ಬೆಂಗಳೂರು : ದೇಶದಲ್ಲೇ ಮೊದಲ ಧಾರ್ಮಿಕ ಸೌಧ ನಿರ್ಮಾಣ – ಹೊಯ್ಸಳ ಮಾದರಿಯ ವಾಸ್ತಶಿಲ್ಪ ಶೈಲಿ

ಬೆಂಗಳೂರು, ಫೆ. 09 : ವಿಧಾನಸೌಧದ ಸಮೀಪದ ಎಂ ಎಸ್ ಬಿಲ್ಡಿಂಗ್ ಎದುರುಗಡೆ ಇರುವ ಮುಜರಾಯಿ ಇಲಾಖೆಯ ಜಾಗದಲ್ಲಿ ಧಾರ್ಮಿಕ ಸೌಧ ನಿರ್ಮಾಣ ಆಗಲಿದೆ. ದೇಶದಲ್ಲೇ ಮೊದಲು ಬಾರಿಗೆ ಇಂತಹದೊಂದು ಕಟ್ಟಡ ನಿರ್ಮಾಣ ಆಗುತ್ತಿದ್ದು, ಹೊಯ್ಸಲ ಮಾದರಿಯಲ್ಲಿ ಈ ಕಟ್ಟಡ ತಲೆಎತ್ತಲಿದೆ. ಧಾರ್ಮಿಕ ಸೌಧ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮ ಸೋಮವಾರ ನೆರವೇರಿದೆ. ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು.

Advertisement

ದೇಶದ ಪ್ರಥಮ ಧಾರ್ಮಿಕ ಸೌಧ ಇದಾಗಿದೆ. ಧಾರ್ಮಿಕ ದತ್ತಿ ಇಲಾಖೆಗೆ ಸ್ವಂತ ಕಟ್ಟಡ ಇರಲಿಲ್ಲ. ಬಾಡಿಗೆ ಕಟ್ಟದಲ್ಲೇ ಕಚೇರಿ ಇದೆ. ಹಾಗಾಗಿ ಇದೀ 27 ಕೋಟಿ ವೆಚ್ಚದಲ್ಲಿ ಕರ್ನಾಟಕ ರಾಜ್ಯದ ಮುಜರಾಯಿ ಇಲಾಖೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದೆ. ಈ ಕಟ್ಟಡದ ವಾಸ್ತಶಿಲ್ಪ ಶೈಲಿ ಹೊಯ್ಸಳ ಮಾದರಿಯಲ್ಲಿ ಇರಲಿದೆ. ಧಾರ್ಮಿಕ ಸೌಧ ನಾಲ್ಕು ಅಂತಸ್ತಿನ ಕಟ್ಟಡವಾಗಲಿದೆ. ನೆಲ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ, ಡಿಜಿಟಲ್ ಲೈಬ್ರರಿ , ಆರ್ ಡಿ ಪಿ ಆರ್, ರೆಕಾರ್ಡ್ಸ್ ಕೊಠಡಿ ಇರಲಿದೆ. ಮೊದಲನೆಯ ಮಹಡಿಯಲ್ಲಿ ಕೋರ್ಟ್ ಹಾಲ್, ಕಮಿಷನರ್ ಕಚೇರಿ, ಸರ್ವೆ ಇಲಾಖೆ ಹಾಗೂ ಎಚ್ ಕ್ಯೂ ಮತ್ತು ಕ್ಯೂಎ ಕಚೇರಿಗಳು ಇರಲಿದೆ. ಎರಡನೆಯ ಮಹಡಿಯಲ್ಲಿ ಆಗಮ ಸೆಕ್ಷನ್ ಆಫೀಸರ್, ಐಟಿ ಸೆಕ್ಷನ್, ಇಂಜಿನಿಯರಿಂಗ್ ಸೆಕ್ಷನ್, ಮೀಟಿಂಗ್ ಹಾಲ್, ಎಚ್ ಕ್ಯೂ ಒನ್ ಚೇಂಬರ್ ಇರಲಿದೆ.

ಮೂರನೇ ಮಹಡಿಯಲ್ಲಿ ಓಪನ್ ಆಫೀಸ್ ಹಾಲ್ ಹಾಗೂ ಸೂಪರಿಟೆಂಡೆಂಟ್ ಕಚೇರಿಗಳು ಇರಲಿವೆ. ನಾಲ್ಕನೆಯ ಮಹಡಿಯಲ್ಲಿ ಆಡಿಟೋರಿಯಂ ಇರುವಂತೆ ವಿನ್ಯಾಸ ಮಾಡಲಾಗಿದೆ. ಮುಜರಾಯಿ ಮತ್ತು ಸಾರಿಗೆ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಇಲಾಖೆಗಾಗಿ ಸ್ವಂತ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಈಗ ನೀಲಿ ನಕ್ಷೆ ಎಲ್ಲವೂ ಸಿದ್ಧವಾಗಿದ್ದು ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಿತು. ಕಟ್ಟಡ ನಿರ್ಮಾಣದ ಕುರಿತಾಗಿ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ‘ಬೆಂಗಳೂರಿನಲ್ಲಿ ಧಾರ್ಮಿಕ ಸೌಧ ಕಟ್ಟಬೇಕು ಅಂತ ನಿರ್ಧಾರ ಮಾಡಿದ್ದೇವೆ. ಇದಕ್ಕೆ ಕೇಂದ್ರದಿಂದಲೂ ಅನುದಾನ ಸಿಗಲಿದೆ. ಅದನ್ನು ಬಳಕೆ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ. ಒಟ್ಟು 27 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಆದಗಲಿದೆ’ ಎಂದು ತಿಳಿಸಿದರು. ಮುಜರಾಯಿ ಇಲಾಖೆಗೆ ಸ್ವತಃ ಕಟ್ಟಡ ಇರಲಿಲ್ಲ, ಬದಲಾಗಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಇದ್ದವು. ಆದರೆ ಇದೀಗ ಸ್ವಂತ ಕಟ್ಟಡ ನಿರ್ಮಾಣ ಆಗಲಿದೆ. ಇದು ಹೊಯ್ಸಳ ಶೈಲಿಯಲ್ಲಿ ತಲೆಎತ್ತಲಿದೆ. ಆದಷ್ಟು ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಕಟ್ಟಡದಲ್ಲಿ ಎಲ್ಲ ವ್ಯವಸ್ಥೆಗಳು ಇರಲಿದೆ ಎಂದು ಮಾಹಿತಿ ನೀಡಿದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.