ಬಿಹಾರದಲ್ಲಿ ಮ್ಯಾಜಿಕ್ ನಂಬರ್ ದಾಟುವುದೇ ಎನ್ ಡಿಎ ?

Advertisement

ಪಾಟ್ನಾ : ಭಾರೀ ಕುತೂಹಲ ಮೂಡಿಸಿರುವ ಬಿಹಾರ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಎನ್ ಡಿಎ ಗೆಲುವು ಖಚಿತವೆಂದರೂ, ಬಿಹಾರದ ಜನತೆ ಯಾರ ಕೈ ಹಿಡಿಯಲಿದ್ದಾರೆಂಬುದು ಕಾದು ನೋಡಬೇಕಿದೆ. ಜಿದ್ದಾಜಿದ್ದಿನ ಬಿಹಾರ ಚುನಾವಣಾ ಮತಎಣಿಕೆ ಇಂದು ಬೆಳಗ್ಗೆ 8ಗಂಟೆಗೆ ಆರಂಭವಾಗಿದೆ. ಈಗಾಗಲೇ ಮತಯಂತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು, ಯಾರಿಗೆ ಅಧಿಕಾರದ ಗದ್ದುಗೆ ದೊರಕಲಿದೆ ಎಂಬುದು ಮಧ್ಯಾಹ್ನದೊಳಗೆ ಒಂದು ಚಿತ್ರಣ ಲಭ್ಯವಾಗಲಿದೆ.

Advertisement
  • ಆರಂಭದಲ್ಲೇ ಮುನ್ನಡೆ ಕಾಯ್ದುಕೊಂಡಿರುವ ಎನ್ ಡಿಎ ಮೈತ್ರಿಕೂಟ, ಅಧಿಕಾರದ ಗದ್ದುಗೆ ಏರುವ ಮ್ಯಾಜಿಕ್ ನಂಬರ್ ದಾಟಿ ಭರ್ಜರಿ ಮುನ್ನಡೆಯತ್ತ ದಾಪುಗಾಲಿಟ್ಟಿದೆ.
  • ಆರ್ ಜೆಡಿ ಪ್ರಾಬಲ್ಯ ಹೊಂದಿರುವ ಬಿಹಾರದ ಭೋಜ್ ಪುರ್ ಪ್ರದೇಶದಲ್ಲಿ ಎನ್ ಡಿಎ ತೀವ್ರ ಪೈಪೋಟಿ ನೀಡುತ್ತಿದೆ ಎಂದು ವರದಿ ತಿಳಿಸಿದೆ. ಎನ್ ಡಿಎ ಮೈತ್ರಿಕೂಟ 150 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
  • ಪ್ರಸ್ತುತ ಟ್ರೆಂಡ್ ಪ್ರಕಾರ ಆಡಳಿತಾರೂಢ ಎನ್ ಡಿಎ ಮೈತ್ರಿಕೂಟ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.
  • ಆರಂಭಿಕ ಮಾಹಿತಿ ಪ್ರಕಾರ, ಭಾರತೀಯ ಜನತಾ ಪಕ್ಷ ನೇತೃತ್ವದ ಎನ್ ಡಿಎ ಮೈತ್ರಿಕೂಟ 130ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಆರ್ ಜೆಡಿ, ಕಾಂಗ್ರೆಸ್ ಮೈತ್ರಿಕೂಟದ ಮಹಾಘಟಬಂಧನ್ 68 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) ಅಥವಾ ಬಿಜೆಪಿ ನೇತೃತ್ವದ ಎನ್‌ಡಿಎ ಹೊಸ ಅವಧಿಗೆ ಗೆಲ್ಲುತ್ತದೆಯೇ ಅಥವಾ ತೇಜಸ್ವಿ ಯಾದವ್ ಅವರ ಆರ್‌ಜೆಡಿ ನೇತೃತ್ವದ ಭಾರತ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಬಹುದೇ ? ಒಟ್ಟಾರೆಯಾಗಿ ಬಿಹಾರದ ಗದ್ದುಗೆ ಯಾರ ಪಾಲಾಗಲಿದೆ ಎಂದು ಕಾದುನೋಡಬೇಕಿದೆ. ಎರಡು ಹಂತಗಳಲ್ಲಿ ನಡೆದ ಚುನಾವಣೆಯು ನವೆಂಬರ್ 11 ರಂದು ಅಂತಿಮ ಸುತ್ತಿನ ಮತದಾನ ಮುಕ್ತಾಯಗೊಂಡಿತ್ತು. ಬಿಹಾರದಲ್ಲಿ ಈ ಬಾರಿ ಅಭೂತಪೂರ್ವ ಮಟ್ಟದ ಮತದಾರರ ಭಾಗವಹಿಸುವಿಕೆ ಕಂಡುಬಂದಿದ್ದು, ತೀವ್ರ ಪೈಪೋಟಿಯ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿದೆ.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ