ಬಿಜೆಪಿಗೆ ವಿಜಯೇಂದ್ರ ಸಾರಥಿಯಾಗಿ ಫಿಕ್ಸ್ ? : ಬಹುತೇಕ ಸಂಸದರು, ಶಾಸಕರಿಂದ ವಿಜಯೇಂದ್ರಗೆ ಒಲವು

ಬೆಂಗಳೂರು, ಮೇ 22 : ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರೇ ಅಧಿಕೃತವಾಗಿ ಘೋಷಣೆ ಆಗುವುದು ಬಹುತೇಕ ಫಿಕ್ಸ್ ಆಗಿದೆ. ಆಂತರಿಕ ಅಭಿಪ್ರಾಯ ಸಂಗ್ರಹದಲ್ಲೂ ವಿಜಯೇಂದ್ರ ಪರವಾದ ಒಲವು ವ್ಯಕ್ತವಾಗಿದೆ. ಕೆಲವರ ಭಿನ್ನಾಭಿಪ್ರಾಯದ ಹೊರತಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿಜಯೇಂದ್ರ ಅವರೇ ಸಾರಥಿ ಆಗಲಿ ಎಂಬ ಬೆಂಬಲ ವ್ಯಕ್ತವಾಗಿದೆ. ಈ ಆಂತರಿಕ ವರದಿ ರಾಷ್ಟ್ರೀಯ ಅಧ್ಯಕ್ಷರಿಗೆ ಸಲ್ಲಿಕೆ ಆಗಲಿದೆ. ದೆಹಲಿ ಮಟ್ಟದಲ್ಲಿ ಚರ್ಚೆ ನಡೆದ ಬಳಿಕ ಅಧಿಕೃತ ಘೋಷಣೆಯೂ ಹೊರಬೀಳಲಿದೆ.

Advertisement

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಘೋಷಣೆ ವಿಚಾರವಾಗಿ ಗೊಂದಲದ ವಾತಾವರಣ ಇತ್ತು. ಈ ಹಿನ್ನಲೆಯಲ್ಲಿ ಪಕ್ಷದ ಚಟುವಟಿಕೆಗೆಗೂ ಇದು ಹಿನ್ನಡೆ ಉಂಟು ಮಾಡಿತ್ತು. ಈ ಕಾರಣಕ್ಕಾಗಿ ಗೊಂದಲ ಬಗೆಹರಿಸಬೇಕು ಎಂಬ ಬೇಡಿಕೆ ತೀವ್ರಗೊಂಡಿತ್ತು. ಹೀಗಾಗಿ ಕೆಲವು ಹಿರಿಯ ನಾಯಕರಿಂದ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಮತ್ತು ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಬೈಜಯಂತ್ ಪಾಂಡಾ ಅವರು ಅಭಿಪ್ರಾಯ ಸಂಗ್ರಹ ಮಾಡಿದ್ದರು. ಭಾನುವಾರದಂದು ನಿತಿನ್ ನಬಿನ್ ರಾಜ್ಯಕ್ಕೆ ಬಂದು ಹೋದ ಬಳಿಕ ವರದಿ ಸಲ್ಲಿಕೆ ಸಾಧ್ಯತೆ ಇದೆ. ಸೋಮವಾರದ ಬಳಿಕ ರಾಷ್ಟ್ರೀಯ ಅಧ್ಯಕ್ಷರಿಗೆ ಅಭಿಪ್ರಾಯ ಸಂಗ್ರಹಣಾ ವರದಿ ಸಲ್ಲಿಕೆ ಆಗಲಿದೆ.

ಬಹುತೇಕ ವಿಜಯೇಂದ್ರ ಫಿಕ್ಸ್ !

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಹುತೇಕ ಬಿ.ವೈ. ವಿಜಯೇಂದ್ರ ಅವರೇ ಮುಂದುವರಿಯುವ ಸಾಧ್ಯತೆ ಇದೆ. ವಿಜಯೇಂದ್ರ ನಾಯಕತ್ವದ ಬಗ್ಗೆ ಧ್ವನಿ ಎತ್ತಿದ್ದ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರಿಂದಲೂ ಅಭಿಪ್ರಾಯ ಸಂಗ್ರಹಿಸಲಾಗಿದೆ. ರಾಜ್ಯಾಧ್ಯಕ್ಷ ಬದಲಾವಣೆ ಬೇಕಾ ? ಬದಲಿಸಿದರೆ ಯಾರನ್ನು ಮಾಡಬೇಕು ಎಂದು ಸಂಗ್ರಹಿಸಲಾಗಿರುವ ಅಭಿಪ್ರಾಯ ಸಂಗ್ರ ಮಾಡಲಾಗಿದೆ. ಬಂಡಾಯ ಅಥವಾ ಅಸಮಾಧಾನಿತರು ವಿಜಯೇಂದ್ರ ವಿರುದ್ಧ ತಮ್ಮ ಅಭಿಪ್ರಾಯ ಹೊರಹಾಕಿದ್ದರೂ, ಬಹುತೇಕ ಮಂದಿ ವಿಜಯೇಂದ್ರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಆಂತರಿಕ ಅಭಿಪ್ರಾಯ ಸಂಗ್ರಹ ಮಹತ್ವ ಪಡೆದುಕೊಂಡಿದೆ.

ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಬೆಂಗಳೂರಿನಿಂದ ದೆಹಲಿಗೆ ವಾಪಸ್ ಆಗಿದ್ದಾರೆ‌. ಬೆಂಗಳೂರಿನಲ್ಲಿ ಶಿವಪ್ರಕಾಶ್ ಮತ್ತು ಪಾಂಡಾ ಜೊತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನಿಗದಿಯಾಗಿತ್ತು‌. ಆದರೆ ದೆಹಲಿಯಲ್ಲೇ ಜೋಶಿ ಅವರನ್ನು ಶಿವಪ್ರಕಾಶ್ ಮತ್ತು ಪಾಂಡಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಪಕ್ಷ ಸಂಘಟನೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಾಗಿ ನಿನ್ನೆ ಆಯ್ದ ಪ್ರಮುಖರಿಂದ ಅಭಿಪ್ರಾವನ್ನು ಶಿವಪ್ರಕಾಶ್ ಮತ್ತು ಪಾಂಡಾ ಸಂಗ್ರಹ ಮಾಡಿದ್ದರು. ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿ ಕೂಡಾ ಆಗಮಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯದಲ್ಲಿ ಸಕ್ರಿಯವಾಗಿ ಹೋರಾಟ ಸಂಘಟಿಸುತ್ತಾ? ಎಂಬ ಕುತೂಹಲ ತೀವ್ರಗೊಂಡಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.