ಬೆಂಗಳೂರು, ಮೇ 28 : ಮನೆಯಲ್ಲೇ ಬೇಕಾದಷ್ಟು ಎಣ್ಣೆ ತಂದು ಸ್ನೇಹಿತರ ಜೊತೆ ಪಾರ್ಟಿ ಮಾಡೋಣ ಅನ್ನೋರ ಜೇಬಿಗೂ ಭಾರೀ ಕತ್ತರಿ ಬೀಳಲಿದೆ. ಯಾಕಂದ್ರೆ ಖಾಸಗಿ ಪಾರ್ಟಿಗಳಲ್ಲಿ ಮದ್ಯ ಸರಬರಾಜು ಮಾಡಲು ನೀಡಲಾಗುವ ತಾತ್ಕಾಲಿಕ ಮದ್ಯದ ಪರ್ಮಿಟ್ (CL-5 ಲೈಸೆನ್ಸ್) ಶುಲ್ಕವನ್ನು ಸರ್ಕಾರ ಹೆಚ್ಚಳ ಮಾಡಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಆರ್ಥಿಕ ಇಲಾಖೆಯ ಹೊಸ ನಿಯಮಗಳ ಪ್ರಕಾರ, ವಾಣಿಜ್ಯೇತರ ಮತ್ತು ವಾಣಿಜ್ಯ ಪಾರ್ಟಿಗಳ ಮದ್ಯದ ಪರ್ಮಿಟ್ ದರಗಳನ್ನ ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದ್ದು, ಈ ಕುರಿತು ಪ್ರಕಟಣೆ ಕೂಡ ಹೊರಡಿಸಲಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಹೌಸ್ ಪಾರ್ಟಿ ಮಾಡೋಕೆ ದಿನಕ್ಕೆ 11,500 ರೂ. ಇದ್ದ ಶುಲ್ಕವನ್ನು ಈಗ 20,000 ರೂ.ಗೆ ಹೆಚ್ಚಿಸಲಾಗಿದೆ. ಈ ಪರ್ಮಿಟ್ ಅನ್ನು ಕನಿಷ್ಠ 7 ದಿನಗಳ ಮುಂಚಿತವಾಗಿಯೇ ಪಡೆಯಬೇಕು ಅನ್ನುವ ನಿಯಮ ಕೂಡ ಇದೆ. ಅಲ್ಲದೇ ನಿಮಗೆ ತಕ್ಷಣ ಅಂದ್ರೆ 24 ಗಂಟೆಗಳ ಒಳಗೆ ಅನುಮತಿ ಬೇಕು ಅಂದ್ರೆ 40,000 ರೂ.ಪಾವತಿಸಬೇಕಾಗುತ್ತೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಮ್ಯೂಸಿಕ್ ಕನ್ಸರ್ಟ್, ಖಾಸಗಿ ಈವೆಂಟ್‌ಗಳು ಮತ್ತು ನ್ಯೂ ಇಯರ್ ಸೆಲೆಬ್ರೇಷನ್ ಸೇರಿದಂತೆ ಪಾರ್ಟಿಗಳಿಗೆ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಏರಿಸಲಾಗಿದ್ದು, ದಿನಕ್ಕೆ 75,000 ರೂ. ನಿಗದಿಪಡಿಸಲಾಗಿದೆ. ತುರ್ತು ಅನುಮತಿಗಾಗಿ ಪ್ರತಿದಿನಕ್ಕೆ 1.5 ಲಕ್ಷ ನೀಡಿ ಪರ್ಮಿಶನ್ ಪಡೆಯಬೇಕಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಈ ಏರಿಕೆ ನಡುವೆ ಮನೆಯಲ್ಲಿ ಸಣ್ಣ ಸಣ್ಣ ಪಾರ್ಟಿ ಮಾಡುವವರಿಗೆ ಅಬಕಾರಿ ಇಲಾಖೆ ಒಂದು ವಿನಾಯಿತಿ ನೀಡಿದೆ. ಖಾಸಗಿ ಪಾರ್ಟಿಗಳಲ್ಲಿ 9 ಲೀಟರ್ ಮದ್ಯ ಮತ್ತು 18 ಲೀಟರ್ ಬಿಯರ್ ಅಥವಾ ವೈನ್ ಮಿತಿಯೊಳಗೆ ಮದ್ಯ ಬಳಸಲು ಯಾವುದೇ ರೀತಿಯ ಅಬಕಾರಿ ಲೈಸೆನ್ಸ್ ಅಗತ್ಯವಿಲ್ಲ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಇತ್ತೀಚಿಗೆ ರಾಜ್ಯ ಸರ್ಕಾರ ಕೆಲ ಮದ್ಯಗಳ ಬೆಲೆ ಇಳಿಕೆ ಮಾಡಿತ್ತು. ಮೈಲ್ಡ್ ಮತ್ತು ಲಾಗರ್ ಬಿಯರ್ ಗಳ ಬೆಲೆಗಳು 20-25 ಶೇಕಡಾ ಇಳಿಕೆಯಾಗಿದ್ದು, ಅಬಕಾರಿ ಇಲಾಖೆ ಬಿಯರ್ ಮತ್ತು ಸ್ಪಿರಿಟ್ಸ್ ಗಳಿಗೆ ‘ಆಲ್ಕೊಹಾಲ್ ಇನ್ ಬೇವರೇಜ್ (AiB) ನೀತಿಯಡಿ ಹೊಸ ದರಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ನೂತನ ಅಬಕಾರಿ ನೀತಿಯಿಂದ ಬಿಯರ್ ದರದಲ್ಲಿ ಶೇ 25 ರಷ್ಟು ಇಳಿಕೆ ಆಗಿದ್ದು, 5 ಶೇಕಡಾ ಆಲ್ಕೊಹಾಲ್ v/v (volume/volume) ಹೊಂದಿರುವ ಬಿಯರ್ ಗಳ ಗರಿಷ್ಠ ಚಿಲ್ಲರೆ ಬೆಲೆ (MRP) 20 ರಿಂದ 25 ಶೇಕಡಾ ಕಡಿಮೆಯಾಗಿದೆ. ಕಿಂಗ್ ಫಿಶರ್ ಪ್ರೀಮಿಯಂ ಮತ್ತು ಅಲ್ಟ್ರಾ 650 ಎಂಎಲ್ ಬಾಟಲಿಗಳ ಮೇಲೆ ಸುಮಾರು 75 ರೂ. ಇಳಿಕೆಯಾಗಿದ್ದರೆ, ಹೈನೆಕೆನ್ ಮೇಲೆ 70 ರೂ., ಯುಬಿ ಎಕ್ಸ್‌ಪೋರ್ಟ್ ಮೇಲೆ 25 ರೂ. ಹಾಗೂ ಬಡ್ ವೈಸರ್ ಪ್ರೀಮಿಯಂ ಮೇಲೆ 20 ರೂ.ಗಳವರೆಗೆ ಕಡಿಮೆ ಆಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ರಾಜ್ಯ ಸರ್ಕಾರ ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲಿಯೂ 20 ಶೇಕಡಾ ಇಳಿಕೆ ಮಾಡಿದೆ. 750 ಮಿ.ಲೀ ಬಾಟಲಿಯ ಬ್ಲಾಕ್ ಲೇಬಲ್ ಮತ್ತು ಚಿವಾಸ್ ರೀಗಲ್ ದರವು 5190 ರೂಪಾಯಿಗಳಿಂದ 4100 ರೂಪಾಯಿಗೆ ಇಳಿಕೆಯಾಗಿದೆ. ಇದ್ರಿಂದ ಶ್ರೀಮಂತ ಮದ್ಯ ಪ್ರಿಯರಿಗೂ ಖುಷಿ ವಿಚಾರವಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)

