ಬೆಳ್ತಂಗಡಿ : ರಾತ್ರೋರಾತ್ರಿ ಕಳ್ಳರ ಕೈ ಚಳಕ : 10 ಅಂಗಡಿ, ವಕೀಲ ಕಚೇರಿಗೆ ನುಗ್ಗಿದ ಕಳ್ಳರು ನಗದು ದೋಚಿ ಪರಾರಿ

ಬೆಳ್ತಂಗಡಿ, ಮೇ 19 : ಬೆಳ್ತಂಗಡಿಯ ರಾತ್ರೋರಾತ್ರಿ ಹತ್ತು ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ದೋಚಿ ಪರಾರಿಯಾದ ಘಟನೆ ಮೇ.18ರ ರಾತ್ರಿ ನಡೆದಿದೆ.

Advertisement

ಕೋರ್ಟ್ ರಸ್ತೆಯ ಧರ್ಮಶ್ರೀ ಬಿಲ್ಡಿಂಗ್ ನ ಸಮೃದ್ಧಿ ಎಂಟರ್ಪ್ರೈಸಸ್ ನಿಂದ ಸುಮಾರು 1.50 ಲಕ್ಷ ನಗದು ಹಾಗೂ ಸಿಸಿ ಕ್ಯಾಮೆರಾವನ್ನು ಹಾನಿಗೊಳಿಸಿ ಮೆಮೊರಿ ಕಾರ್ಡ್ ನ್ನು ಪಡೆದು ಪರಾರಿಯಾಗಿದ್ದಾರೆ. ಹಾಗೂ ಅದೇ ಕಟ್ಟಡದ ಮಹಮ್ಮದ್ ಹನೀಫ್ ರವರ ಟಿ.ಎಚ್ ರಿಯಲ್ ಎಸ್ಟೇಟ್ ಕಚೇರಿ, ಕಟ್ಟಡ ಮಾಲಕರ ಕಚೇರಿ ಸೇರಿದಂತೆ ವಕೀಲರುಗಳಾದ ರಾಧಾಕೃಷ್ಣ, ಉಷಾ ಎನ್.ಜಿ, ಯತೀಶ್ ಶೆಟ್ಟಿ ಪಿ ಕಚೇರಿಗಳಿಗೆ ನುಗ್ಗಿದ್ದಾರೆ.

ಮೂರು ಮಾರ್ಗದ ಬಳಿ ಇರುವ ಮಾತೃಶ್ರೀ ಹೋಟೆಲ್ ನಲ್ಲಿದ್ದ ಡಬ್ಬಿಯಿಂದ ರೂ. 5000 ಸಾವಿರ ರೂ. ಹಾಗೂ ಡ್ರಾವರ್ ನಿಂದ 2000 ಸಾವಿರ ರೂ., ಶಬರಿ ಎಂಟರ್ಪ್ರೈಸಸ್ ಸುಮಾರು 2 ಸಾವಿರ ರೂ., ಜಯರಾಮ ಮಣಿಯಾಣಿ ವಕೀಲರ ಕಚೇರಿ, ಮೆ| ಹಿಮಾಲಯ ಫೈನಾನ್ಸ್ ಮತ್ತು ಇನ್ವೆಸ್ಟ್ಮೆಂಟ್, ಜಿತೇಶ್ ಕೆ ವಕೀಲರ ಕಚೇರಿಗೆ ನುಗ್ಗಿದ್ದಾರೆ.

ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಹೆಚ್ಚುತ್ತಿದೆ ಕಳ್ಳರ ಕಾಟ :

ಕಳೆದ ಹಲವಾರು ದಿನಗಳಿಂದ ಬೆಳ್ತಂಗಡಿ ತಾಲೂಕಿನ ಹಲವೆಡೆ ಕಳ್ಳರ ಕಾಟ ಹೆಚ್ಚುತ್ತಲೇ ಇದೆ. ತಾಲೂಕಿನ ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನ, ಶ್ರೀ ಮಹಾಗಣಪತಿ ದೇವಸ್ಥಾನ ನಿಡಿಗಲ್ ಸೇರಿದಂತೆ ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿಯ ಮನೆಯಲ್ಲಿ ಕಳ್ಳತನ ಕೃತ್ಯಗಳು ನಡೆದು ಹಲವು ದಿನಗಳು ಕಳೆದರೂ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಇದೀಗ ಬೆಳ್ತಂಗಡಿ ನಗರ ಭಾಗದಲ್ಲೇ ಕಳ್ಳತನ ನಡೆದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.