ಧರ್ಮಸ್ಥಳ, ಆ. 28 : ಗ್ರಾಮದ ಮಣ್ಣಸಂಕ ಸಮೀಪ ಬಸ್ ಹಾಗೂ ಕಾರು ಅಪಘಾತಗೊಂಡಿರುವ ಘಟನೆ ವರದಿಯಾಗಿದೆ. ಅಪಘಾತದಲ್ಲಿ ಕಾರು ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ಏಕ ಮುಖ ಚಲನೆಯ ರಸ್ತೆಯಲ್ಲಿ ದ್ವಿಮುಖ ಚಾಲನೆಗೆ ಅವಕಾಶ ನೀಡಲಾಗಿತ್ತು. ಕಾರು ಚಾಲಕ ಅನಂತ ರಾಮ ನೂರಿತ್ತಾಯರವರು ಗಾಯಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.




