ಕಲ್ಮಂಜ, ಆ. 11 : ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಕಲ್ಮಂಜ ಗ್ರಾಮದ ದಲಿತ ಸಮುದಾಯದ ಚೋಮು ನಲಿಕೆ ಎಂಬವರ ಮನೆಯ ಹಿಂಬದಿ ಗೋಡೆ ಸಂಪೂರ್ಣವಾಗಿ ಧರಾಶಾಹಿಯಾಗಿತ್ತು. ಈ ನಡುವೆ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ಸಂದರ್ಭ ಶಾಸಕ ಹರೀಶ್ ಪೂಂಜಾರವರು ಚೋಮು ನಲಿಕೆಯವರ ಮನೆಗೂ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ಮನೆಯ ಸಂಪೂರ್ಣ ದುರಸ್ಥಿಗೊಳಿಸಿ ವಾಸಯೋಗ್ಯ ಹೊಸ ಮನೆಯಂತೆ ನಿರ್ಮಾಣ ಮಾಡಿಕೊಡಲಾಗಿದೆ.

ಚೋಮು ನಲಿಕೆಯವರ ಮನೆಗೆ ಆ. 03ರಂದು ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಮನೆಯ ಪರಿಸ್ಥಿತಿ ಕಂಡು ಮರುಗಿದ್ದರು. ತಕ್ಷಣವೇ ಸ್ಥಳೀಯ ಯುವಕರನ್ನು ಕರೆಸಿ, ಈ ಮನೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಿ ಅದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ತಾನೇ ಭರಿಸುತ್ತೇನೆ ಎಂದಿದ್ದರು. ಶಾಸಕರು ಮಾನವೀಯ ಸೇವೆಗೆ ಜೊತೆಯಾದ ಕಲ್ಮಂಜ ಬಿಜೆಪಿ ಗ್ರಾಮ ಸಮಿತಿಯ ಯುವಕರು ಆ. 09ರಂದು ಶ್ರಮದಾನದ ಮೂಲಕ ಸುಸಜ್ಜಿತವಾದ ಮನೆ ನಿರ್ಮಾಣ ಮಾಡಿಕೊಟ್ಟರು. ಕಬ್ಬಿಣದ ರಾಡ್ ಬಳಸಿ, ಉತ್ತಮ ಬಾಳಿಕೆಯ ಶೀಟ್ ಅಳವಡಿಸಿ, ಮನೆಗೆ ಪೈಂಟ್ ಹಚ್ಚಿ, ಮನೆಯ ಸುತ್ತಮುತ್ತ ಜೆಸಿಬಿ ಮೂಲಕ ಸ್ವಚ್ಛತೆ ನಡೆಸಿದ್ದಾರೆ. ಅಲ್ಲದೆ, ಮನೆಯೊಳಗೂ ಸ್ವಚ್ಛಗೊಳಿಸಿ, ಚೋಮು ಅಜ್ಜಿಗೆ ವಾಸಯೋಗ್ಯ ಮನೆಯನ್ನಾಗಿ ಪರಿವರ್ತಿಸಿದ್ದಾರೆ.

ಹೊಸ ಛಾವಣಿ – ಕೇವಲ ಒಂದೇ ದಿನದಲ್ಲಿ ಮನೆ ದುರಸ್ಥಿ..!
ಚೋಮು ಅಜ್ಜಿಯವರ ಮನೆಯ ಹಿಂಬದಿ ಕುಸಿದು, ಮನೆಯ ಛಾವಣಿ ಶೀಟ್ ಕೂಡಾ ಸಂಪೂರ್ಣವಾಗಿ ಬಲ ಕಳೆದುಕೊಂಡಿತ್ತು. ಈ ಹಿನ್ನಲೆಯಲ್ಲಿ ಶಾಸಕ ಹರೀಶ್ ಪೂಂಜಾರವರ ಸಂಪೂರ್ಣ ಸಹಕಾರದಲ್ಲಿ ಕಬ್ಬಿಣದ ರಾಡ್ ಬಳಸಿ, ಉತ್ತಮ ಬಾಳಿಕೆಯ ಶೀಟ್ ಅಳವಡಿಸಿ ಮನೆಯ ಛಾವಣಿ ನಿರ್ಮಿಸಲಾಗಿದೆ. ಮನೆಗೆ ಪೈಂಟ್ ಹಚ್ಚಿ, ಮನೆಯ ಸುತ್ತಮುತ್ತ ಜೆಸಿಬಿ ಮೂಲಕ ಸ್ವಚ್ಛತೆ ನಡೆಸಿದ್ದಾರೆ. ಅಲ್ಲದೆ, ಮನೆಯೊಳಗೂ ಸ್ವಚ್ಛಗೊಳಿಸಿ, ಚೋಮು ಅಜ್ಜಿಗೆ ವಾಸಯೋಗ್ಯ ಮನೆಯನ್ನಾಗಿ ಪರಿವರ್ತಿಸಿದ್ದಾರೆ. ಈ ಹೊಸಮನೆಯಂತೆ ಕಾಣುವ ಈ ಮನೆ ನಿರ್ಮಾಣವಾಗಿದ್ದು ಕೇವಲ ಒಂದೇ ದಿನದ ಶ್ರಮದಾನದಲ್ಲಿ. ಶಾಸಕ ಹರೀಶ್ ಪೂಂಜಾರವರ ಕರೆಗೆ ಓಗೊಟ್ಟ ಕಲ್ಮಂಜ ಗ್ರಾಮ ಸಮಿತಿಯ ಬಿಜೆಪಿ ಕಾರ್ಯಕರ್ತರು ಅವಿರತ ಶ್ರಮದಿಂದ ಈ ಮನೆ ನಿರ್ಮಾಣಗೊಂಡಿದೆ.
ನನ್ನ ಜೀವ ಇದ್ದಷ್ಟು ದಿನ ಶಾಸಕರನ್ನು ಮರೆಯಲಾರೆ :
ದಿಕ್ಕು ತೋಚದಂತಿದ್ದ ಈ ಅಜ್ಜಿಗೆ ಮಗನ ಸ್ಥಾನದಲ್ಲಿ ನಿಂತು ಆಸರೆಯಾಗಿದ್ದು ಬೆಳ್ತಂಗಡಿಯ ಜನಮೆಚ್ಚಿದ ಶಾಸಕ ಶ್ರೀ ಹರೀಶ್ ಪೂಂಜಾ’ರವರು. ಶಾಸಕರ ಮಾನವೀಯ ಸೇವೆಗೆ ಕಂಬನಿ ಮಿಡಿದ ಚೋಮು ಅಜ್ಜಿಯವರು “ಭಿಕ್ಷೆ ಬೇಡಿದರೂ ಏನೂ ಕೊಡದ ಈ ಕಾಲದಲ್ಲಿ ಇಂತಹ ಮನೆ ನಿರ್ಮಾಣ ಮಾಡಿಕೊಟ್ಟ ಶಾಸಕರನ್ನು ನಾನು ಸಾಯುವವರೆಗೂ ಮರೆಯುವುದಿಲ್ಲ” ಎಂದಿದ್ದಾರೆ.

ಈ ಮನೆ ನಿರ್ಮಾಣ ಕಾರ್ಯದಲ್ಲಿ ಸಮಾಜ ಸೇವಕ ಬಾಲಕೃಷ್ಣ ನೈಮಿಷ ಮಾಣಿಂಜೆ, ದಿನಸಿ ಅಂಗಡಿ ಮಾಲಕರಾದ ನೋಣಯ್ಯ ಗೌಡ, ಕಲ್ಮಂಜ ಗ್ರಾಮ ಪಂಚಾಯತ್ ಸಹಕಾರದ ಜೊತೆಯಲ್ಲಿ ಮುಂಡಾಜೆ ಗ್ರಾಮದ ಬಿಜೆಪಿ ಮುಂದಾಳು ಗಣೇಶ್ ಬಂಗೇರ, ಕೃಷಿಕರಾದ ಶ್ರೀನಿವಾಸ್ ರಾವ್, ಕಲ್ಮಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರವೀಣ್ ಕರಿಯನೆಲ, ಕಲ್ಮಂಜ ಬೂತ್ ಅಧಕ್ಷರಾದ ಅನಿಲ್ ಕುಮಾರ್ ಮದಿಮಲ್ ಕಟ್ಟೆ, ಕಾರ್ಯದರ್ಶಿ ಗುರುರಾಜ್ ಕರಿಯನೆಲ, ಸಂದೀಪ್ ಪರಾರಿಮಜಲು, ಧನಂಜಯ ಮದಿಮಲ್ ಕಟ್ಟೆ, ಮೋಹನ್ ಮೂಡಾಯಿಬೆಟ್ಟು, ಜಗದೀಶ್ ಸತ್ಯನಪಲ್ಕೆ, ಪುರಕ್ಷಿತ್ ಬನದಬೈಲು, ಭರತೇಶ್ ಮದಿಮಲ್ ಕಟ್ಟೆ, ದೀಕ್ಷಿತ್ ಬನದಬೈಲು, ಹರೀಶ್ ಕಟ್ಟದಬೈಲು, ಶೃತೇಶ್ ಸತ್ಯನಪಲ್ಕೆ, ಜನಿತ್ ಸೋಮಂತ್ತಡ್ಕ, ಮುರಳಿ ಮೂಡಾಯಿಬೆಟ್ಟು, ಸಾಂತಪ್ಪ ಮದಿಮಲ್ ಕಟ್ಟೆ ಹಾಗೂ ಮತ್ತಿತ್ತರರು ಶ್ರಮದಾನದಲ್ಲಿ ಭಾಗವಹಿಸಿದ್ದರು.





