ಸಿದ್ದು ದೆಹಲಿ ಯಾತ್ರೆಗೆ ಪರಮೇಶ್ವರ್ ಸಾಥ್ : ಹೈಕಮಾಂಡ್‌ ಬಳಿ ದಲಿತ ಸಿಎಂ ದಾಳ ! ಏನಿದು ಕಾಂಗ್ರೆಸ್ ಸಿಎಂ ಖುರ್ಚಿ ಫೈಟ್ ?

ಬೆಂಗಳೂರು, ಮೇ. 26 : ರಾಜ್ಯ ರಾಜಕಾರಣದ ಬೆಳವಣಿಗೆಗಳು ಸದ್ಯ ದೆಹಲಿಗೆ ಶಿಫ್ಟ್ ಆಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಆದಿಯಾಗಿ ಪ್ರಮುಖ ಸಚಿವರು, ಶಾಸಕರು ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ದೆಹಲಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಾ.ಜಿ ಪರಮೇಶ್ವರ್ ಒಟ್ಟಿಗೆ ಆಗಮಿಸಿದ್ದಾರೆ. ಪರಮೇಶ್ವರ್ ನ್ನೂ ಜೊತೆಯಲ್ಲೇ ಕರೆದುಕೊಂಡು ಬಂದಿರುವ ಸಿಎಂ ಸಿದ್ದರಾಮಯ್ಯರ ನಡೆ ಕುತೂಹಲಕ್ಕೆ ಕಾರಣವಾಗಿದೆ.

Advertisement

ಸರ್ಕಾರ ರಚನೆಯಾದ ಬಳಿಕ ಕೆಲವೇ ಕೆಲ ಭಾರಿಯಷ್ಟೇ ದೆಹಲಿಗೆ ಭೇಟಿ ನೀಡಿದ್ದ ಪರಮೇಶ್ವರ್ ಅದರಲ್ಲೂ ಸಿಎಂ ಸಿದ್ದರಾಮಯ್ಯ ಜೊತೆಗೆ ದೆಹಲಿಗೆ ಮೊದಲ ಬಾರಿಗೆ ಆಗಮಿಸಿ ಅಚ್ಚರಿ ಮೂಡಿಸಿದ್ದಾರೆ. ಈ ಹಿಂದೆ ಸಿಎಂ, ಡಿಸಿಎಂ ಹಾಗೂ ಸಚಿವರು ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿದರೂ ಪರಮೇಶ್ವರ್ ಮಾತ್ರ ರಾಜ್ಯದಲ್ಲೇ ಉಳಿದುಕೊಳ್ಳುತ್ತಿದ್ದರು. ಆದರೆ, ಇದೀಗ ಹೈವೋಲ್ಟೇಜ್ ಮೀಟಿಂಗ್ ಹಿನ್ನೆಲೆಯಲ್ಲಿ ಸಿಎಂ ಜೊತೆಗೆ ಪರಮೇಶ್ವರ್ ದೆಹಲಿ ಯಾತ್ರೆ ಕೈಗೊಂಡಿರುವುದು ಕುತೂಹಲ ಕೆರಳಿಸಿದೆ.

ಸಿಎಂ ಗಾದಿಯನ್ನ ನಿಭಾಯಿಸಲು ನಾನೂ ಸಿದ್ಧವೆಂದು ಹೇಳುತ್ತಲೇ ದೆಹಲಿ ಅಂಗಳಕ್ಕೆ ಪರಮೇಶ್ವರ್ ಎಂಟ್ರಿ ನೀಡಿದ್ದಾರೆ. ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಮುಂದಾದರೆ ದಲಿತ ಸಿಎಂ ದಾಳ ಉರುಳಿಸುತ್ತಾರಾ ಸಿದ್ದರಾಮಯ್ಯ ಎಂಬ ಚರ್ಚೆಯೂ ನಡೆಯುತ್ತಿದೆ. ಇಂತಹ ಸಂದರ್ಭ ಸೃಷ್ಟಿಯಾದರೆ, ಪರಮೇಶ್ವರ್ ಪರವಾಗಿ ಹೈಕಮಾಂಡ್ ಮುಂದೆ ತಮ್ಮ ನಿಲುವನ್ನು ಸಿಎಂ ತಿಳಿಸುತ್ತಾರಾ ಎಂಬ ಪ್ರಶ್ನೆಯೂ ಇದೀಗ ಉದ್ಭವಿಸಿದೆ. ಅದೇ ಕಾರಣಕ್ಕೆ ಪರಮೇಶ್ವರ್ ನ್ನೂ ಜೊತೆಯಲ್ಲೇ ಕರೆದುಕೊಂಡು ಬಂದಿದ್ದಾರಾ ಎಂಬ ಗುಸುಗುಸು ಕೇಳಿಬರುತ್ತಿದೆ.

2028ರ ವಿಧಾನಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಚರ್ಚೆ ಸಾಧ್ಯತೆ. ಹೈಕಮಾಂಡ್ ನಾಯಕರ ಹೈವೋಲ್ಟೇಜ್ ಮೀಟಿಂಗ್ ನಲ್ಲಿ ಉಳಿದ ಅಧಿಕಾರಾವಧಿ ಕುರಿತು ಚರ್ಚೆ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ದೆಹಲಿ ಮೀಟಿಂಗ್ ಮಹತ್ವ ಪಡೆದುಕೊಂಡಿದೆ. ಆಡಳಿತ ಯಂತ್ರವನ್ನು ಚುರುಕುಗೊಳಿಸುವುದು, ಗೊಂದಲದ ಹೇಳಿಕೆಗಳನ್ನ ನೀಡದಂತೆ ನೋಡಿಕೊಳ್ಳುವುದು, ಸಮನ್ವಯತೆಯಿಂದ ಪಕ್ಷವನ್ನ ಸಮರ್ಥವಾಗಿ ಸಂಘಟಿಸುವುದು ಇಂತಹ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಡಿಕೆ ಬ್ರದರ್ಸ್ ಪಟ್ಟು!

ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಹೈಕಮಾಂಡ್ ಮುಂದೆ ಡಿಕೆ ಬ್ರದರ್ಸ್ ತಮ್ಮ ಪಟ್ಟು ಬಿಗಿಗೊಳಿಸುವ ಸಾಧ್ಯತೆ ಇದೆ. ನಿನ್ನೆಯೇ ದೆಹಲಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ ಸುರೇಶ್ ಆಗಮಿಸಿದ್ದಾರೆ. ತಡರಾತ್ರಿ ರಹಸ್ಯ ಮಾತುಕತೆಯನ್ನು ಡಿಕೆ ಸಹೋದರರು ನಡೆಸಿದ್ದಾರೆ.ಸಿಎಂ ಗಾದಿಗೆ ಬಿಗಿಪಟ್ಟು ಹಿಡಿಯಲು ತಂತ್ರಗಾರಿಕೆಯನ್ನು ಡಿಕೆ ಬ್ರದರ್ಸ್ ರೂಪಿಸಿದ್ದಾರೆ. ಹೈಕಮಾಂಡ್ ಮುಂದೆ ತಮ್ಮದೇ ಪಟ್ಟುಗಳನ್ನು ಪ್ರಯೋಗಿಸುವ ಕುರಿತು ಡಿಕೆ ಬ್ರದರ್ಸ್ ಗಂಭೀರ ಚರ್ಚೆ ನಡೆಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.