ಬೆಂಗಳೂರು : “ಡೆವಿಲ್” ಇಂದು ತೆರೆಗೆ – ಹೂವಿನ ಮಳೆಗೆರೆದು, ಪಟಾಕಿ ಸಿಡಿಸಿ ಸಂಭ್ರಮಿಸಿದ ಫ್ಯಾನ್ಸ್

Advertisement

ಬೆಂಗಳೂರು, ಡಿ. 11 : ನಟ ದರ್ಶನ್‌ ಅಭಿನಯದ ʻದಿ ಡೆವಿಲ್‌ʼ ಸಿನಿಮಾ ಇಂದು ಅದ್ದೂರಿಯಾಗಿ ತೆರೆಕಂಡಿದೆ. ಶೋ ಮುಂಜಾನೆ 6:30ಕ್ಕೆ ಶುರುವಾಗಿದ್ದರೂ ಕೂಡ, ನಿನ್ನೆ ರಾತ್ರಿಯಿಂದಲೇ ಥಿಯೇಟರ್‌ಗಳ ಮುಂದೆ ದರ್ಶನ್‌ ಸೆಲೆಬ್ರಿಟೀಸ್‌ ʻದಿ ಡೆವಿಲ್‌ʼ ಹಬ್ಬ ಶುರು ಮಾಡಿದ್ದರು. ದರ್ಶನ್‌ ಅವರನ್ನ ತೆರೆ ಮೇಲೆ ನೋಡಿದ್ದೇ ತಡ, ಹಬ್ಬದ ರೀತಿ ಥಿಯೇಟರ್‌ಗಳಲ್ಲಿ ಫ್ಯಾನ್ಸ್‌ ತಮ್ಮ ಬಾಸ್‌ನ ಸೆಲೆಬ್ರೇಟ್‌ ಮಾಡ್ತಿದ್ದಾರೆ. ಥಿಯೇಟರ್‌ ಎದುರು ಕಟೌಟ್‌ಗಳು, ಬ್ಯಾನರ್‌ಗಳೊಂದಿಗೆ ಸಂಭ್ರಮಾಚರಣೆ ಜೋರಾಗಿದೆ.

Advertisement

ಕಟೌಟ್ ಗಳಿಗೆ ಹೂವಿನ ಮಳೆಗರೆದು ಸಂಭ್ರಮಿಸಿದರೆ, ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಭಾರೀ ಸಂಖ್ಯೆಯ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿ ಚಿತ್ರ ವೀಕ್ಷಿಸಿದರು. ಮಹಿಳೆಯರೂ ಮಕ್ಕಳೂ ಚಿತ್ರ ಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷಿಸಿ ಸಂಭ್ರಮಿಸಿದರು. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಪುತ್ರ ವಿನೀಶ್ ನೊಂದಿಗೆ ಬೆಂಗಳೂರಿನ ನರ್ತಕಿ ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷಿಸಿ ನಗುನಗುತ್ತಾ ಸಂಭ್ರಮಿಸಿದರು. ಈ ವೇಳೆ ಅಭಿಮಾನಿಗಳು ಅಕ್ಕಾ.. ನಮ್ಮ ಉಸಿರು ಇರುವವರೆಗೂ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಜೈಕಾರ ಹಾಕಿದರು. ಬೆಂಗಳೂರು, ಮೈಸೂರು, ಮಂಡ್ಯ, ಉತ್ತರ ಕರ್ನಾಟಕ ಭಾಗದಲ್ಲೂ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ