರಿ ಟ್ರಂಪ್‌ ಭಾರತ ಈಗಾಗಲೇ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲಿದೆ ಎಂದು ನನಗೆ ಭರವಸೆ ನೀಡಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಭಾರತ ಮಾತ್ರ ತೈಲ ಖರೀದಿಯಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಲೇ ಬಂದಿದೆ. ಈ ಮಧ್ಯೆ ಟ್ರಂಪ್‌ ಖುದ್ದಾಗಿ ಸುಂಕ ಕಡಿಮೆ ಮಾಡುವುದರ ಜೊತೆಗೆ ಭಾರತದೊಂದಿಗೆ ಹೊಸ ಒಪ್ಪಂದವನ್ನು ಮಾಡಿಕೊಳ್ಳಲು ಸಿದ್ದರಾಗಿದ್ದೇವೆ ಎಂದು ಹೇಳಿರುವುದು ಸುಂಕದಿಂದ ಹಳಸಿದ್ದ ದ್ವೀಪಕ್ಷೀಯ ಸಂಬಂಧ ಸುಂಕದಿಂದಲೇ ಸುಧಾರಿಸಲಿದೆಯೇ ಎಂದು ನೋಡಬೇಕಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ