ಧರ್ಮಸ್ಥಳ ಪ್ರಕರಣದ ತನಿಖೆ ಪೂರ್ಣಗೊಳಿಸಲು ಎಸ್‌ಐಟಿ’ಗೆ ಕಾಲಮಿತಿ ವಿಧಿಸಿಲ್ಲ : ಪರಮೇಶ್ವರ್

ಚಿಕ್ಕಮಗಳೂರು, ಫೆ. 06 : ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ಕ್ಕೆ ತನಿಖೆ ಪೂರ್ಣಗೊಳಿಸಲು ಕಾಲಮಿತಿ ವಿಧಿಸಿಲ್ಲ. ಆದರೆ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಲು ತನಿಖೆಯ ಆರಂಭದಲ್ಲೇ ಸೂಚಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

Advertisement

ಚಿಕ್ಕಮಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ಅಂತಿಮ ವರದಿ ಇನ್ನೂ ಕೊಟ್ಟಿಲ್ಲ. ಅವರು ಎಲ್ಲೆಲ್ಲಿ ಸಾಕ್ಷಿ ಕಲೆ ಹಾಕಬೇಕಿತ್ತೋ ಅಲ್ಲಲ್ಲೇ ಹೋಗಿ ತನಿಖೆ ಮಾಡಿದ್ದಾರೆ. ಅವೆಲ್ಲವನ್ನು ಕ್ರೋಡೀಕರಿಸಿ ಶೀಘ್ರದಲ್ಲೇ ಅಂತಿಮ ವರದಿ ನೀಡುತ್ತಾರೆ. ಆಮೇಲೆ ವರದಿ ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.

ಪ್ರಕರಣದ ತನಿಖೆ ಯಾವಾಗ ಪೂರ್ಣಗೊಳ್ಳಲಿದೆ ಎಂದು ಕಾಲದ ಮಿತಿ ಹೇಳಲಾಗದು. ಸ್ಯಾಟ್ ಲೈಟ್ ಲಾಂಚ್ ಮಾಡುವುದಾದರೆ ಕಾಲ ಮಿತಿ ಹೇಳಬಹುದು. ಇದು ಆಗಲ್ಲ. ಆದಷ್ಟು ಬೇಗ ತನಿಖೆ ತಂಡ ಅಂತಿಮ ಸಿದ್ಧಪಡಿಸಿ ಸರಕಾರದ ಮುಂದಿಡುತ್ತಾರೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಗೃಹಸಚಿವರು ಸ್ಪಷ್ಟಪಡಿಸಿದರು.

Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಅರಣ್ಯದಂಚಿನ ಜನರಿಗೆ ಮೂಲಭೂತ ಸೌಕರ್ಯಕ್ಕೆ ಶಾಸಕ ಹರೀಶ್ ಪೂಂಜಾ ಮನವಿ

ಕರಾವಳಿ, ಟಾಪ್ ಸುದ್ದಿಗಳು

ಉಡುಪಿ : ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ವದಂತಿಗೆ ನಿಜವೇ ? – ಪ್ರಮೋದ್ ಮಧ್ವರಾಜ್ ಸ್ಪಷ್ಟನೆಯೇನು ನೋಡಿ

ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಎಕ್ಸೆಲ್ ಕಾಲೇಜು ರದ್ದು ಆದೇಶದ ಬಗ್ಗೆ ಗೊಂದಲ ಬೇಡ – ಆಡಳಿತ ಮಂಡಳಿ ಸ್ಪಷ್ಟನೆ

⚠️ Contents are protected on this website.