ನವದೆಹಲಿ, ಸೆ. 07 : ರಷ್ಯಾ ಮತ್ತು ಅಮೆರಿಕದ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಯುರೋಪ್‌ಗೆ ಪ್ರಮುಖ ಡೀಸೆಲ್ ಪೂರೈಕೆದಾರ ದೇಶವಾಗಿ ಭಾರತ ಹೊರಹೊಮ್ಮಿದೆ.
ವರ್ಟೆಕ್ಸಾ ಇಂಧನ ಮತ್ತು ಸರಕು ಸಾಗಣೆ ವಿಶ್ಲೇಷಣಾ ಸಂಸ್ಥೆಯ ವರದಿ ಪ್ರಕಾರ, ಆಗಸ್ಟ್‌ನಲ್ಲಿ ಬಾಬ್ ಎಲ್ ಮಂಡೆಬ್ ಜಲಸಂಧಿ ಮೂಲಕ ಯುರೋಪ್‌ಗೆ ರವಾನೆಯಾದ ಒಟ್ಟು ಡೀಸೆಲ್‌ನಲ್ಲಿ ಭಾರತವೇ ಶೇ.60ರಷ್ಟು ಪಾಲನ್ನು ಹೊಂದಿದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಈ ಪ್ರಮುಖ ಸಾರಿಗೆ ಮಾರ್ಗದಲ್ಲಿ ಸಾಗಣೆ ಸಂಪೂರ್ಣ ಸ್ತಬ್ಧಗೊಂಡಿತ್ತು. ಆದರೆ ಆಗಸ್ಟ್‌ನಲ್ಲಿ ಪ್ರತಿದಿನ ಸುಮಾರು 2 ಲಕ್ಷ ಬ್ಯಾರೆಲ್ ಡೀಸೆಲ್ ಯುರೋಪ್ ಕಡೆಗೆ ಸಾಗಿದ್ದು, ಇದರಲ್ಲಿ ಭಾರತದ ಪಾಲು ಅತ್ಯಂತ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.




