ಸುರತ್ಕಲ್ : ಮುಂಬೈನಿಂದ ಆಗಮಿಸುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ದರೋಡೆ !

Advertisement

ಸುರತ್ಕಲ್, ಜೂ. 30 : ಮುಂಬಯಿಯಿಂದ ಪತ್ನಿ, ಪುತ್ರನ ಜತೆ ಕಾರಿನಲ್ಲಿ ಕೇರಳಕ್ಕೆ ತೆರಳುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಲಕ್ಷಾಂತರ ರೂ. ಮೌಲ್ಯದ ಚಿನ್ನ ಮತ್ತು ನಗದು ಅಪಹರಿಸಿದ ಘಟನೆ ಸೋಮವಾರ ಮುಂಜಾನೆ ಪಣಂಬೂರು ಬಳಿಯ ಬೈಕಂಪಾಡಿಯಲ್ಲಿ ಸಂಭವಿಸಿದೆ.

Advertisement

ಕೇರಳದ ಪಯ್ಯನ್ನೂರಿನಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿರುವ ಮಹಾರಾಷ್ಟ್ರ ಸಾಂಗ್ಲಿಯ ವಿಕಾಸ್ (46) ತನ್ನ ಪತ್ನಿ, 14 ವರ್ಷದ ಪುತ್ರನೊಂದಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಮುಂಬಯಿಯಿಂದ ಕೇರಳಕ್ಕೆ ಹಿಂದಿರುಗುತ್ತಿದ್ದರು. ಮುಂಜಾನೆ ಸುಮಾರು 3 ಗಂಟೆಗೆ ಬೈಕಂಪಾಡಿ ಬಳಿ ಎರಡು ಇನ್ನೋವಾ ಕಾರುಗಳು ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ 7ರಿಂದ 8 ಮಂದಿ ಅಪರಿಚಿತರು ವಿಕಾಸ್ ಅವರ ಕಾರನ್ನು ಅಡ್ಡಗಟ್ಟಿದ್ದಾರೆ.
ಕಾರಿನಿಂದ ಎಳೆದು ಹಾಕುವ ಸಂದರ್ಭ ವಿಕಾಸ್ ಅವರಿಗೆ ಹಲ್ಲೆ ನಡೆಸಲಾಗಿದೆ. ಪತ್ನಿ, ಪುತ್ರನ ಸಮೇತ ಕಾರನ್ನು ದುಷ್ಕರ್ಮಿಗಳು ಒಯ್ದಿದ್ದು, ಈ ಸಂದರ್ಭಅಡ್ಡಬಂದ ವಿಕಾಸ್ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿದ್ದಾರೆ. ಬಳಿಕ ಕೂಳೂರು ಬಳಿ ಪತ್ನಿ, ಪುತ್ರನನ್ನು ಕಾರಿನಿಂದ ಇಳಿಸಿ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಈ ಸಂದರ್ಭ ವ್ಯಾಪಾರಿಯ ಪತ್ನಿ ಧರಿಸಿದ್ದ ಚಿನ್ನಾಭರಣ ತೆಗೆದಿಲ್ಲ. ದರೋಡೆಕೋರರು ವಿಕಾಸ್ ಅವರಿಗೆ ಹಲ್ಲೆ ನಡೆಸಿದ್ದರೂ ಪತ್ನಿ, ಪುತ್ರನಿಗೆ ಹಾನಿ ಮಾಡಿಲ್ಲ.

Advertisement

ವಿಕಾಸ್ ಸಾಂಗ್ಲಿಯಲ್ಲಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದರು. 180 ಗ್ರಾಂ ಚಿನ್ನ ಮತ್ತು ನಗದು ಸಹಿತ ಸುಮಾರು 20 ಲಕ್ಷ ರೂ. ಮೌಲ್ಯದ ಸೊತ್ತು ದೋಚಿದ್ದಾರೆ ಎಂದು ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದರೋಡೆಗೆ ಬಳಸಿದ ಕಾರಿನ ನಂಬರ್ ಪ್ಲೇಟ್ ನಕಲಿಯಾಗಿರುವ ಸಾಧ್ಯತೆ ಇದೆ. ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸ್ ಆಯುಕ್ತರು ವಿಶೇಷ ತಂಡ ರಚಿಸಿ ತನಿಖೆಗೆ ಸೂಚಿಸಿದ್ದಾರೆ. ಘಟನ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಮಹಜರು ನಡೆಸಿದೆ.

ಇನ್ನೋವಾ ಕಾರು ಅಡ್ಡ ಇಟ್ಟು ಲೂಟಿ

ವ್ಯಾಪಾರಿಯನ್ನು ಹಿಂಬಾಲಿಸುತ್ತಾ ಬಂದ ದರೋಡೆಕೋರರು ಚಿತ್ರಾಪುರ ಬಳಿ ವ್ಯಾಪಾರಿ ಕಾರನ್ನು ಓವ‌ರ್ ಟೇಕ್ ಮಾಡಿ ಒಂದು ಇನ್ನೋವಾ ಅನ್ನು ಎದುರಿಗೆ ಅಡ್ಡ ಇಟ್ಟರೆ, ಮತ್ತೊಂದನ್ನು ಹಿಂಬದಿ ಹಾಗೂ ಮತ್ತೊಂದನ್ನು ಎಡಭಾಗಕ್ಕೆ ಅಡ್ಡಲಾಗಿ ಇಟ್ಟು ಬ್ಲಾಕ್ ಮಾಡಿ ವ್ಯಾಪಾರಿಯ ಕಾರಿನ ಗಾಜನ್ನು ಒಡೆದು, ಡೋರ್ ಲಾಕ್ ಓಪನ್ ಮಾಡಿದ್ದಾರೆ. ಬಳಿಕ ವ್ಯಾಪಾರಿಗೆ ಹಲ್ಲೆ ಮಾಡಿ ದೂಡಿ ಹಾಕಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ