ರಾಷ್ಟ್ರ ರಾಜಧಾನಿಯಲ್ಲಿ ನ್ಯಾಯಾಲಯ, ಶಾಲೆಗಳಿಗೆ ಬಾಂಬ್ ಬೆದರಿಕೆ : ಹೈ ಅಲರ್ಟ್

File Photo
Advertisement

ಹೊಸದಿಲ್ಲಿ : ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ್ದ ರಾಜಧಾನಿ ದೆಹಲಿಯ ಕಾರು ಸ್ಫೋಟ ಭೀತಿಯಿಂದ ಹೊರಬರುವ ಮುನ್ನವೇ ಇದೀಗ ದೆಹಲಿಯ ಹಲವು ಕೆಳ ನ್ಯಾಯಾಲಯಗಳು ಮತ್ತು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಬಾಂಬ್ ಬೆದರಿಕೆಯ ಇ-ಮೇಲ್‌ಗಳು ಬಂದ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಭದ್ರತೆಯನ್ನು ಒದಗಿಸಲಾಗಿದೆ.

Advertisement

ದೆಹಲಿಯ ಸಾಕೆಟ್ ಕೋರ್ಟ್, ಪಟೇಲ್ ಹೌಸ್ ಕೋರ್ಟ್, ಟಿಸ್ ಹಜಾರಿ ಕೋರ್ಟ್, ರೋಹಿಣಿ ಕೋರ್ಟ್ ಮತ್ತು ದ್ವಾರಕಾ ಕೋರ್ಟ್ ಸೇರಿದಂತೆ ಹಲವು ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಂಬ್ ಬೆದರಿಕೆಗಳು ವರದಿಯಾಗಿವೆ. ಈ ಸುದ್ದಿ ತಿಳಿಯುತ್ತಿದ್ದಂತೆ, ಭದ್ರತಾ ಸಿಬ್ಬಂದಿ ತಕ್ಷಣವೇ ಎಚ್ಚೆತ್ತು ಕಾರ್ಯಚರಣೆ ನಡೆಸಿದ್ದಾರೆ. ಪೊಲೀಸರು ನ್ಯಾಯಾಲಯದ ಆವರಣವನ್ನು ಖಾಲಿ ಮಾಡಿಸಲು ಪ್ರಾರಂಭಿಸಿದ್ದು, ಬಾಂಬ್ ನಿಷ್ಕ್ರಿಯ ದಳದ ವಾಹನಗಳು, ಶ್ವಾನ ದಳಗಳು ಮತ್ತು ವಿಧ್ವಂಸಕ ವಿರೋಧಿ ಘಟಕಗಳು ಸ್ಥಳಗಳಿಗೆ ತಲುಪಿ, ಕಾರ್ಯಚರಣೆಗೆ ಇಳಿದಿದೆ. ನಗರದ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ, ಸಿಬ್ಬಂದಿಯನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಯಿತು.

Advertisement

ಇದರ ಬೆನ್ನಲ್ಲೇ, ದೆಹಲಿಯ ಎರಡು ಸಿಆರ್‌ಪಿಎಫ್ ಶಾಲೆಗಳಿಗೂ ಬಾಂಬ್ ಬೆದರಿಕೆಗಳು ಬಂದಿವೆ. ದ್ವಾರಕಾದಲ್ಲಿರುವ ಸಿಆರ್‌ಪಿಎಫ್ ಶಾಲೆ ಮತ್ತು ಪ್ರಶಾಂತ್ ವಿಹಾರದಲ್ಲಿರುವ ಮತ್ತೊಂದು ಸಿಆರ್‌ಪಿಎಫ್ ಶಾಲೆಗೆ ಈ ಎಚ್ಚರಿಕೆಗಳು ಬಂದಿವೆ. ತಕ್ಷಣವೇ ಪೊಲೀಸರು ಕಾರ್ಯಾಚರಣೆ ನಡೆಸಿ ಕ್ಯಾಂಪಸ್‌ಗಳನ್ನು ಪರಿಶೀಲಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಈ ಕರೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಮತ್ತು ಬೆದರಿಕೆಗಳ ಮೂಲವನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ.

ಹಿರಿಯ ಅಧಿಕಾರಿಗಳು ತಿಳಿಸಿದಂತೆ, ಪರಿಶೀಲನೆ ನಡೆಸಲು ಎಲ್ಲಾ ಘಟಕಗಳನ್ನು ಸಕ್ರಿಯಗೊಳಿಸಲಾಗಿದೆ. ನ್ಯಾಯಾಲಯಗಳು ಮತ್ತು ಶಾಲೆಗಳ ಹೊರಗೆ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಪೋಷಕರು ಮತ್ತು ಸಂದರ್ಶಕರಿಗೆ ಶಾಂತವಾಗಿರಲು ಮತ್ತು ಅಧಿಕೃತ ಅಪ್‌ಡೇಟ್‌ಗಳನ್ನು ಅನುಸರಿಸಲು ಸೂಚಿಸಲಾಗಿದೆ. ಈ ಕರೆಗಳು ಒಂದೇ ಮೂಲದಿಂದ ಬಂದಿವೆಯೇ ಎಂಬುದನ್ನು ನಿರ್ಧರಿಸಲು ತನಿಖೆಗಳು ನಡೆಯುತ್ತಿವೆ ಎಂದು ತಿಳಿಸದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ