“ಕಾಣದ ಕುರ್ಚಿಗೆ ಹಂಬಲಿಸಿದೇ ಮನ, ಕೂರಬಲ್ಲೆನೆ ಒಂದು ದಿನ” – ಡಿಕೆಶಿ ಕಾಲೆಳೆದ ಸುನಿಲ್ ಕುಮಾರ್

ಬೆಳಗಾವಿ, ಡಿ. 11 : ಕರ್ನಾಟಕ ಮುಖ್ಯಮಂತ್ರಿ ಕುರ್ಚಿಗಾಗಿ ಕದನ ಈ ಬಾರಿ ರಾಜ್ಯದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಸಿಎಂ ಕುರ್ಚಿಗಾಗಿ ಬಯಸಿ, ಡಿಕೆ ಶಿವಕುಮಾರ್ ಅವರೂ ಕೂಡಾ ಹೈಕಮಾಂಡ್ ಕದ ತಟ್ಟಿದ್ದರು. ಇದೀಗ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಹಾಡಿನ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾಲೆಳೆದಿದ್ದಾರೆ. “ಕಾಣದ ಕುರ್ಚಿಗೆ ಹಂಬಲಿಸಿದೇ ಮನ, ಕೂರಬಲ್ಲೆನೆ ಒಂದು ದಿನ” ಗೀತೆಯನ್ನು ಹಾಡುವ ಮೂಲಕ ಶಾಸಕ ಸುನಿಲ್ ಕುಮಾ‌ರ್ ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾಲೆಳೆದಿದ್ದಾರೆ.

Advertisement

ಇಂದು ಸದನದಲ್ಲಿ ಉತ್ತರ ಕರ್ನಾಟಕ ಚರ್ಚೆಯ ಸಂದರ್ಭದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಸರ್ಕಾರದ ಮೌನದ ಬಗ್ಗೆ ಬೆಲ್ಲದ್ ಪ್ರಸ್ತಾಪ ಮಾಡಿ, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿ ಕಾರಣಕ್ಕಾಗಿ ಮೇಕೆದಾಟು ಕೆಲಸ ಆರಂಭವಾಗಿಲ್ಲವೇ ಎಂದು ಪ್ರಶ್ನಿಸಿದರು. ಈ ವೇಳೆ ಡಿಕೆ ಶಿವಕುಮಾ‌ರ್ ಮಧ್ಯಪ್ರವೇಶ ಮಾಡಿ, ನೀವು ಸಿಎಂ ಆಗಬೇಕು ಎಂದು ಕೊಂಡವರು, ವಿಪಕ್ಷದ ನಾಯಕರು ಆಗಬೇಕು ಎಂದಿದ್ದೀರಿ. ನಿಮಗೆ ಅನುಭವ ಇದೆ, ಮೊನ್ನೆ ತಾನೆ ನ್ಯಾಯಾಲಯದ ಆದೇಶ ಆಗಿದ್ದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಸಿ) ಆರು ತಿಂಗಳ ಸಮಯಾವಕಾಶ ನೀಡಿ ಸರ್ಕಾರ ತೀರ್ಮಾನ ಮಾಡಬೇಕು ಎಂದು ಸೂಚಿಸಿದೆ. ಹೀಗಾಗಿ ನಾನು ನಮ್ರತೆಯಿಂದ ಕೈಮುಗಿದು ಕೇಳುತ್ತೇನೆ. ನೀವೆಲ್ಲಾ ಸಹಕಾರ ಕೊಟ್ಟರೆ ಆದಷ್ಟು ಬೇಗ ನಿಮ್ಮ ಜೊತೆ ಭೂಮಿ ಪೂಜೆ ಮಾಡುತ್ತೇನೆ ಎಂದು ಉತ್ತರಿಸಿದರು.

ಈ ವೇಳೆ ಸುನೀಲ್ ಕುಮಾರ್ ಮಧ್ಯ ಪ್ರವೇಶ ಮಾಡಿ, ಇಷ್ಟು ನಯ ವಿನಯ ಎಲ್ಲಿಂದ ಬಂತು ಸರ್ ನಿಮಗೆ ? ಇದೇ ಡಿಕೆ ಶಿವಕುಮಾರಾ ? ಹೊಸ ಶಿವಕುಮಾರಾ ? ಡಿಕೆ ಶಿವಕುಮಾರ್ ಎಂಬುವುದಕ್ಕೆ ಒಂದು ಕಲ್ಪನೆ ಇದೆ. ಇಷ್ಟು ನಯ ವಿನಯ ಹೇಗೆ ? ದಿಢೀರ್ ಆಗಿ ಹೇಗೆ ಬಂತು ಎಂದು ಪ್ರಶ್ನಿಸಿದರು. ಈ ವೇಳೆ ಸಿ. ಅಶ್ವಥ್ ಅವರ ಕಾಣದ ಕಡಲಿಗೆ ಹಂಬಲಿಸಿದೆ ಮನ.. ಕಾಣಬಲ್ಲೆನೆ ಒಂದು ದಿನ.. ಸೇರಬಲ್ಲನೇ ಎಂಬ ಗೀತೆಯನ್ನು ನೆನಪಿಸಿಕೊಂಡು ಈಗ ಡಿಕೆ ಶಿವಕುಮಾರ್ ಅವರು ಕಾಣದ ಕುರ್ಚಿಗೆ ಹಂಬಲಿಸಿದೇ ಮನ.. ಕೂರಬಲ್ಲನೇ ಒಂದು ದಿನ ಎಂದು ಹೇಳುತ್ತಿದ್ದಾರೆ ಎಂದ ಸುನಿಲ್ ಕುಮಾರ್ ನಿಜವಾಗಿ ವಿರೋಧ ಪಕ್ಷದ ಬಗ್ಗೆ ನಯ ವಿನಯ ಶುರುವಾಯ್ತ ಎಂದು ಹಾಸ್ಯಾತ್ಮಕವಾಗಿ ಪ್ರಶ್ನಿಸುತ್ತಾ ನಿಮ್ಮನಾಯಕತ್ವವನ್ನು ನಾವು ಒಪ್ಪುತ್ತೇವೆ ಎಂದು ಡಿಕೆಶಿಯನ್ನು ಕಾಲೆಳೆದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ.) ಕ್ಷೇತ್ರ ಸಮಿತಿ ಬೆಳ್ತಂಗಡಿ ವತಿಯಿಂದ “ಆಟಿದ ಕಮ್ಮೆನ ಬೊಕ್ಕಗೊಬ್ಬು”

ಟಾಪ್ ಸುದ್ದಿಗಳು, ವಿದೇಶ

ಟೋಕಿಯೋ : ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಭೀಕರ ಸುನಾಮಿ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : ಖಾಸಗಿ ಬಸ್ – ಬೈಕ್ ಮಧ್ಯೆ ಅಪಘಾತ; ಪತಿ ಸಾವು, ಪತ್ನಿಗೆ ಗಂಭೀರ

⚠️ Contents are protected on this website.