ಸ್ಥಳೀಯ ಅಂಗಡಿಯಲ್ಲಿ ಸಿಗುವ 5ರೂ. ಬೋಟಿಗೆ ಪಬ್‌ನಲ್ಲಿ 150 ರೂ. ಪಾವತಿಸಿದ ಗ್ರಾಹಕ !

ಬೆಂಗಳೂರು, ಏ. 02 : ಬೆಂಗಳೂರಿನಲ್ಲಿನ ಕೆಲವೊಂದು ಪಬ್ ತುಂಬಾ ದುಬಾರಿಯಾಗಿರುತ್ತದೆ. ಅಂಗಡಿಯಲ್ಲಿ ಸಿಗುವ 5 ರೂ. ಬೋಟಿಗೆ ಪಬ್‌ವೊಂದರಲ್ಲಿ 150 ರೂ. ಪಾವತಿಸಿರುವ ಬಗ್ಗೆ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದನ್ನ ಹಂಚಿಕೊಂಡಿದ್ದಾರೆ.

Advertisement

ಇದೀಗ ಈ ದುಬಾರಿ ಪಬ್ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅರುಣ್‌ರಾಜ್ ಪತ್ತಾರ್ ಅವರು, “ಇದನ್ನು ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್ ಎಂದು ಕರೆಯಲಾಗುತ್ತಿತ್ತು. ನಾನು ಇದನ್ನು ಆರ್ಡರ್ ಮಾಡಿದಾಗ ಅವರು ನನಗೆ ತಂದಿದ್ದು ಇದನ್ನೇ. ಪ್ರಪಂಚದಲ್ಲಿ ಹಾಗೂ ನಮ್ಮ ರಕ್ತ ಸಂಬಂಧದಲ್ಲಿ ಇದಕ್ಕೆ 150 ಪಾವತಿಸಿದ ಮೊದಲಿಗ ನಾನು” ಎಂದು ಬರೆದುಕೊಂಡಿದ್ದಾರೆ.

ಸದ್ಯ ಇವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಈ ಬಗ್ಗೆ ನೆಟ್ಟಿಗರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ‘ಅಬ್ಬಾ ನಾನು ಒಬ್ಬನೇ ಇಂತಹ ವಂಚನೆಗೆ ಒಳಾಗಾಗಿಲ್ಲ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದರೆ, ‘ಉತ್ತಮ ಮಾರ್ಕೆಟಿಂಗ್‌ನೊಂದಿಗೆ ಸರಳವಾದ ವಸ್ತುಗಳನ್ನು ಅತ್ಯಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಎಂದು ಹೇಳುತ್ತಾರೆ’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

‘ಕೊನೆಗೂ ನನ್ನಂತೆಯೇ ವಂಚನೆಗೊಳಗಾದ ವ್ಯಕ್ತಿಯನ್ನು ನೋಡಿದೆ’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ‘ಬೆಂಗಳೂರು ಯಾವುದೇ ಬೆಲೆಗೆ ಏನು ಬೇಕಾದರೂ ಮಾರಾಟ ಮಾಡಬಹುದು’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ‘ಇದನ್ನು ಸಾಮಾನ್ಯ ಭಾಷೆಯಲ್ಲು ಬೋಟಿ ಎಂದು ಕರೆಯುತ್ತಾರೆ. ಇದು ನಮ್ಮ ಮನೆ ಹತ್ತಿರದಲ್ಲಿರುವ ಅಂಗಡಿಯಲ್ಲಿ 5 ರೂ.ಗೆ ಸಿಗುತ್ತದೆ’ ಎಂದು ಮತ್ತೊಬ್ಬರು ತಿಳಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.