ಬೆಳ್ತಂಗಡಿ, ಜೂ. 16 : ಹಿಂದೂ ಧರ್ಮದ ಆರಾಧ್ಯ ಮೂರ್ತಿ ಶ್ರೀರಾಮಚಂದ್ರ ದೇವರ ಅವಹೇಳನ ಮತ್ತು ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪಿತ ಪ್ರೋ ಕೆ.ಎಸ್ ಭಗವಾನ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುಬೇಕೆಂದು ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ಆಗ್ರಹಿಸಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿರುವ ಬೆಳ್ತಂಗಡಿ ಯುವ ಮೋರ್ಚಾ ಆರೋಪಿತ ವ್ಯಕ್ತಿಯು ದಾವಣಗೆರೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ “ನೀವು ಪೂಜೆ ಮಾಡುವ ಶ್ರೀ ರಾಮ ಚಂದ್ರ ತಂದೆಗೆ ಹುಟ್ಟಿರಿರುವವನು ಅಲ್ಲ. ಹಿಂದು ದೇವರುಗಳು ಕೊಲೆ ಮಾಡುವ ದೇವರುಗಳು, ರಾಮನ ತಂದೆ ದಶರಥ, ಪುತ್ರ ಕಾಮೇಷ್ಟಿ ಪೂಜೆ ಮಾಡುತ್ತಾನೆ. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ತ್ಯಜಿಸಿದ್ದರು” ಎಂದು ಹೇಳುತ್ತಾ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದಲ್ಲದೆ ಈ ಸಮಾಜದಲ್ಲಿರುವ ಧರ್ಮ-ಧರ್ಮಗಳ ನಡುವೆ ಶಾಂತಿಯನ್ನು ಕದಡಿ ಅಶಾಂತಿಯನ್ನು ಸೃಷ್ಟಿ ಮಾಡುವ ಹುನ್ನಾರ ಸ್ಪಷ್ಟವಾಗಿ ಗೋಚರಿಸುತ್ತಿದೆ. ವಾಲ್ಮೀಕಿ ರಾಮಾಯಣದ ಬಗ್ಗೆ ತಪ್ಪು ಮಾಹಿತಿ ನೀಡಿ ಧರ್ಮ ಗ್ರಂಥದ ಅಪಮಾನ ಮಾಡಿದ್ದಾರೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ತೀವ್ರವಾಗಿ ಧಕ್ಕೆಯನ್ನು ಉಂಟುಮಾಡಿದ್ದು ಸಮಾಜದಲ್ಲಿ ಅಶಾಂತಿ ಉದ್ದೀಗ್ನತೆ ಹಾಗೂ ವಿವಿಧ ಸಮುದಾಯದ ವೈಮನಸ್ಸುವುಂಟು ಮಾಡಿ ಹಿಂದೂ ಧರ್ಮದ ದೇವರ ನಂಬಿಕೆಗಳ ಅವಹೇಳನ ಮಾಡಿರುವ ಪ್ರೋ ಕೆ.ಎಸ್ ಭಗವಾನ್‌ರವರ ಮೇಲೆ ಕಾನೂನು ಕ್ರಮ ಜರುಗಿಸಿಬೇಕೆಂದು ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ, ಉಪಾಧ್ಯಕ್ಷರಾದ ಗಣೇಶ್ ಲಾಯಿಲ ಹಾಗೂ ಹರೀಶ್ ಸಂಬೋಳ್ಯ, ಕಾರ್ಯದರ್ಶಿಗಳಾದ ಸುಧೀರ್ ಚಾರ್ಮಾಡಿ ಹಾಗೂ ಜಗದೀಶ್ ಕನ್ನಾಜೆ, ನಗರ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಶರತ್ ಕುಮಾರ್, ಯುವ ಮೋರ್ಚಾ ಸದಸ್ಯರಾದ ಪವನ್ ಬಂಗೇರ, ಮಂಜುನಾಥ್ ರೆಂಕೆದಗುತ್ತು ಮತ್ತು ಯೋಗೀಶ್ ಶಿಶಿಲ ಉಪಸ್ಥಿತರಿದ್ದರು.


