ಬೆಳ್ತಂಗಡಿ : ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನಲ್ಲಿ ಜಲಮರುಪೂರಣ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮ

Advertisement

ಬೆಳ್ತಂಗಡಿ, ಆ. 31 : ದೇವರು ಮಳೆಯ ರೂಪದಲ್ಲಿ ನಮಗೆ ನೀಡುವ ಜಲ ಅದು ನಮ್ಮೆಲ್ಲರ ಜೀವಜಲ.ಅದನ್ನು ಸಂರಕ್ಷಿಸಿ ಸುಂದರ ಪ್ರಕೃತಿಯನ್ನು ನಾಳೆಗೆ ಉಳಿಸಿಹೋಗಬೇಕು, ಇಂದು ಇಲ್ಲಿ ಇಂಗಿಸಿದ ನೀರು ಯಾರಿಗೂ ಕೂಡ ಪ್ರಯೋಜನ ಆಗಬಹುದು. ನಮಗೆ ನೀರನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ ಆದರೆ ದೇವರು ಕೊಟ್ಟ ನೀರನ್ನು ಉಳಿಯುವುದು ಸಾಧ್ಯವಿದೆ. ಮನೆಯಲ್ಲಿ ಇರುವಂತಹ ವ್ಯವಸ್ಥೆಗೆ ಪೂರಕವಾಗಿ ಬಾವಿಗೆ ಕೆರೆಗೆ ಬೋರ್ವೆಲ್ಗೆ ನೀರು ಇಂಗಿಸಿದಾಗ, ಅದು ಅಂತರ್ಜಲದ ಕೊರತೆಯನ್ನು ನೀಗಿಸಿ, ಪರಿಶುದ್ಧವಾದ ನೀರು ನಮಗೆ ಮರುಬಳಕೆಗೆ ಸಿಗುತ್ತದೆ ಎಂದು ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನ ಪ್ರಧಾನ ಧರ್ಮಗುರು ರೆ. ಫಾ ವಾಲ್ಟರ್ ಡಿಮೆಲ್ಲೋ ಹೇಳಿದರು.

ಇಲ್ಲಿನ ಚರ್ಚ್ ವಠಾರದಲ್ಲಿ ಆ.30 ರಂದು ನಡೆದ  ಜಲಮರುಪೂರಣ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ  ಟ್ರಸ್ಟ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ತಂಗಡಿ, ಚರ್ಚ್ ಪಾಲನಾ ಮಂಡಳಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಎನ್.ಎಸ್.ಎಸ್ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳು ಜಂಟಿ ಸಹಯೋಗ ನೀಡಿದವು.

ಪ್ರಸ್ತಾವನೆಗೈದ ಗ್ರಾ. ಯೋಜನೆಯ ಕೃಷಿ ಅಧಿಕಾರಿ ರಾಮ್ ಕುಮಾರ್, ಜಲ ಸಂರಕ್ಷಣೆಯ ಮಾದರಿಯನ್ನು ಈ ಚರ್ಚ್ ನಲ್ಲಿ ಕಳೆದ ಮೂರು ವರ್ಷಗಳಿಂದ ಅನುಷ್ಠಾನಿಸಲಾಗಿದೆ. ಇದು ಮುಕ್ತ ವೇದಿಕೆಯಾಗಿದ್ದು ಇಲ್ಲಿ ಯಾರೂ ಕೂಡ ಬಂದು ಇದನ್ನು ಕಣ್ಣಾರೆ ಕಂಡು ಮಾಹಿತಿ ಪಡೆದು ಅನುಭವ ಪಡೆದುಕೊಳ್ಳಬಹುದು. ಇಲ್ಲಿ ಕಳೆದ ಬಾರಿ 25 ಲಕ್ಷ ಲೀಟರ್ ನೀರು ಶುದ್ದೀಕರಿಸಿ ಅಂತರ್ಜಲಕ್ಕೆ ಮರುಪೂರಣ ಮಾಡಲಾಗಿದೆ ಎಂದರು.

ಪ್ರಧಾನ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರು ಮಾತನಾಡಿ, 3 ಸಾವಿರ ಮಿ.‌ಮೀ ಮಳೆಯಾಗುವ ಕರಾವಳಿ ಜಿಲ್ಲೆಯವರಾದ ನಾವೂ ಕೂಡ ಇಂದು ಬೇಸಗೆಯಲ್ಲಿ ಜಲಕ್ಷ್ಯಾಮ ಎದುರಿಸುವಂತಾಗಿರುವುದು ಖೇದಕರ. ಮಳೆ ನೀರಿನ ಪ್ರತೀ ಹನಿಯ ಬಗ್ಗೆಯೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ಇದೆ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಕನಿಷ್ಠ ಖರ್ಚಿಗೆ ಮಳೆಕೊಯ್ಲು ಮಾಡಬಹುದದಾಗಿದೆ ಎಂದರು.

ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರೆ.  ಫಾ.ಕ್ಲಿರ್ಫಡ್ ಸೈಮನ್ ಪಿಂಟೊ ಮುಖ್ಯ ಅತಿಥಿಯಾಗಿದ್ದರು.‌ ಹೊಸಬೆಳಕು ಒಕ್ಕೂಟದ ಅಧ್ಯಕ್ಷರು ವಿನ್ಸೆಂಟ್ ಲೋಬೋ, ಚರ್ಚ್ ಪಾಲನಾ ಸಮಿತಿ ಆಯೋಗದ ಸಂಚಾಲಕ
ತೋಮಸ್ ಪಿಂಟೊ ಹಾಗೂ ವಾಳೆಯ ಗುರಿಕಾರರು, ಕೃಷಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದು ಸಹಕರಿಸಿದರು.

ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಾಲ್ಟರ್ ಮೊನಿಸ್ ಸ್ವಾಗತಿಸಿದರು. ರೆಡ್ಮಿ ಟೀಚರ್ ನಿರೂಪಿಸಿದರು. ಪಾಲನಾ ಸಮಿತಿ ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೊ ಧನ್ಯವಾದವಿತ್ತರು.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ