ಚಾಮರಾಜನಗರ, ಆ. 15 : ವನ್ಯಜೀವಿಗಳ ಬೇಟೆಗೆ ಕಾಡಿಗೆ ಪ್ರವೇಶಿಸಿದ್ದ ಬೇಟೆಗಾರರು ಅರಣ್ಯ ಇಲಾಖೆ ಗುಂಡೇಟಿಗೆ ಬಲಿಯಾದ ಘಟನೆ ಶನಿವಾರ (ಆ.15) ಮುಂಜಾನೆ ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯ (ಮರಿಯಮಂಗಲ) ಪ್ರದೇಶದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶಾಗ್ಯದಲ್ಲಿ ಈ ಘಟನೆ ನಡೆದಿದೆ. ಮೃತ ಬೇಟೆಗಾರನ್ನು ಅಂತೋಣಿಸ್ವಾಮಿ, ಪೀಟರ್ ಹಾಗೂ ಕುಮಾರ್ ಎಂದು ಗುರುತಿಸಲಾಗಿದೆ.
ಈ ಬೇಟೆಗಾರರು ವನ್ಯಜೀವಿ ಬೇಟೆಗೆ ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದಿ ಬೆನ್ನಟ್ಟಿದ್ದಾರೆ. ಈ ವೇಳೆ ಬೇಟೆಗಾರರು ಏಕಾಏಕಿ ಅರಣ್ಯ ಸಿಬ್ಬಂದಿ ಮೇಲೆ ಗುಂಡು ಹಾರಿಸಲು ಮುಂದಾಗಿದ್ದಾರೆ. ಈ ವೇಳೆ ಶೂಟೌಟ್ ನಡೆದಿದೆ. ಗುಂಡಿನ ಕಾಳಗದಲ್ಲಿ ಮೂವರು ಬೇಟೆಗಾರರು ಸಾವನ್ನಪ್ಪಿದ್ದಾರೆ.




