ಕುವೆಟ್ಟು ಮತ್ತು ಓಡಿಲ್ನಾಳ ಬಿಜೆಪಿ ಶಕ್ತಿ ಕೇಂದ್ರಗಳ ಅಭ್ಯಾಸ ವರ್ಗ

ಕುವೆಟ್ಟು : ಕುವೆಟ್ಟು ಮತ್ತು ಓಡಿಲ್ನಾಳ ಬಿಜೆಪಿ ಶಕ್ತಿ ಕೇಂದ್ರಗಳ ಅಭ್ಯಾಸವರ್ಗ ಕಾರ್ಯಕ್ರಮ ನ. 16 ರಂದು ಕುವೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಕುಲಾಲ್ ಅವರ ಮನೆಯಲ್ಲಿ ನಡೆಯಿತು. ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿರುವ ಗಂಗಯ್ಯ ಮೂಲ್ಯ ಮತ್ತು ಮಾಜಿ ಕುವೆಟ್ಟು ಪಂಚಾಯತ್ ಅಧ್ಯಕ್ಷ ಅಧ್ಯಕ್ಷರು ಆಗಿದ್ದ ಪೂವಪ್ಪ ಭಂಡಾರಿಯವರು ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಮಂಡಲ ಉಪಾಧ್ಯಕ್ಷ ಕೊರಗಪ್ಪ ಗೌಡ ಉದ್ಘಾಟನಾ ಭಾಷಣ ಮಾಡಿ ಶುಭ ಹಾರೈಸಿದರು.

Advertisement

ನಮ್ಮ ವೈಚಾರಿಕತೆ ಮತ್ತು ಪಂಚ ಪರಿವರ್ತನೆ ವಿಷಯವನ್ನು ಉಮೇಶ್ ನರ್ತಿಕಲ್ಲು ಮಂಡನೆ ಮಾಡಿದರು. ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದೊಂದಿಗೆ ನಮ್ಮ ಪಾತ್ರ ಈ ವಿಷಯವನ್ನು ಸುದೀರ್ ಸುವರ್ಣ ಅಳದಂಗಡಿಯವರು ಮಂಡಿಸಿದರು. ವಿಕಸಿತ ಭಾರತದ ಅಮೃತ ಕಾಲದಲ್ಲಿ ನಮ್ಮ ಸಕ್ರಿಯತೆ ವಿಷಯವನ್ನು ಸೀತಾ ರಾಮ್ ಬೆಲಾಲ್ ಅವರು ಮಂಡಿಸಿದರು. ಬೂತ್ ಷ ಬೈಠಕ್ ಧರ್ಮಸ್ಥಳ ಮಹಾಶಕ್ತಿಕೇಂದ್ರ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆಯವರು ತೆಗೆದುಕೊಂಡು ವರದಿ ಪಡೆದುಕೊಂಡರು.

ಶಾಸಕ ಹರೀಶ್ ಪೂಂಜ ಸಮಾರೋಪ ಭಾಷಣ ಮಾಡಿದರು. ಪಕ್ಷದ ಪ್ರಮುಖರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಧ ಮಮತಾ ಶೆಟ್ಟಿ ದೇವಸ್ಯ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಉಮೇಶ್ ಕುಲಾಲ್, ಹಿಂದುಳಿದ ಮೋರ್ಚಾದ ತಾಲೂಕು ಕಾರ್ಯದರ್ಶಿ ವಿಠಲ ಆಚಾರ್ಯ, ಮಾಜಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕರಾದ ಪ್ರಭಾಕರ್ ಶೆಟ್ಟಿ ಉಪ್ಪಡ್ಕ, ಕುವೆಟ್ಟು ಮಹಾಶಕ್ತಿ ಅಧ್ಯಕ್ಷರಾದ ಚಂದ್ರಕಾಂತ್ ನಿಡ್ಡಾಜೆ, ಕುವೆಟ್ಟು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಶಕ್ತಿನಗರ, ತಿಲಕ್ ಕಂಚಿಂಜ, ಕುವೆಟ್ಟು ಶಕ್ತಿ ಕೇಂದ್ರದ ಅಧ್ಯಕ್ಷರಾದ ಚಂದ್ರಹಾಸ ದಾಸ್,ಓಡಿಲ್ನಾಳ ಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜಪ್ರಕಾಶ್ ಪಡ್ಡೈಲು ಹಾಗು ಕುವೆಟ್ಟು ಮತ್ತು ಓಡಿಲ್ನಾಲ ಭಾಗದ ಪಂಚಾಯತ್ ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಪಂಚಾಯತ್ ಅಧ್ಯಕ್ಷರಾದ ಭಾರತಿ ಶೆಟ್ಟಿಯವರು ಬಿಜೆಪಿ ಗೀತೆಯೊಂದಿಗೆ ಸಂಪದ ಆರಂಭ ಆಗಿ, ಕುಮಾರಿ ರಮ್ಯಾ ಅವರು ವಂದೇಮಾತರಂ ಗೀತೆ ಹಾಡಿದರು. ಬೆಳ್ತಂಗಡಿ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಸ್ವಾಗತಿಸಿದರು, ನಿತಿನ್ ಬರಾಯ ಗ್ರಾಮ ಪಂಚಾಯತ್ ಸದಸ್ಯರು ಕುವೆಟ್ಟು ಧನ್ಯವಾದ ಸಮರ್ಪಿಸಿದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.