ಹಾಸನ : ಭೀಮನ ಮೇಲೆ ಕಲ್ಲು ತೂರಿದ ಅಸ್ಸಾಂ ಮೂಲದ ಕಾರ್ಮಿಕ – ಪುಂಡನ ವಿರುದ್ಧ ಕ್ರಮಕ್ಕೆ ಆಗ್ರಹ !

Advertisement

ಹಾಸನ, ಜು. 14 : ಜನರ ಪ್ರೀತಿಯ, ಸೌಮ್ಯ ಸ್ವಭಾವದ ಕಾಡಾನೆ ಭೀಮನ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟಗೈದಿರುವ ಘಟನೆ ಸಕಲೇಶಪುರದ ಒಸ್ಸೂರು ಎಸ್ಟೇಟ್‌ನಲ್ಲಿ ವರದಿಯಾಗಿದೆ. ಕಲ್ಲು ತೂರಾಟ ನಡೆಸಿದ ಅಸ್ಸಾಂ ಮೂಲದ ಕಾರ್ಮಿಕನ ವಿರುದ್ಧ ಸ್ಥಳೀಯರು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

Advertisement

ಸಕಲೇಶಪುರದ ಒಸ್ಸೂರು ಎಸ್ಟೇಟ್‌ನಲ್ಲಿ ಅಸ್ಸಾಂನಿಂದ ಬಂದ ಕಾರ್ಮಿಕ ನೆಲೆಸಿದ್ದ ಲೈನ್‌ ಮನೆಗಳ ಬಳಿ ಇಂದು (ಜು.14) ಬೆಳಿಗ್ಗೆ ಕಾಡಾನೆ ಭೀಮ ಸಾಗುತ್ತಿತ್ತು. ಈ ವೇಳೆ ಅಸ್ಸಾಂ ಮೂಲದ ಕಾರ್ಮಿಕ ಕಲ್ಲು ತೂರಾಟ ನಡೆಸಿ ಪುಂಡಾಟ ಮೆರೆದಿದ್ದಾನೆ. ಪದೇ ಪದೇ ಕಲ್ಲು ತೂರಾಟ ನಡೆಸಿದ್ದರಿಂದ ಸಿಟ್ಟಿಗೆದ್ದ ಭೀಮ ಘೀಳಿಟ್ಟು ಕಾರ್ಮಿಕನತ್ತ ನುಗ್ಗಲು ಯತ್ನಿಸಿದೆ. ಅಲ್ಲದೆ, ಘೀಳಿಡುತ್ತಾ ತಿರುಗಿ ತಿರುಗಿ ನೋಡುತ್ತ ಭೀಮ ಓಡಿ ಹೋಗಿದೆ.

Advertisement

ಅಸ್ಸಾಂ ಕಾರ್ಮಿಕನ ಅಮಾನವೀಯ ನಡೆಗೆ ಸ್ಥಳೀಯರು ಹಾಗೂ ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಯಾರಿಗೂ ತೊಂದರೆ ಕೊಡದ ಸೌಮ್ಯ ಸ್ವಭಾವದ ಕಾಡಾನೆ ಭೀಮನಿಗೆ ಕಲ್ಲಿನಿಂದ ಹೊಡೆದು ಹಿಂಸಿಸಿರುವ ದುರುಳನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ‌.

ಇನ್ನು, ಜನರ ಅಚ್ಚುಮೆಚ್ಚಿನ ಭೀಮನಿಗೆ ಪುಂಡ ಕಲ್ಲಿನಿಂದ ಹೊಡೆಯುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಹಾಸನ ಜಿಲ್ಲೆಯ ಮಲೆನಾಡು ಭಾಗದ ಜನರ ಪ್ರೀತಿಗೆ ಪಾತ್ರವಾಗಿರುವ ಕಾಡಾನೆ ಭೀಮ ಗ್ರಾಮದೊಳಗೆ, ವಾಹನ ದಟ್ಟನೆ ಇರುವ ರಸ್ತೆಗಳಲ್ಲಿ ಸಲಿಸಾಗಿ ಓಡಾಡುತ್ತದೆ. ಆದರೆ, ಇಲ್ಲಿಯವರೆಗೆ ಯಾರ ಮೇಲೂ ದಾಳಿ ಮಾಡಿರುವ ವರದಿಯಾಗಿಲ್ಲ, ತನ್ನಷ್ಟಕ್ಕೆ ಇರುವ ಕಾಡಾನೆ ಈ ಭೀಮನನ್ನು ಕಂಡರೆ ಜನರಿಗೂ ಅಚ್ಚುಮೆಚ್ಚು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ