ಬೆಳ್ತಂಗಡಿ : ಅರಣ್ಯ ಇಲಾಖೆಯಿಂದ ಸಿಗದ ಅನುಮತಿ – ಕಾಮಗಾರಿ ಆರಂಭಕ್ಕೆ ತೊಡಕು

ಚಾರ್ಮಾಡಿ, ಮಾ. 31 : ಈಗಾಗಲೇ ಆರಂಭವಾಗಬೇಕಾಗಿದ್ದ ಚಾರ್ಮಾಡಿ ಘಾಟಿಯ ಅಭಿವೃದ್ಧಿ ಕಾಮಗಾರಿ ಈ ಬಾರಿಯ ಮಳೆಗಾಲಕ್ಕೂ ಮುನ್ನ ಆರಂಭವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಅರಣ್ಯ ಇಲಾಖೆಯಿಂದ ಅನುಮತಿ ಸಿಗದಿರುವುದು ಕಾಮಗಾರಿ ಆರಂಭಕ್ಕೆ ತೊಡಕಾಗಿದೆ.

ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟಿ ವಿಭಾಗದ ದಕ ಜಿಲ್ಲೆಯ 11 ಕಿ.ಮೀ. ವ್ಯಾಪ್ತಿಯಲ್ಲಿ ಸರಾಸರಿ 10 ಮೀ. ವರೆಗೆ ರಸ್ತೆಯನ್ನು ಅಗಲಗೊಳಿಸುವ ಕೇಂದ್ರ ಸರಕಾರದ ಯೋಜನೆಗೆ 343 ಕೋಟಿ ರೂ. ಮೀಸಲಿರಿಸಿದ್ದು, ಶೇ.41 ರಷ್ಟು ಕಡಿಮೆ ಮೌಲ್ಯಕ್ಕೆ ಎಸ್‌ಎಲ್‌ವಿ ಕನ್‌ಸ್ಟ್ರಕ್ಷನ್‌ ಕಂಪನಿಗೆ ಕಾಮಗಾರಿ ದೊರಕಿದೆ. ಈ ಕುರಿತು ಕಾರ್ಯಾದೇಶ ನೀಡಲಾಗಿದ್ದು, ಇಷ್ಟರೊಳಗೆ ಕಾಮಗಾರಿ ಆರಂಭವಾಗಬೇಕಿತ್ತು.

ಚಾರ್ಮಾಡಿ ಘಾಟಿ ವಿಭಾಗದ 25 ಕಿ.ಮೀ. ವ್ಯಾಪ್ತಿ ಇದ್ದು 11 ಕಿ.ಮೀ. ದಕ ಜಿಲ್ಲೆ ಹಾಗೂ ಉಳಿದ ಭಾಗ ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿದೆ. 2019 ರ ಭಾರಿ ಮಳೆ, ಪ್ರವಾಹದ ವೇಳೆ ಚಾರ್ಮಾಡಿ ಘಾಟಿ ಸಂಪೂರ್ಣ ಹಾನಿಗೊಳಗಾಗಿತ್ತು. ಬಳಿಕ ಸುಮಾರು ಒಂದು ವರ್ಷ ಕಾಲ ವಾಹನ ಸಂಚಾರಕ್ಕೆ ನಿಷೇಧ ಹೇರಿ ಕಾಮಗಾರಿ ನಡೆಸಲಾಗಿತ್ತು. ಮೊದಲಿಗೆ ಬೆಳಗ್ಗೆ 6 ರಿಂದ ಸಂಜೆ 6 ರ ತನಕ ಬಳಿಕ ದಿನದ 24 ಗಂಟೆಯೂ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಚಾರ್ಮಾಡಿ ಘಾಟಿ ಭಾಗವನ್ನು ಆ ಸಮಯ ಸಾಕಷ್ಟು ಅಗಲಗೊಳಿಸಲಾಗಿದೆ. ಈ ಕಾಮಗಾರಿ ಬಳಿಕ ಘಾಟಿ ವಿಭಾಗದ ಓಡಾಟಕ್ಕೆ ಅನುಕೂಲವಾಗಿದೆ ಹಾಗೂ ಮಳೆಗಾಲದಲ್ಲೂ ಹೆಚ್ಚಿನ ಸಮಸ್ಯೆಗಳು ಕಂಡುಬಂದಿಲ್ಲ.

ಅರಣ್ಯ ಇಲಾಖೆಯಿಂದ ಸಿಗದ ಅನುಮತಿ :
ಚಾರ್ಮಾಡಿ ಘಾಟಿ ಅಭಿವೃದ್ಧಿಗೆ ಹಲವಾರು ಮರಗಳು ತೆರವುಗೊಳ್ಳಬೇಕಿದ್ದು, ಇದಕ್ಕೆ ಅರಣ್ಯ ಇಲಾಖೆ ಅನುಮತಿ ಅಗತ್ಯವಾಗಿದೆ. ಈ ಘಾಟಿಯಲ್ಲಿ ಸಾಕಷ್ಟು ವನ್ಯಜೀವಿಗಳು ತಿರುಗಾಡುತ್ತಿದ್ದು ವನ್ಯಜೀವಿಗಳ ಸಂಚಾರಕ್ಕೆ ಬೇಕಾದ ಯೋಜನೆ, ಮಣ್ಣಿನ ಪರೀಕ್ಷೆ ಇತ್ಯಾದಿ ನಡೆಸುವುದು ಅಗತ್ಯವಾಗಿದೆ. ಮರಗಳನ್ನು ಕಡಿಯುವ ಪ್ರಕ್ರಿಯೆಗೆ ಗಿಡಗಳನ್ನು ನೆಡಲು ಕಂದಾಯ ಭೂಮಿ ಒದಗಿಸಬೇಕು. ಈ ಎಲ್ಲ ಪ್ರಕ್ರಿಯೆಗಳ ಕುರಿತು ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಕೇಂದ್ರ ಸರಕಾರ ಸಹಿತ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ.ಆದರೆ ಇನ್ನೂ ಕೂಡ ಅನುಮತಿ ಸಿಕ್ಕಿಲ್ಲ.

ಏಪ್ರಿಲ್‌ ಮೇ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಾಗ ಮಳೆ ಸುರಿಯುತ್ತದೆ. ಜೂನ್‌ ವೇಳೆಗೆ ಮಳೆಗಾಲ ಆರಂಭವಾಗುತ್ತದೆ. ಮಳೆ ಆರಂಭವಾದ ಬಳಿಕ ಕಾಮಗಾರಿ ನಡೆಸುವುದು ಕಷ್ಟ ಸಾಧ್ಯ. ಇದರಿಂದ ಘಾಟಿ ಅಭಿವೃದ್ಧಿ ಕಾಮಗಾರಿ ಈ ಬಾರಿ ಆರಂಭವಾಗುವ ಸಾಧ್ಯತೆ ತೀರಾ ಕಡಿಮೆ.

ಸಂಪರ್ಕ ರಸ್ತೆ
ಚಾರ್ಮಾಡಿ ಘಾಟಿಗೆ ಸಂಪರ್ಕ ಕಲ್ಪಿಸುವ ಪುಂಜಾಲಕಟ್ಟೆ- ಚಾರ್ಮಾಡಿ ರಸ್ತೆಯ ಅಭಿವೃದ್ಧಿ ಕಾಮಗಾರಿ ಕಳೆದ ಎರಡೂವರೆ ವರ್ಷಗಳಿಂದ ನಡೆಯುತ್ತಿದೆ. ಇದು ಇನ್ನೂ ಕೂಡ ಪೂರ್ಣಗೊಂಡಿಲ್ಲ. ಮುಂದಿನ ಒಂದೆರಡು ತಿಂಗಳಲ್ಲಿಬಹುತೇಕ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಕಾಮಗಾರಿ ಪೂರ್ಣಗೊಳ್ಳುವ ಮೊದಲು ಘಾಟಿ ವಿಭಾಗದಲ್ಲಿ ಕಾಮಗಾರಿ ಆರಂಭವಾದರೆ ಈ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೂ ತೀವ್ರ ಕಿರಿಕಿರಿ ಉಂಟಾಗಲಿದೆ.

ಕಾಮಗಾರಿ ಸವಾಲು
ಘಾಟಿ ರಸ್ತೆಯನ್ನು ಅಭಿವೃದ್ಧಿಪಡಿಸುವ ವೇಳೆ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗುತ್ತಿದೆಯೋ ಎಂಬುದಕ್ಕೆ ಸಮರ್ಪಕ ಉತ್ತರ ಸಿಗುತ್ತಿಲ್ಲ. ವನ್ಯಜೀವಿ ಪರಿಸರಕ್ಕೆ ತೊಂದರೆ ಉಂಟಾಗದಂತೆ ಕಾಮಗಾರಿ ನಡೆಸಬೇಕಿದೆ. ಘಾಟಿ ಭಾಗದ 1ಕಿಮೀ. ದೂರದಲ್ಲಿಮನೆಗಳಿದ್ದು ಅವುಗಳ ತೆರವು, ಭೂಸ್ವಾಧೀನ ಆಗಬೇಕಿದೆ. ಪ್ರಸ್ತುತ ಆರು ಚಕ್ರದವರೆಗಿನ ವಾಹನಗಳಿಗೆ ಮಾತ್ರ ಚಾರ್ಮಾಡಿ ಘಾಟಿಯಲ್ಲಿಪ್ರವೇಶಾವಕಾಶ ಇದೆ. ಹೆದ್ದಾರಿ ಭಾಗವನ್ನು ಮುಖ್ಯ ಗುತ್ತಿಗೆದಾರರಿಗೆ ವಹಿಸಿದ ಬಳಿಕ ಇದರ ನಿರ್ವಹಣೆ ಜವಾಬ್ದಾರಿಯು ಅವರದೇ ಆಗಿದೆ ಎಂದು ಹೇಳಲಾಗಿದೆ.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.